More

    ತಾಯಿ ಇಲ್ಲದ ಮಗುವಿಗೆ ಕಿರಾತಕರಾದ ಬಂಧುಗಳು … ಹೀಗೂ ಇರ್ತಾರಾ ?!

    ರಾಜ್ಸಮಂಡ್: ಏಳು ವರ್ಷದ ಹೆಣ್ಣುಮಗುವಿನ ಕೈಯಲ್ಲಿ ವಿಪರೀತ ಕೆಲಸ ಮಾಡಿಸುವುದಲ್ಲದೆ ಅಮಾನವೀಯ ಹಿಂಸೆ ನೀಡುತ್ತಿದ್ದ ದಂಪತಿಯನ್ನು ರಾಜಸ್ತಾನ ಪೊಲೀಸರು ಬಂಧಿಸಿದ್ದಾರೆ. ಅಸಹಜ ಕ್ರೌರ್ಯ ಮೆರೆದಿದ್ದ ಕಿರಾತಕರಿಂದ ಚೈಲ್ಡ್​ ಲೈನ್ ಎನ್​ಜಿಓ ಮಗುವನ್ನು ರಕ್ಷಿಸಿದೆ.

    ಮಗುವಿನ ತಾಯಿಯು ಕೆಲವು ವರ್ಷಗಳ ಹಿಂದೆ ಸಾವಪ್ಪಿದ್ದು, ತಂದೆಯು ಪುನರ್ವಿವಾಹ ಮಾಡಿಕೊಂಡು ಸೂರತ್​ಗೆ ಸ್ಥಳಾಂತರಗೊಂಡಿದ್ದಾನೆ. ಮಗುವು ಚಿಕ್ಕಪ್ಪ-ಚಿಕ್ಕಮ್ಮನ ಜೊತೆ ರಾಜ್ಸಮಂಡ್​ನ ಬಳಿಯ ಹಳ್ಳಿಯಲ್ಲಿ ವಾಸಿಸುತ್ತಿತ್ತು ಎನ್ನಲಾಗಿದೆ. ಇತ್ತೀಚೆಗೆ ಜಾಲತಾಣದಲ್ಲಿ ಮಗುವಿನ ಬಟ್ಟೆ ಬಿಚ್ಚಿ ಹಿಂಸೆ ನೀಡುತ್ತಿದ್ದ ವೀಡಿಯೋ ತುಣುಕೊಂದು ಪ್ರಸಾರವಾದಾಗ ಚೈಲ್ಡ್​ಲೈನ್ ಸಂಸ್ಥೆಯು ಮಗು ಇರುವ ಹಳ್ಳಿಯನ್ನು ಪತ್ತೆ ಹಚ್ಚಿದೆ. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಆ ಮಗುವಿಗೆ ಬಂಧುಗಳು ಸಣ್ಣಪುಟ್ಟ ತಪ್ಪುಗಳಿಗೆ ಬರೆ ಹಾಕಿ, ಸಿಗರೇಟಿನಿಂದ ಸುಟ್ಟು ನಿತ್ಯ ಹಿಂಸೆ ನೀಡುತ್ತಿದ್ದುದು ತಿಳಿದುಬಂದಿದೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿ, ಮಗುವನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.

    ಇದನ್ನೂ ಓದಿ: ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್

    ರಾಜಸ್ಮಂಡ್ ಬಾಲ ಕಲ್ಯಾಣ ಸಮಿತಿಯು ತನಿಖೆ ನಡೆಸಿದಾಗ, ಮಗುವಿಗೆ ಆಗಾಗ ಮನಬಂದಂತೆ ಹೊಡೆಯುವುದು, ಊಟ ಕೊಡದಿರುವುದು, ಕೈಕಾಲುಗಳ ಉಗುರುಗಳನ್ನು ಬುಡಸಮೇತ ಕಿತ್ತು ಹಾಕುವುದು, ಯೋನಿಯೊಳಕ್ಕೆ ಖಾರ ಪುಡಿ ಹಾಕುವುದು…. ಮುಂತಾಗಿ ಹಿಂಸೆ ನೀಡುತ್ತಿದ್ದುದು ತಿಳಿದುಬಂದಿದೆ. ಐಪಿಸಿ ಮತ್ತು ಪೋಕ್ಸೋ ಕಾನೂನಿನಡಿ ಕೇಸು ದಾಖಲಿಸಿ, ಮಧ್ಯವಯಸ್ಸಿನ ದಂಪತಿಯನ್ನು ಬಂಧಿಸಲಾಗಿದೆ ಎಂದು ರಾಜ್ಸಮಂಡ್ ಪೊಲೀಸ್ ವರಿಷ್ಠಾಧಿಕಾರಿ ಭುವನ್ ಯಾದವ್ ತಿಳಿಸಿದ್ದಾರೆ. ಮಗುವು ಚೈಲ್ಡ್​ಲೈನ್​ ಸಂಸ್ಥೆಯ ಆರೈಕೆಯಲ್ಲಿದ್ದು, ಸೂಕ್ತ ವೈದ್ಯಕೀಯ ಮತ್ತು ಕಾನೂನು ಸಹಾಯ ಒದಗಿಸಲಾಗುತ್ತಿದೆ ಎನ್ನಲಾಗಿದೆ.(ಏಜೆನ್ಸೀಸ್)

    ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತ ಕರೊನಾ ರೋಗಿ ವಾರಸುದಾರರಿಗೆ ₹ 5 ಲಕ್ಷ ಪರಿಹಾರ

    VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts