More

    ಕ್ರಿಸ್​ಮಸ್​ ಉಡುಗೊರೆಯಾಗಿ ಪ್ರೇಯಸಿಯ ಡಿಎನ್​ಎ ಪರೀಕ್ಷೆ ಮಾಡಿಸಿದ ಬಾಯ್​ಫ್ರೆಂಡ್​ಗೆ ಕಾದಿತ್ತು ಶಾಕ್​!

    ನ್ಯೂಯಾರ್ಕ್​: ತನ್ನ ಪ್ರೇಯಸಿಗೆ ವಿಶೇಷ ಕ್ರಿಸ್​ಮಸ್​ ಉಡುಗೊರೆ ನೀಡಲು ಮುಂದಾದ ಯುವಕನೊಬ್ಬ ಪ್ರೇಯಸಿಯ ಡಿಎನ್​ಎ ಪರೀಕ್ಷೆ ಮಾಡಿಸಿದಾಗ 30 ವರ್ಷಗಳ ಕುಟುಂಬ ರಹಸ್ಯವೊಂದು ಬಯಲಾದ ಪ್ರಸಂಗ ಅಮೆರಿಕದಲ್ಲಿ ಜರುಗಿದೆ.

    ಹೆಸರೇಳಲು ಇಚ್ಛಿಸದ ಯುವಕ, ತನಗೆ ಎದುರಾದ ವಿಚಿತ್ರ ಸಂಗತಿಯನ್ನು ಅಮೆರಿಕದ ರೆಡ್ಡಿಟ್​ ಜಾಲತಾಣದ ರಿಲೇಶನ್​ಶಿಪ್​ ಸಲಹಾ ವೇದಿಕೆಯಲ್ಲಿ ಹಂಚಿಕೊಂಡಿದ್ದಾನೆ. ಯಾರಾದರೂ ಅಪರಿಚಿತರು ಏನಾದರೂ ಸಲಹೆ ನೀಡಬಹುದು ಎಂಬ ಉದ್ದೇಶದಿಂದ ನಡೆದ ಕತೆಯನ್ನು ವಿವರಿಸಿದ್ದಾನೆ.

    ಇದನ್ನೂ ಓದಿ: ಕೇರಳದ ಲತಿಕಾ ಮನೆಗೆ ಸುದೀಪ್ ಭೇಟಿ; 15 ವರ್ಷದ ಹಿಂದಿನ ‘ಆಟೋಗ್ರಾಫ್​’ ದಿನಗಳನ್ನು ನೆನೆದ ಕಿಚ್ಚ

    ತನ್ನ ಪ್ರೇಯಸಿಗಾಗಿ ಡಿಎನ್​ಎ ಟೆಸ್ಟಿಂಗ್​ ಕಿಟ್​ ಖರೀದಿಸಿದ ಯುವಕ, ಪ್ರೇಯಸಿಯ ತಂದೆ-ತಾಯಿಯ ಒಪ್ಪಿಗೆಯನ್ನು ಪಡೆದು ಡಿಎನ್​ಎ ಪರೀಕ್ಷೆ ಮಾಡಿಸಿದ್ದಾನೆ. ಇದರ ಬೆನ್ನಲ್ಲೇ ಕುಟುಂಬದ 30 ವರ್ಷಗಳ ರಹಸ್ಯವೊಂದು ಬೆಳಕಿಗೆ ಬಂದಿದೆ. ಡಿಎನ್​ಎ ಪರೀಕ್ಷಾ ವರದಿ ನೋಡಿದ ಪ್ರೇಯಸಿಗೆ ಆರಂಭದಲ್ಲಿ ಎಲ್ಲವೂ ಸರಿಯೆನಿಸಿದೆ. ಆದರೆ, ಕುಟುಂಬ ಸದಸ್ಯರ ಕಾಲಂ ಬಂದಾಗ ಅದರಲ್ಲಿ “ಹಾಫ್​ ಸಿಸ್ಟರ್​​” ಎಂದು ಬರೆದಿರುವುದನ್ನು ಆಕೆ ಗಮನಿಸಿದ್ದಾಳೆ.

    ಆದರೆ, ಪ್ರೇಯಸಿಗೆ ಯಾರು ಸಹ ಸಹೋದರಿಯರು ಇರಲಿಲ್ಲ. ಇದರಿಂದ ಅನುಮಾನಗೊಂಡ ಆಕೆ ಆ ಬಗ್ಗೆ ತಿಳಿದುಕೊಳ್ಳಲು ನಿರ್ಧರಿಸಿದ್ದಾಳೆ. ಬಳಿಕ ತನ್ನ ತಂದೆಯ ಹೆಸರನ್ನು ಹುಡುಕಾಡಿದಾಗ ಆಕೆ ಶಾಕ್​ ಆಗಿದ್ದಾಳೆ. ಇದರಿಂದ ಮತ್ತಷ್ಟು ಗೊಂದಲಕ್ಕೀಡಾದ ಆಕೆ ತನ್ನ ತಾಯಿಗೆ ಕರೆ ಮಾಡಿ, ನನಗೆ ಹಾಫ್​ ಸಿಸ್ಟರ್ ಯಾರಾದರು ಇದಾರೆಯೇ? ಎಂದು ಪ್ರಶ್ನಿಸಿದ್ದಾಳೆ. ಖಂಡಿತಾ ಯಾರು ಇಲ್ಲ.​ ಹೀಗ್ಯಾಕೆ ಪ್ರಶ್ನಿಸುತ್ತಿದ್ದೀಯಾ ಎಂದು ತಾಯಿ ಕೇಳಿದ್ದಾರೆ. ನಿನಗೆ ಜಾನ್​ ಸ್ಮಿತ್​ ಯಾರೆಂದು ತಿಳಿದಿದಿಯಾ ಎಂದು ಮಗಳು ಪ್ರಶ್ನಿಸಿದಾಗ ತಾಯಿ ಒಂದು ಕ್ಷಣ ಸಂಪೂರ್ಣ ಮೌನವಾಗಿದ್ದಾಳೆ.

    ಇದನ್ನೂ ಓದಿ: ಕೊಲೆಯಾದವನ ಗುರುತು ಪತ್ತೆಹಚ್ಚಿದ ಮದ್ಯದ ಬಾಟಲಿ ಲೇಬಲ್ ; ಅಕ್ರಮ ಸಂಬಂಧಕ್ಕಾಗಿ ಗಂಡನನ್ನೇ ಕೊಲೆ ಮಾಡಿಸಿದ ಪತ್ನಿ

    ಬಳಿಕ ಡಿಎನ್​ಎ ಪರೀಕ್ಷಾ ಫಲಿತಾಂಶವನ್ನು ತಾಯಿಯ ಮುಂದೆ ವಿವರಿಸಿದ್ದಾಳೆ. ಡಿಎನ್​ಎಯಲ್ಲಿ ಹಾಫ್​ ಸಿಸ್ಟರ್ ಎಂದು​ ಇರುವುದಾಗಿಯೂ ಮತ್ತು ತಂದೆಯ ಹೆಸರು ಜಾನ್​ ಸ್ಮಿತ್​ ಎಂತಲೂ ತಿಳಿಸಿದ್ದಾಳೆ. ನಿನ್ನ ತಂದೆಗೆ ಏನು ಹೇಳುವುದಿಲ್ಲ ಅಂದರೆ ಸತ್ಯವೊಂದನ್ನು ಹೇಳುತ್ತೇನೆ ಎಂದಿದ್ದಾರೆ. ಮಗಳು ಮಾತು ಕೊಟ್ಟ ಬಳಿಕ 30 ವರ್ಷದ ಹಿಂದಿನ ರಹಸ್ಯವೊಂದುನ್ನು ತಾಯಿ ವಿವರಿಸಿದ್ದಾಳೆ.

    ಯುವಕನ ಪ್ರೇಯಸಿಯ ತಾಯಿ ಹಾಗೂ ತಂದೆ ವೀಕೆಂಡ್ ಸಮಯದಲ್ಲಿ ಆಗಾಗ ವಿರಾಮ ತೆಗೆದುಕೊಳ್ಳುತ್ತಿದ್ದರಂತೆ. ಆ ಸಮಯದಲ್ಲಿ ತಾಯಿ, ಮಾಜಿ ಗೆಳೆಯ ಜಾನ್​ ಸ್ಮಿತ್​ ಭೇಟಿಯಾಗುತ್ತಿದ್ದಳಂತೆ. ಕೆಲವು ದಿನಗಳನ್ನು ಆತನೊಂದಿಗೆ ಕಳೆದು ತಾಯಿ ಮರಳಿ ಗಂಡನ ಜತೆಯಾಗುತ್ತಿದ್ದಳಂತೆ. ಹೀಗಿರುವಾಗ ಒಮ್ಮೆ ಗರ್ಭಿಣಿಯಾಗಿರುವುದು ಆಕೆಗೆ ತಿಳಿಯುತ್ತದೆ. ಅಲ್ಲದೆ, ಗರ್ಭಕ್ಕೆ ಕಾರಣ ತನ್ನ ಪತಿಯಲ್ಲ ಎಂಬುದು ಸಹ ಆಕೆಗೆ ತಿಳಿಯುತ್ತದೆ. ಆದರೂ ತನ್ನ ರಹಸ್ಯವನ್ನು ತಿಳಿಸದೆ ಹಾಗೇ ಕಾಪಾಡಿಕೊಂಡು ಬಂದಿರುತ್ತಾಳೆ. ಇದೀಗ ಮಗಳೊಂದಿಗೆ ಯಾರಿಗೂ ಹೇಳಬೇಡ ಎಂದು ಹೇಳಿದ್ದು, ನನ್ನ ಪ್ರೇಯಸಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಏನಾದರೂ ಸಲಹೆ ನೀಡಿ ಎಂದು ಕೇಳಿದ್ದಾನೆ.

    ಇದನ್ನೂ ಓದಿ: ಪ್ರವಾಸಿ ಮಹಿಳೆಯನ್ನೇ ರೇಪ್​ ಮಾಡಿದ ಆಟೋ ಡ್ರೈವರ್​! ಪ್ರಕರಣ ದಾಖಲಾಗಿ 12 ಗಂಟೆಗಳಲ್ಲೇ ಆರೋಪಿ ಸೆರೆ

    ಇದಕ್ಕೆ ರೆಡಿಟ್​ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅನೇಕರು ಇದು ನಿನ್ನ ತಪ್ಪಲ್ಲ. ರಹಸ್ಯವನ್ನು 30 ವರ್ಷಗಳ ಮುಚ್ಚಿಟ್ಟ ಮಗಳಿಗೆ ತಾಯಿ ಮೋಸ ಮಾಡಿದ್ದಾಳೆ. ನೀವು ಏನು ತಪ್ಪು ಮಾಡಿಲ್ಲ. ರಹಸ್ಯ ತಿಳಿದರೂ ನೀವು ನಿಮ್ಮ ಪ್ರೇಯಸಿಯ ಬೆಂಬಲಕ್ಕೆ ನಿಲ್ಲುತ್ತೀರಾ ಎಂದು ನಾನು ಭಾವಿಸಿದ್ದೇನೆಂದು ಅನೇಕ ನೆಟ್ಟಿಗರು ಸಲಹೆಯನ್ನು ನೀಡಿದ್ದಾರೆ. (ಏಜೆನ್ಸೀಸ್​)

    ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!

    ಟಿಂಡರ್​ನಲ್ಲಿ ಪರಿಚಯವಾದ ಯುವತಿಯನ್ನು ರೇಪ್​ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

    ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts