ಸಿನಿಮಾ

ಸಾಕಿದ ಮಾಲೀಕನ ದೇಹವನ್ನೇ ಕಿತ್ತು ತಿಂದ 40 ಮೊಸಳೆಗಳು

ಕಾಂಬೋಡಿಯಾ: 40 ಮೊಸಳೆಗಳು ಸೇರಿ 70 ವರ್ಷದ ವೃದ್ಧನನ್ನು ಕೊಂದು ತಿಂದಿರುವ ಘಟನೆ ಕಾಂಬೋಡಿಯಾದಲ್ಲಿ ನಡೆದಿದೆ.

ಲುವಾನ್ ನಾಮ್ ಮೃತ. ಮೊಸಳೆಗಳನ್ನು ಕೂಡಿ ಹಾಕುವ ಪಂಜರದ ಒಳಗೆ ಕಳಿಸುವ ಕೆಲಸ ಮಾಡಲಾಗುತ್ತಿತ್ತು. 40 ಮೊಸಳೆಗಳು ದಾಳಿ ಮಾಡಿ ವೃದ್ಧನ ದೇಹವನ್ನು ತುಂಡು-ತುಂಡಾಗಿ ಕಿತ್ತು ತಿಂದಿವೆ.

ನಡೆದಿದ್ದೇನು?: ಮೊಟ್ಟೆ ಇರಿಸಿದ್ದ ಮೊಸಳೆಯನ್ನು ಹೊರಗೆ ಕಳುಹಿಸಲು ವೃದ್ಧ ಲುವಾನ್ ನಾಮ್ ಕೋಲಿನಿಂದ ಬೆದರಿಸುತ್ತಿದ್ದ. ಈ ವೇಳೆ ಮೊಸಳೆ ಕೋಲನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ಎಳೆದಿದೆ. ವೃದ್ಧ ಕೋಲಿನ ಸಮೇತ ಮೊಸಳೆಗಳ ಇರುವಲ್ಲಿ ಬಿದ್ದಿದ್ದಾರೆ. ವೃದ್ಧನನ್ನು ಕೊಂದು ಮೊಸಳೆಗಳು ತಿಂದು ಹಾಕಿವೆ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಫೋಟೋದಲ್ಲಿರುವ ಚಿರತೆ ಪತ್ತೆಹಚ್ಚಬಲ್ಲರು!

ಲುವಾನ್ ಆಮ್ ಅವರ ಬಳಿ ಮೊಸಳೆ ಸಾಕಾಣಿಕೆ ಕೆಲಸವನ್ನು ಬಿಟ್ಟುಬಿಡುವಂತೆ ಕುಟುಂಬ ಅನೇಕ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿತ್ತು. ಆದರೆ ಲುವಾನ್ ಅದನ್ನು ಒಪ್ಪಿರಲಿಲ್ಲ. ಈಗ ಲುವಾನ್ ಅವರೇ ಮೊಸಳೆಗಳಿಗೆ ಬಲಿಯಾದ ಕಾರಣ ತಮ್ಮಲ್ಲಿನ ಎಲ್ಲ ಮೊಸಳೆಗಳನ್ನು ಮಾರಾಟ ಮಾಡಲು ಕುಟುಂಬ ಮುಂದಾಗಿದೆ.

ಅಂಕೋರ್ ವಾಟ್‌ನ ಪ್ರಸಿದ್ಧ ಅವಶೇಷಗಳ ಹೆಬ್ಬಾಗಿಲು ಸಿಯೆಮ್ ರೀಪ್ ಸುತ್ತಲೂ ಹಲವಾರು ಮೊಸಳೆ ಸಾಕಣೆ ಕೇಂದ್ರಗಳಿವೆ. ಮೊಸಳೆಗಳನ್ನು ಅವುಗಳ ಮೊಟ್ಟೆ, ಚರ್ಮ ಮತ್ತು ಮಾಂಸಕ್ಕಾಗಿ ಮತ್ತು ಅವುಗಳ ಮರಿಗಳ ವ್ಯಾಪಾರಕ್ಕಾಗಿ ಇರಿಸಲಾಗುತ್ತದೆ.

ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕನ ಮಗ ಜೇ ಕೋಟಕ್ ಜತೆಗೆ ಮಿಸ್ ಇಂಡಿಯಾ ಅದಿತಿ ಆರ್ಯ ನಿಶ್ಚಿತಾರ್ಥ

Latest Posts

ಲೈಫ್‌ಸ್ಟೈಲ್