ಪತ್ನಿಯ ಅನಗತ್ಯ ಖರ್ಚಿನಿಂದ ಬೇಸತ್ತ ಪತಿ; ಸ್ನೇಹಿತನಿಗೆ ಹೇಳಿ ಆಕೆಯ ಕಥೆ ಮುಗಿಸಿದ

Durgavathi Hemanth
Published on

ಭೋಪಾಲ್​: ತನ್ನ ಪತ್ನಿ ಮಾಡುವ ಖರ್ಚಿನಿಂದ ಬೇಸತ್ತು ವ್ಯಕ್ತಿಯೋರ್ವ ತನ್ನ ಸ್ನೇಹಿತನಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯಾರ್​ನಲ್ಲಿ ನಡೆದಿದೆ. ಆರಂಭದಲ್ಲಿ ಇದು ರಸ್ತೆ ಅಪಘಾತ ಎಂದು ಬಿಂಬಿಸಲಾಗಿತ್ತು. ಆದರೆ, ಪೊಲೀಸರು ಆಳವಾಗಿ ತನಿಖೆ ನಡೆಸಿದ ಪರಿಣಾಮ ಇದು ಕೊಲೆ ಎಂದು ಸಾಬೀತಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮಹಿಳೆಯ ಪತಿ ಹೇಮಂತ್​ ಶರ್ಮ ತನ್ನ ಪತ್ನಿ ಮಾಡುತ್ತಿದ್ದ ಖರ್ಚಿನಿಂದ ಬೇಸತ್ತು ಈ ರೀತಿ ಮಾಡಿಸಿದ್ದಾಗಿ ಹೇಳಿದ್ದಾನೆ. ತನ್ನ ಸ್ನೇಹಿತನಿಗೆ 2.5 ಲಕ್ಷ ರೂಪಾಯಿಗಳ ಸುಪಾರಿ ನೀಡಿದ್ದರು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆಗಸ್ಟ್​ 13ರಂದು ಹಾಕಿಕೊಂಡ ಪ್ಲ್ಯಾನ್​ನಂತೆ ದೇವಸ್ಥಾನಕ್ಕೆ ತನ್ನ ಪತ್ನಿ ದುರ್ಗವತಿ ಹಾಗೂ ಸಹೋದರ ಸಂದೇಶ್​ನನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ದೇವರ ದರ್ಶನ ಮುಗಿದಸಿ ವಾಪಸ್​ ಆಗುತ್ತಿದ್ದ ವೇಳೆ ಹಾಕಿಕೊಂಡಿದ್ದ ಪ್ಲ್ಯಾನ್​ನಂತೆ ಹೇಮಂತ್​ನ ಸ್ನೇಹಿತ ದುರ್ಗವತಿ ಪ್ರಯಾಣಿಸುತ್ತಿದ್ದ ಬೈಕ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ದುರ್ಗವತಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೊದಲಿಗೆ ಮಹಿಳೆಯ ಪತಿ ಹೇಮಂತ್​ ಶರ್ಮ ಇದನ್ನು ಹಿಟ್​ ಆ್ಯಂಡ್​ ರನ್​ ಏಂದು ಆರೋಪಿಸಿದ್ದ. ಪ್ರಕರಣ ದಾಕಲಿಸಿಕೊಂಡು ತನಿಖೆ ನಡೆಸಿದ ಅಧಿಕಾರಿಗಳು ಘಟನೆ ನಡೆದ ಸ್ಥಳದ ಸುತ್ತ ಅಳವಡಿಸಲಾಗಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಶರ್ಮ ಹೇಳಿದ ರೀತಿ ಯಾವುದೇ ವಾಹನ ಕಂಡು ಬಂದಿಲ್ಲ. ಅಧಿಕಾರಿಗಳು ಮತ್ತಷ್ಟು ಆಳಕ್ಕೆ ಇಳಿದು ತನಿಖೆ ಮಾಡಿದಾಗ ಇದು ಕೊಲೆ ಎಂದು ಕಂಡು ಬಂತು. ಶರ್ಮನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ವಿಪರೀತ ಖರ್ಚು ಮಾಡಿಸುತ್ತಿದ್ದಳು ಎಂಬ ಕಾರಣಕ್ಕಾಗಿ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ನಡೆಯುತ್ತಿದ್ದು, ತಲೆಮಾರಿಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗೆ ಹುಡುಕಾಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net