ಓನರ್​ ಹೆಂಡತಿ ಬಳಿ ಸೆಕ್ಸ್​ ಕೇಳಿದ ಯುವಕ! ಒಪ್ಪದ ಮಹಿಳೆಯ ಜೀವನವೇ ಅಂತ್ಯ

OWER
Published on

ಮುಂಬೈ: ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಕೊಟ್ಟಿದ್ದ ಅಂಗಡಿ ಮಾಲೀಕನ ಹೆಂಡತಿಯ ಬಳಿಯೇ ಸೆಕ್ಸ್​ ಕೇಳಿ, ನಂತರ ಆಕೆಯನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಆರೋಪಿ ಪೊಲೀಸರ ವಶವಾಗಿದ್ದಾನೆ.

ಥಾಣೆಯ ಡೊಂಬಿವ್ಲಿಯಲ್ಲಿರುವ ದಿನಸಿ ಅಂಗಡಿಯಲ್ಲಿ ಗುಡ್ಡು ಕುಮಾರ್​ ಅಲಿಯಾಸ್​ ರಂಜನ್​ (20) ಹೆಸರಿನ ಯುವಕ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಅಂಗಡಿಯ ಮಾಲೀಕ ರಂಜನ್​ಗೆ ಭಾನುವಾರದಂದು ತನ್ನ ಮನೆಗೆ ರಾತ್ರಿಯ ಊಟಕ್ಕೆ ಆಹ್ವಾನಿಸಿದ್ದಾನೆ. ಅದರಂತೆ ಆತ ಸಂಜೆ ಸಮಯಕ್ಕೆ ಮಾಲೀಕನ ಮನೆಗೆ ಹೋಗಿದ್ದಾನೆ. ಮನೆಯಲ್ಲಿ ಮಾಲೀಕ ಮತ್ತು ಆತನ ಹೆಂಡತಿ ಮದ್ಯ ಸೇವಿಸುತ್ತಾ ರಂಜನ್​ ಜತೆ ಮಾತುಕತೆ ನಡೆಸಲಾರಂಭಿಸಿದ್ದಾರೆ. ಅಷ್ಟರಲ್ಲಿ ಮಾಲೀಕನಿಗೆ ತುರ್ತು ಕರೆಯೊಂದು ಬಂದಿದ್ದು, ಆತ ಮನೆಯಿಂದ ಹೊರ ಹೋಗಿದ್ದಾನೆ.

ಮಾಲೀಕ ಇಲ್ಲದ ಸಮಯದ ದುರುಪಯೋಗ ಮಾಡಿಕೊಳ್ಳು ಯೋಚಿಸಿದ ರಂಜನ್​, ಆತನ ಹೆಂಡತಿಯ ಬಳಿ ಸೆಕ್ಸ್ ಮಾಡುವ ಆಸೆಯನ್ನು ತೋಡಿಕೊಂಡಿದ್ದಾನೆ. ಅದರಿಂದ ಸಿಟ್ಟಿಗೆದ್ದ ಮಹಿಳೆ, ಈ ವಿಚಾರವನ್ನು ಅವರ ಅಂಗಡಿ ಮಾಲೀಕನಿಗೆ ತಿಳಿಸುವುದಾಗಿ ಹೇಳಿದ್ದಾಳೆ. ಅದನ್ನು ಕೇಳಿದೊಡನೆ ರಂಜನ್​ ಗಾಬರಿಗೊಂಡಿದ್ದು, ಮಹಿಳೆಯ ಬಾಯಿ ಮುಚ್ಚಿಸುವುದು ಹೇಗೆ ಎಂದು ಯೋಚಿಸಲಾರಂಭಿಸಿದ್ದಾನೆ. ಮನೆಯಲ್ಲಿದ್ದ ಚಾಕುವಿನಿಂದ ಆಕೆಯ ಕೊಲೆಯನ್ನೇ ಮಾಡಿಬಿಟ್ಟಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.

ತುರ್ತು ಕೆಲಸ ಮುಗಿಸಿ ಮನೆಗೆ ಬಂದ ಮಾಲೀಕನಿಗೆ, ಹೆಂಡತಿ ಸತ್ತು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆತ ಮನ್ಪಾಡಾ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಮನೆಗೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ರಂಜನ್​ಗಾಗಿ ಬಲೆ ಬೀಸಿದ್ದಾರೆ. ಹತ್ತಿರದ ಕೊಳಗೇರಿಯೊಂದರಲ್ಲಿ ಆತ ಅಡಗಿದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಆತ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net