ಅಮೆರಿಕದಲ್ಲಿ ನೆಲಕ್ಕುರುಳಿತು ಗಾಂಧಿ ಪ್ರತಿಮೆ: ಮುಖ, ಪಾದ ತುಂಡರಿಸಿದ ದುಷ್ಕರ್ಮಿಗಳು

ಕ್ಯಾಲಿಫೋರ್ನಿಯಾ: ಇತ್ತ ಭಾರತದಲ್ಲಿ ಕೆಂಪುಕೋಟೆಯಿಂದ ರಾಷ್ಟ್ರಧ್ವಜವನ್ನು ಇಳಿಸಿ ಅವಮಾನ ಮಾಡಿದ್ದರೆ, ಅತ್ತ ಅಮೆರಿಕದಲ್ಲಿ ಸಾರ್ವಜನಿಕ ಪಾರ್ಕೊಂದರಲ್ಲಿದ್ದ ಅಹಿಂಸೆಯ ಪ್ರತಿಪಾದಕ ಗಾಂಧಿ ಪ್ರತಿಮೆಯನ್ನು ಹಾಳುಗೆಡವಿರುವ ಘಟನೆ ನಡೆದಿದೆ. ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್​ನಲ್ಲಿ ಗಾಂಧೀಜಿಯ ಆರು ಅಡಿ ಎತ್ತರದ 294 ಕೆಜಿ ತೂಕದ ಬ್ರಾಂಜ್ ಪ್ರತಿಮೆಯಿತ್ತು. ಜನವರಿ 27 ರ ಬೆಳಗಿನ ಜಾವ ಪ್ರತಿಮೆಯ ಅರ್ಧ ಮುಖವನ್ನು ಮತ್ತು ಪಾದಗಳನ್ನು ಕತ್ತರಿಸಿ ತೆಗೆದಿದ್ದು, ಪ್ರತಿಮೆಯನ್ನು ನೆಲಕ್ಕುರುಳಿಸಿರುವುದು ಕಂಡುಬಂತು. ಈ ಹೇಯ ಕೃತ್ಯಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಹುಡುಕಲು … Continue reading ಅಮೆರಿಕದಲ್ಲಿ ನೆಲಕ್ಕುರುಳಿತು ಗಾಂಧಿ ಪ್ರತಿಮೆ: ಮುಖ, ಪಾದ ತುಂಡರಿಸಿದ ದುಷ್ಕರ್ಮಿಗಳು