VIDEO: ಮೊದಲ ಬಾರಿಗೆ ಐಸ್​ಕ್ರೀಂ ತಿಂದ ಬೆಕ್ಕು : ವಿಡಿಯೋ ಆಯ್ತು ಭಾರಿ ವೈರಲ್​

cat
Published on

ನವದೆಹಲಿ: ತಮ್ಮ ನೆಚ್ಚಿನ ಸಾಕು ಪ್ರಾಣಿಗಳ ಜತೆ ಮೋಜು ಮಾಡುವುದು ಮಾಮೂಲು. ಅಂಥದ್ದೇ ಒಂದು ಮೋಜು ಮಾಡಿದ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.

ಅಮನ್​ ಎನ್ನುವವರು ತಮ್ಮ ಮುದ್ದಿನ ಬೆಕ್ಕಿಗೆ ಐಸ್​ಕ್ರೀಂ ತಿನ್ನಿಸಿರುವ ದೃಶ್ಯವಿದು. 11 ಸೆಕೆಂಡುಗಳ ಈ ವಿಡಿಯೋವನ್ನು ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಇದನ್ನು ಅನೇಕ ಮಂದಿ ರೀಟ್ವೀಟ್​ ಮಾಡಿದ್ದಾರೆ.

ಐಸ್​ಕ್ರೀಂ ತಿನ್ನುವಾಗ ಎಂಥವರಿಗೆ ಆದರೂ ಮೈಯೆಲ್ಲಾ ಝಂ ಎನ್ನುವುದುಂಟು. ಅದರಲ್ಲಿಯೂ ಮೊದಲ ಬಾರಿಗೆ ಐಸ್​ಕ್ರೀಂ ಎಂದರೆ ಏನು ಎಂಬುದರ ಅರಿವೇ ಇಲ್ಲದ ವೇಳೆ ಅದನ್ನು ಬಾಯಿಗೆ ಇಟ್ಟರೆ ಅದರ ವಿಚಾರವೇ ಬೇರೆ. ಅಂಥದ್ದರಲ್ಲಿ ಬೆಕ್ಕಿಗೆ ಐಸ್​ಕ್ರೀಂ ನೀಡಿದರೆ ಹೇಗಿರುತ್ತೆ?

ಇಂಥದ್ದೇ ಯೋಚನೆ ಅಮನ್​ಗೆ ಬಂದಿತಂತೆ. ಅದನ್ನು ತಮ್ಮ ಬೆಕ್ಕಿನ ಮೇಲೆ ಪ್ರಯೋಗ ಮಾಡುವ ಮನಸ್ಸಾಗಿ, ಚಿಕ್ಕ ಚಮಚದಲ್ಲಿ ಬೆಕ್ಕಿನ ಬಾಯಿಗೆ ಐಸ್​ಕ್ರೀಂ ಇಟ್ಟಿದ್ದಾರೆ. ಮೊದಮೊದಲು ಅದನ್ನು ಬಾಯಿಗೆ ಚೆನ್ನಾಗಿ ಹಾಕಿಕೊಂಡ ಬೆಕ್ಕಿಗೆ ಮೈಯೆಲ್ಲಾ ಝುಂ ಎನಿಸಿ, ಬಿದ್ದುಹೋಯಿತು.

ಈ ವಿಡಿಯೋ ಒಮ್ಮೆ ನೋಡಿದಾಗ ನೋಡುಗರಿಗೆ ಖುಷಿ ಕೊಟ್ಟರೂ ಬೆಕ್ಕಿನ ಸ್ಥಿತಿ ಕಂಡು ಕೆಲವರು ಅದರ ವಿರುದ್ಧ ಕೂಡ ಕಮೆಂಟ್​ ಮಾಡಿದ್ದಾರೆ. ಇದೊಂದು ಕ್ರೂರ ಕೃತ್ಯವಾಗಿದೆ ಎಂದು ಕೆಲವರು ಟೀಕಿಸಿದ್ದರೆ, ಐಸ್​ಕ್ರೀಂ ತಿಂದು ಬೆಕ್ಕಿನ ಸ್ಥಿತಿ ಹೇಗಾಗಿರಬೇಡ? ಅದರ ಆರೋಗ್ಯ ಹದಗೆಟ್ಟರೆ ಅದಕ್ಕೆ ಯಾರು ಹೊಣೆ ಎಂಬುದಾಗಿಯೂ ಬೈದು ಬರೆದಿದ್ದಾರೆ.

ಆದರೆ 11 ಸೆಕೆಂಡುಗಳ ಈ ವಿಡಿಯೋ ಮಾತ್ರ ಕ್ಷಣ ಕ್ಷಣಕ್ಕೂ ಶೇರ್​ ಆಗುತ್ತಲೇ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net