More

    ತಾಯಿಯ ಶವವನ್ನು 10 ವರ್ಷ ಬಚ್ಚಿಟ್ಟಳು…! ಕಾರಣ ಕೇಳಿದರೆ ಮನ ಕಲುಕುತ್ತೆ…

    ಟೋಕಿಯೋ: ಬಡತನ ಜನರಿಗೆ ಏನೆಲ್ಲಾ ಮಾಡಿಸುತ್ತೆ ಅನ್ನೋದಕ್ಕೆ ಇದೊಂದು ಮನ ಕಲಕುವ ಉದಾಹರಣೆ. ತಾಯಿಯೊಂದಿಗೆ ಮುನಿಸಿಪಾಲಿಟಿಯ ಫ್ಲಾಟೊಂದರಲ್ಲಿ ವಾಸವಾಗಿದ್ದ ಜಪಾನೀ ಮಹಿಳೆ ಅವಳ ಸಾವಿನ ನಂತರ ತನ್ನ ತಲೆ ಮೇಲಿನ ಸೂರನ್ನೂ ಕಳೆದುಕೊಳ್ಳಬೇಕಾಗಬಹುದೆಂದು ವಿಚಿತ್ರ ಪರಿಹಾರವನ್ನು ಕಂಡುಕೊಂಡಳು. ಹತ್ತು ವರ್ಷದಿಂದ ತಾಯಿಯ ಶವವನ್ನು ಫ್ರೀಜರ್​ನಲ್ಲಿಟ್ಟು ಅದೇ ಮನೆಯಲ್ಲಿ ವಾಸಿಸುತ್ತಿದ್ದಳು!

    ಜಪಾನಿನ ಟೋಕಿಯೋ ನಗರದ ನಿವಾಸಿ ಯೂಮಿ ಯೊಶಿನೋ ಎಂಬ 48 ವರ್ಷದ ಮಹಿಳೆಯೇ ಈ ಕೆಲಸ ಮಾಡಿರುವುದು. ನಗರಪಾಲಿಕೆಯ ವಸತಿ ಸಮುಚ್ಛಯದಲ್ಲಿನ ಫ್ಲಾಟಿನಲ್ಲಿ ಯೊಶಿನೋ ತನ್ನ ಅಮ್ಮನ ಜೊತೆ ವಾಸವಾಗಿದ್ದಳು. ಅದೊಂದು ದಿನ ಅಮ್ಮ ಮೃತಪಟ್ಟಳು. ಆದರೆ ಫ್ಲಾಟಿನ ಬಾಡಿಗೆ ಒಪ್ಪಂದ ಅಮ್ಮನ ಹೆಸರಿನಲ್ಲಿ ಇದ್ದಿದ್ದರಿಂದ ಆಕೆ ಸತ್ತ ವಿಚಾರ ತಿಳಿದರೆ ತನ್ನನ್ನು ಮನೆಯಿಂದ ತೆರವುಗೊಳಿಸುತ್ತಾರೆ ಎಂದು ಯೊಶಿನೋ ಹೆದರಿದಳು. ಅದಕ್ಕಾಗಿ ಅಮ್ಮನ ಶವವನ್ನು ಫ್ರೀಜರ್​ನಲ್ಲಿಟ್ಟು ಕ್ಲಾಸೆಟ್ಟಿನಲ್ಲಿ ಬಚ್ಚಿಟ್ಟಳು ಎನ್ನಲಾಗಿದೆ.

    ಇದನ್ನೂ ಓದಿ: ತಾಯಿ ಇಲ್ಲದ ಮಗುವಿಗೆ ಕಿರಾತಕರಾದ ಬಂಧುಗಳು … ಹೀಗೂ ಇರ್ತಾರಾ ?!

    ಇತ್ತೀಚೆಗೆ ಯೊಶಿನೋ ಬಾಡಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ಬಲವಂತವಾಗಿ ಮನೆ ಖಾಲಿ ಮಾಡಿಸಿದರು. ಆ ನಂತರ ಮನೆಯನ್ನು ಕ್ಲೀನ್ ಮಾಡುತ್ತಿದ್ದ ವ್ಯಕ್ತಿಗೆ ಕ್ಲಾಸೆಟ್​ ಒಂದರಲ್ಲಿ ಹೆಣ ಇಟ್ಟಿದ್ದ ಫ್ರೀಜರ್ ಸಿಕ್ಕಿತು ಎನ್ನಲಾಗಿದೆ. ತನಿಖೆ ಆರಂಭಿಸಿದ ಪೊಲೀಸರು ಯೊಶಿನೋಳನ್ನು ಹೆಣವನ್ನು ಬಚ್ಚಿಟ್ಟ ಗುಮಾನಿ ಮೇಲೆ ಬಂಧಿಸಿದರು. ತನ್ನ ತಾಯಿ 10 ವರ್ಷಗಳ ಹಿಂದೆ ಸತ್ತಿದ್ದು, ಮನೆ ಖಾಲಿಮಾಡಬೇಕಾಗುವ ಭಯದಲ್ಲಿ ತಾನು ಆ ವಿಚಾರವನ್ನು ಗುಪ್ತವಾಗಿರಿಸಲು ಈ ರೀತಿ ಮಾಡಿದ್ದಾಗಿ ಯೊಶಿನೋ ಪೊಲೀಸರಿಗೆ ತಿಳಿಸಿದ್ದಾಳೆ.

    ಮರಣೋತ್ತರ ಪರೀಕ್ಷೆಯಿಂದ ಸಾಯುವ ವೇಳೆ ಮೃತಳ ವಯಸ್ಸು 60 ವರ್ಷವಾಗಿತ್ತು ಎಂದು ತಿಳಿದುಬಂದಿದೆ. ಆದರೆ ಸಾವು ಯಾವಾಗ ಮತ್ತು ಹೇಗೆ ಆಗಿದೆ ಎಂಬುದು ಇನ್ನೂ ತಿಳಿದಿಲ್ಲ. ತನಿಖೆ ಮುಂದುವರಿದಿದೆ. (ಏಜನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts