ಪತ್ನಿಗಾಗಿ 7 ಕೋಟಿ ರೂ. ವೆಚ್ಚದ ದೇವಾಲಯ ನಿರ್ಮಿಸಿದ ಪತಿ!

Man fulfills wifes dream builds temple worth Rs 7 crore in Odishas Jajpur
Published on: 

ಒಡಿಶಾ: ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ಸ್ಮರಣಾರ್ಥ ಈ ಅದ್ಭುತ ಸ್ಮಾರಕ ನಿರ್ಮಿಸಿದ್ದಾನೆ. ಇದೀಗ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ಪತ್ನಿಗಾಗಿ 7 ಕೋಟಿ ವೆಚ್ಚದ ಸುಂದರ ದೇವಾಲಯವನ್ನು ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ನಿರ್ಮಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಪತ್ನಿಗಾಗಿ ದೇವಾಲಯವನ್ನು ನಿರ್ಮಿಸಿದ ವ್ಯಕ್ತಿ ಖೇತ್ರವಾಸಿ ಲೆಂಕ ಅವರೊಬ್ಬ ಉದ್ಯಮಿ. ಅವರ ಪತ್ನಿಯ ಹೆಸರು ಬೈಜಂತಿ. ಖೇತ್ರವಾಸಿ ಲೆಂಕಾ ಅವರು 1992ರಲ್ಲಿ ವಿವಾಹವಾದರು. ಅವರ ಪತ್ನಿ ಸಂತೋಷಿ ಮಾ ಭಕ್ತರಾಗಿದ್ದರು. ಹೀಗಾಗಿ ಈ ಜೋಡಿ ದೇವಾಲಯ ನಿರ್ಮಾಣ ಮಾಡಿದೆ.

'ಮದುವೆಯಾದ ನಂತರ ಗ್ರಾಮದಲ್ಲಿ ಸಂತೋಷಿ ಮಾತೆಯ ಚಿಕ್ಕ ದೇವಸ್ಥಾನವನ್ನು ನಿರ್ಮಿಸೋಣ ಎಂದುಕೊಂಡಿದ್ದೆವು. ಈ ಸಣ್ಣ ದೇವಾಲಯವು ತುಂಬಾ ದೊಡ್ಡದಾಗುತ್ತದೆ ಎಂದು ನಿವಾಸಿಗಳು ಯೋಚಿಸಿರಲಿಲ್ಲ. ಈ ದೇವಾಲಯವನ್ನು ನಿರ್ಮಿಸಿದ ನಂತರ ನನಗೂ ಸಂತೋಷವಾಗಿದೆ' ಎಂದು ಖೇತ್ರವಾಸಿ ಲೆಂಕ ಅವರು ಹೇಳಿದ್ದಾರೆ.

'2008ರಲ್ಲಿ ದೇವಾಲಯದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಈಗ ಈ ದೇವಾಲಯವು ಸಿದ್ಧವಾಗಿದೆ. ಈ ದೇವಾಲಯವನ್ನು ದಕ್ಷಿಣ ಭಾರತೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯ ನಿರ್ಮಿಸಲು ಎಲ್ಲಾ ಕುಶಲಕರ್ಮಿಗಳು ಚೆನ್ನೈನಿಂದ ಬಂದಿದ್ದರು. ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ದೇವಿಯ ಮೂರ್ತಿಯನ್ನು ಗ್ರಾಮ ಮಾತ್ರವಲ್ಲದೆ ದೇಶದಾದ್ಯಂತ ಜನರು ಪೂಜಿಸಿ ಸಂತೋಷಿ ಮಾತೆಯ ಆಶೀರ್ವಾದವನ್ನು ಪಡೆಯಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ' ಎಂದು ಬೈಜಂತಿ ಹೇಳುತ್ತಾರೆ.