73 ದಿನ ಪ್ರಯಾಣ; ಬೈಕ್​​ನಲ್ಲಿ ತೆರಳಿದ್ದ ಯಾತ್ರಿಕನೋರ್ವ ಮೆಕ್ಕಾ ತಲುಪಿದ ಕೂಡಲೇ ಮೃತ್ಯು

makka
Published on

ಮೆಕ್ಕಾ: 73 ದಿನ ಬೈಕ್​​ನಲ್ಲಿ ಪ್ರಯಾಣಿಸಿ ಜರ್ಮನಿಯಿಂದ ಮೆಕ್ಕಾಗೆ ತೆರಳಿದ್ದ ಸಿರಿಯಾ ಯಾತ್ರಿಕನೋರ್ವ ಮೆಕ್ಕಾವನ್ನು ತಲುಪಿದ ಕೂಡಲೇ ಮೃತಪಟ್ಟಿದ್ದಾನೆ.

ಗಾಝಿ ಜಸ್ಸಿಮ್ ಶೆಹಾದೆಹ್ (53) ಮೃತ. ಈತ ಜರ್ಮನಿಯಲ್ಲಿ ನೆಲೆಸಿದ್ದನು. ಬೈಕ್​ನಲ್ಲಿ ಪ್ರಯಾಣಿಸಿ 73 ದಿನಗಳ ನಂತರ ಮೆಕ್ಕಾದ ಗ್ರ್ಯಾಂಡ್ ಮಸೀದಿಗೆ ತಲುಪಿದ್ದನು.ಶೆಹಾದೆಹ್ ಸೋಶಿಯಲ್​​ ಮೀಡಿಯಾ ಮೂಲಕ ತಮ್ಮ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದರು. ಅವರ ಅನುಭವಗಳು ಮತ್ತು ಸವಾಲುಗಳನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದನು.

ಶೆಹಾದೆಹ್ ನಂಬಿಕೆ ಮತ್ತು ಭಕ್ತಿಯನ್ನು ವ್ಯಕ್ತಪಡಿಸಲು ಮೆಕ್ಕಾಗೆ ತನ್ನ ಯಾತ್ರೆಯನ್ನು ಪೂರ್ಣಗೊಳಿಸಲು ಬಯಸಿದ್ದನು. ಮೆಕ್ಕಾದ ಪವಿತ್ರ ಮಸೀದಿಗೆ ಹೋಗುವ ದಾರಿಯಲ್ಲಿ ಶೆಹಾದೆಹ್ ಸಾವನ್ನಪ್ಪಿದರು. ಅವರನ್ನು ದೊಡ್ಡ ಮಸೀದಿಯಲ್ಲಿ ಪ್ರಾರ್ಥಿಸಲಾಯಿತು, ನಂತರ ಅವರನ್ನು ಮೆಕ್ಕಾದಲ್ಲಿ ಸಮಾಧಿ ಮಾಡಲಾಯಿತು. ಶೆಹಾದೆಹ್ ನಿಧನದ ಬಗ್ಗೆ ಅನೇಕ ಜನರು ದುಃಖ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net