More

  ನನ್ನಿಂದ ಮೈಕ್ರೋಸಾಫ್ಟ್​ನಲ್ಲಿ ಜಾಬ್​ ಸಿಕ್ತು ಆದ್ರೆ ನಾನಿನ್ನೂ ನಿರುದ್ಯೋಗಿ! ಕೈಕೊಟ್ಟ ಯುವತಿ, ಕಣ್ಣೀರಿಟ್ಟ ಯುವಕ

  ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಲ್ಲಿನ ಬಿರುಕು ಮತ್ತು ಮೋಸ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಈ ಡಿಜಿಟಲ್ ಯುಗದಲ್ಲಂತೂ ನಿಷ್ಠಾವಂತ, ಕಾಳಜಿಯುಳ್ಳ ಮತ್ತು ಸಂಪೂರ್ಣ ಪ್ರೀತಿಸುವ ಸೂಕ್ತ ಪಾಲುದಾರನನ್ನು ಹುಡುಕುವುದೇ ತುಂಬಾ ಕಷ್ಟಕರವಾಗಿರುತ್ತದೆ.

  ನಿಜವಾದ ಪ್ರೀತಿ ಮತ್ತು ಬದ್ಧತೆಗಳು ಸಿನಿಮಾ, ನಾಟಕ ಮತ್ತು ಟಿವಿ ಸೀರಿಯಲ್​ಗಳಿಗೆ ಸೀಮಿತವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಯುವತಿಯೊಬ್ಬಳು ಪ್ರತಿಷ್ಠಿತ ಮೈಕ್ರೋಸಾಫ್ಟ್​ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ ಬಳಿಕ ಬಾಯ್​ಫ್ರೆಂಡ್​ಗೆ ಕೈಕೊಟ್ಟಿರುವ ಪ್ರಸಂಗ ಇದೀಗ ವರದಿಯಾಗಿದೆ. ಗಮನಾರ್ಹ ಸಂಗತಿ ಏನೆಂದರೆ, ಯುವತಿಯನ್ನು ಸಂದರ್ಶನಕ್ಕೆ ತಯಾರು ಮಾಡಿದ್ದು, ಪ್ರಾಜೆಕ್ಟ್​, ಡಿಎಸ್​ಎ ಮತ್ತು ಆಕೆಯ ರೆಸ್ಯೂಮ್ ವಿನ್ಯಾಸ ಮಾಡಲು ಯುವಕ ನೆರವು ನೀಡಿದ್ದ.​

  ಸಂತ್ರಸ್ತ ಯುವಕ ತನ್ನ ಫ್ರೆಂಡ್​ ಜತೆ ಮಾಡಿರುವ ವಾಟ್ಸ್​ಆ್ಯಪ್​ ಚಾಟ್ ಸ್ಕ್ರೀನ್​ಶಾಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಪ್ರೇಮಿಗಳ ದಿನದ ಪ್ಲ್ಯಾನ್​ ಏನು ಎಂದು ಫ್ರೆಂಡ್​ ಕೇಳಿದಾಗ ಸಂತ್ರಸ್ತ ಯುವಕ ತನ್ನ ನೋವನ್ನು ಬಿಚ್ಚಿಟ್ಟಿದ್ದಾನೆ.

  ಪ್ಲ್ಯಾನ್​ ಏನು ಇಲ್ಲ ಬ್ರೋ…ಆಕೆ ಮುಂದುವರಿಯಲು ಬಯಸಿಲ್ಲ. ಆಕೆಯನ್ನು ನಾನು ಸಂದರ್ಶನಗಳಿಗೆ, ಡಿಎಸ್​ಎ ಮತ್ತು ಪ್ರಾಜೆಕ್ಟ್​ಗಳಿಗೆ ತಯಾರು ಮಾಡಿದೆ. ಅಷ್ಟೇ ಏಕೆ ಆಕೆಯ ರೆಸ್ಯೂಮ್​ ಸಹ ನಾನೇ ರೆಡಿ ಮಾಡಿದೆ. ನನ್ನ ನೆರವಿನಿಂದ ಆಕೆ ಮೈಕ್ರೋಸಾಫ್ಟ್​ನಲ್ಲಿ ಉದ್ಯೋಗ ಸಹ ಪಡೆದುಕೊಂಡಳು. ಆದರೆ, ಇಂದು ಮೈಕ್ರೋಸಾಫ್ಟ್​ನ ಉದ್ಯೋಗಿ ಜತೆ ಡೇಟಿಂಗ್​ಗೆ ಹೋಗಿದ್ದಾಳೆ. ನಾನು ಮಾತ್ರ ಇನ್ನೂ ನಿರುದ್ಯೋಗಿಯಾಗಿದ್ದೇನೆ ಎಂದು ಯುವಕ ಹೇಳಿದ್ದಾನೆ. ಅಲ್ಲದೆ, ಕೊನೆಯಲ್ಲಿ ಏಕಾಂಗಿಯಾಗೇ ಉಳಿಯಿರಿ ಬ್ರೋ ಎಂದು ಚಾಟ್​ ಕೊನೆಗೊಳಿಸಿದ್ದಾರೆ.

  Girl Cheating

  ಚಾಟ್​ನ ಸ್ಕ್ರೀನ್​ಶಾಟ್​ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ಸಾಕಷ್ಟು ಕಾಮೆಂಟ್​ಗಳ ಮೂಲಕ ಸಂತ್ರಸ್ತ ಯುವಕನಿಗೆ ಧೈರ್ಯ ತುಂಬುತ್ತಿದ್ದಾರೆ. (ಏಜೆನ್ಸೀಸ್​)

  ಹಗಲು-ರಾತ್ರಿ ದುಡಿದು ಪತ್ನಿಯ ಓದಿಗೆ ನೆರವು: ಸರ್ಕಾರಿ ಕೆಲಸ ಸಿಗುತ್ತಿದ್ದಂತೆ ಗಂಡನಿಗೆ ಬಿಗ್ ಶಾಕ್!​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts