ಸ್ಪೈಡರ್​ಮ್ಯಾನ್ ವೇಷ ಧರಿಸಿ ಜನನಿಬಿಡ ರಸ್ತೆಯಲ್ಲಿ ಬೈಕ್ ಸ್ಟಂಟ್; 15 ಸಾವಿರ ಫೈನ್ ಹಾಕಿದ ಪೊಲೀಸರು| Bike Stunt

Spider man
Published on

Bike Stunt: ಒಡಿಶಾದ ರೂರ್ಕೆಲಾದಲ್ಲಿ ಸ್ಪೈಡರ್ ಮ್ಯಾನ್ ವೇಷ ತೊಟ್ಟು ಜನನಿಬಿಡ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಸಂಚಾರ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರು ಬೈಕ್​ ವಶಪಡಿಸಿಕೊಂಡು,  ಸವಾರನಿಗೆ 15,000 ರೂ. ದಂಡ ಹಾಕಿದ್ದಾರೆ.

ಬುಧವಾರ (ಆಗಸ್ಟ್​ 20) ರೂರ್ಕೆಲಾದಲ್ಲಿ ಈ ಘಟನೆ ನೆಡೆದಿದ್ದು, ಸವಾರ ಸ್ಪೈಡರ್ ವೇಷ ತೊಟ್ಟು, ಹೆಲ್ಮೆಟ್ ಇಲ್ಲದೇ ಜನನಿಬಿಡ ರಸ್ತೆಯಲ್ಲಿ ಬೈಕ್​ನಲ್ಲಿ ಅತಿವೇಗವಾಗಿ ಚಾಲನೆ ಮಾಡಿ, ವ್ಹೀಲಿಂಗ್, ಸ್ಟಂಟ್ ಮಾಡಿದ್ದು, ಬೇರೆ ವಾಹನ ಚಾಲಕರು, ಪಾದಚಾರಿಗಳಿಗೆ ಅನಾನುಕೂಲ ಮಾಡಿತ್ತು. ಸದ್ಯ ವಿಡಿಯೋ ವೈರಲ್ ವೈರಲ್ ಆಗಿದೆ.

ವೈರಲ್ ವಿಡಿಯೋ ಬೆನ್ನಲ್ಲೇ ಬೈಕ್​ ಸವಾರರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿರುವ ಪೊಲೀಸರು. ಬೈಕ್​ ಸ್ಪೋಟಕ ಶಬ್ದ ಹೊಂದಿರುವ ಮಾರ್ಪಡಿಸಿದ ಸೈಲೆನ್ಸರ್ ಹೊಂದಿತ್ತು ಎನ್ನಲಾಗಿದೆ.

ಹೆಲ್ಮೆಟ್ ಧರಿಸದೆ ಮೋಟಾರ್ ಸೈಕಲ್ ಸವಾರಿ ಮಾಡಿದ, ವೇಗದ ಮಿತಿಯನ್ನು ಉಲ್ಲಂಘಿಸಿದ ಮತ್ತು ಮಾರ್ಪಡಿಸಿದ ಸೈಲೆನ್ಸರ್ ಬಳಸಿದ ಆರೋಪದ ಮೇಲೆ ಆ ವ್ಯಕ್ತಿಗೆ 15,000 ರೂ. ದಂಡ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net