

ಮಧ್ಯಪ್ರದೇಶ: ಭೋಪಾಲ್‌ನ AIIMS ಆಸ್ಪತ್ರೆಯ ವೈದ್ಯರು ರೋಗಿ ಎಚ್ಚರವಾಗಿದ್ದಾಗಲೇ ವಿಶಿಷ್ಟವಾದ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಈ ಸುದ್ದಿ ಸಖತ್ ವೈರಲ್ ಆಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಬಿಹಾರದ ಬಕ್ಸಾರ್‌ನ 28 ವರ್ಷದ ವ್ಯಕ್ತಿಯೊಬ್ಬ ಭೋಪಾಲ್‌ನ ಏಮ್ಸ್ ಆಸ್ಪತ್ರೆಯ ವೈದ್ಯರು ಹೋಗಿದ್ದಾರೆ. ವೈದ್ಯರು ಪರಿಶೀಲನೆ ನಡೆಸಿದ ಬ್ರೈನ್ ಟ್ಯೂಮರ್ ಇರೋದು ಪತ್ತೆಯಾಗಿದೆ. ವೈದ್ಯರು ಎಚ್ಚರಿಕೆಯಿಂದ ಮಿದುಳಿನ ಶಸ್ತ್ರಚಿಕಿತ್ಸೆಯನ್ನು ಮಾಡಲು ನಿರ್ಧರಿಸಿದರು. ಅದರಂತೆ ವೈದ್ಯರ ತಂಡ ಯಶಸ್ವೀಯಾಗಿ ಸರ್ಜರಿ ಮಾಡಿದೆ. ಆದರೆ ಈ ಸರ್ಜರಿಯಲ್ಲಿ ಒಂದು ವಿಶೇಷವಾಗಿದೆ.
ಮೆದುಳಿನ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿ ಎಚ್ಚರವಾಗಿಯೇ ಇದ್ದರು. ಪಿಯಾನೋ ನುಡಿಸುತ್ತಿದ್ದರು ಮತ್ತು ಹನುಮಾನ್ ಚಾಲೀಸಾ ಪಠಿಸುತ್ತಿದ್ದರು. ಸಂಪೂರ್ಣ ಸರ್ಜರಿ ನಡೆಸುವಾಗ ವ್ಯಕ್ತಿಯಲ್ಲಿ ಯಾವುದೇ ಒತ್ತಡ ಉಂಟಾಗಲ್ಲಿಲ್ಲ. ಏಕೆಂದರೆ ವೈದ್ಯರು ನಿರಂತರವಾಗಿ ಅವನೊಂದಿಗೆ ಮಾತನಾಡುತ್ತಿದ್ದರು. ಹೀಗಾಗಿ ವ್ಯಕ್ತಿ ಆರಾಮವಾಗಿ ದಿನಪತ್ರಿಕೆ ಓದುತ್ತಿದ್ದರು. ಪಿಯಾನೋ ಪ್ಲೇ ಮಾಡಿದ ಬಳಿಕ ಹನುಮಾನ್ ಚಾಲೀಸಾ ಪಠಿಸಿದರು ಎಂದು ತಿಳಿದುಬಂದಿದೆ. ಮೆದುಳಿನಿಂದ ಗೆಡ್ಡೆ ತೆಗೆದ ಕ್ಷಣದಲ್ಲೂ ಆ ವ್ಯಕ್ತಿ ಪಿಯಾನೋ ನುಡಿಸುತ್ತಿದ್ದ. ವೈದ್ಯರು ವ್ಯಕ್ತಿಯ ಮೆದುಳಿನಲ್ಲಿರುವ ಗಡ್ಡೆಯನ್ನು ತೆಗೆದು ಹಾಕಲು ಯಶಸ್ವಿ ಅವೇಕ್ ಕ್ರ್ಯಾನಿಯೊಟೊಮಿಯನ್ನು ನಡೆಸಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸರ್ಜರಿ ನಡೆಸಿದ ತಂಡದ ವೈದ್ಯರಾದ ನರಶಸ್ತ್ರಚಿಕಿತ್ಸೆಯ ಸಹಾಯಕ ಪ್ರಾಧ್ಯಾಪಕ ಡಾ. ಸುಮಿತ್ ರಾಜ್ ಮಾತನಾಡಿ, 'ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಸರ್ಜರಿಯಿಂದ ಯಾವುದೇ ತೊಂದರೆಯಾಗಿರುವುದು ತಿಳಿದುಬಂದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅನೇಕ ವೈದ್ಯರು ಎಚ್ಚರವಾಗಿದ್ದು ಮಾಡುವ ಸರ್ಜರಿ ವಿಧಾನವನ್ನು ಅಳವಡಿಸಿಕೊಳ್ಳುವುದರೊಂದಿಗೆ ಅವೇಕ್ ಕ್ರ್ಯಾನಿಯೊಟೊಮಿಗಳು ಸಾಕಷ್ಟು ಜನಪ್ರಿಯವಾಗಿವೆ' ಎಂದು ತಿಳಿಸಿದ್ದಾರೆ.
ಉತ್ತಮ ಫಲಿತಾಂಶಗಳ ಕಾರಣದಿಂದಾಗಿ, ಕಳೆದ ಕೆಲವು ವರ್ಷಗಳಲ್ಲಿ ಅನೇಕ ವೈದ್ಯರು ಈ ವಿಧಾನವನ್ನು ಅಳವಡಿಸಿಕೊಳ್ಳುವುದರೊಂದಿಗೆ ಅವೇಕ್ ಕ್ರ್ಯಾನಿಯೊಟೊಮಿಗಳು ಸಾಕಷ್ಟು ಜನಪ್ರಿಯವಾಗಿವೆ.