

ನವದೆಹಲಿ: ಈತ ತನ್ನ ಹಣೆಬರಹ ತಾನೇ ಬರೆಸಿಕೊಂಡಿದ್ದಾನೆ. ಆದರೆ ಇದೀಗ ಅದೇ ಕಾರಣಕ್ಕೆ ಈತ ಪಶ್ಚಾತ್ತಾಪ ಪಡುತ್ತಿದ್ದಾನಂತೆ. ಫುಟ್ಬಾಲ್ ಅದರಲ್ಲೂ ಲಿಯೊನೆಲ್ ಮೆಸ್ಸಿಯ ಭಯಂಕರ ಅಭಿಮಾನಿಯೊಬ್ಬನ ಕಥೆ ಇದು. ತನ್ನ ನೆಚ್ಚಿನ ಆಟಗಾರನ ಹೆಸರನ್ನೇ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಈತ ಅದಕ್ಕಾಗಿಯೇ ಪಶ್ಚಾತ್ತಾಪ ಪಡುತ್ತಿದ್ದಾನೆ.
ಫುಟ್ಬಾಲ್ ವಿಶ್ವಕಪ್ ಪಂದ್ಯದಲ್ಲಿ ಟ್ರೋಫಿ ಗೆದ್ದಿದ್ದ ಅರ್ಜೆಂಟೀನಾ ತಂಡದ ಲಿಯೊನೆಲ್ ಮೆಸ್ಸಿಯ ಭಾರಿ ಅಭಿಮಾನಿಯಾಗಿರುವ ಈತ ಆತನ ಹೆಸರನ್ನೇ ಹಣೆ ಮೇಲೆ ದೊಡ್ಡದಾಗಿ 'ಮೆಸ್ಸಿ' ಎಂದು ದೊಡ್ಡದಾಗಿ ಬರೆಸಿಕೊಂಡಿದ್ದಾನೆ. ಸ್ಪ್ಯಾನಿಷ್ ವ್ಯಕ್ತಿ ಮೈಕ್ ಜಾಂಬ್ಸ್ ಎಂಬಾತ ಇಂಥದ್ದೊಂದು ಹಚ್ಚೆ ಹಾಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಗಮನ ಸೆಳೆದಿದ್ದಾನೆ.
ಮೈಕ್ ಹಣೆ ಮೇಲೆ ಮೆಸ್ಸಿ ಎಂದು ಬರೆಸಿಕೊಂಡಿರುವುದರ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ. ಮೈಕ್ನ ಈ ಹಣೆಬರಹಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ. ಈ ರೀತಿ ಹಣೆಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಕ್ಕೆ ಆರಂಭದಲ್ಲಿ ನಾನು ಹೆಮ್ಮೆ ಪಡುತ್ತಿದ್ದೆ. ಆದರೆ ಈಗ ಇದಕ್ಕೆ ಬರುತ್ತಿರುವ ನೆಗೆಟಿವ್ ಕಮೆಂಟ್ಗಳನ್ನು ನೋಡಿ ಪಶ್ಚಾತ್ತಾಪ ಪಡುವಂತಾಗಿದೆ, ಕೆಲವರು ನನ್ನ ಈ ನಡೆ ಸಮಾಜಕ್ಕೆ ಉತ್ತಮ ಸಂದೇಶವಲ್ಲ ಎನ್ನುತ್ತಿದ್ದಾರೆ ಎಂದು ಮೈಕ್ ಹೇಳಿಕೊಂಡಿದ್ದಾನೆ. -ಏಜೆನ್ಸೀಸ್