More

  VIDEO | ರಾಮಲೀಲಾದಲ್ಲಿ ಹನುಮಂತನ ಪಾತ್ರ ಮಾಡುವಾಗ ಹಠಾತ್ ಹೃದಯಾಘಾತ! ವ್ಯಕ್ತಿ ಸಾವು

  ಭಿವಾನಿ: ರಾಮಲೀಲಾ ನಾಟಕದಲ್ಲಿ ಹನುಮಂತನ ಪಾತ್ರ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹಠಾತ್​ ಹೃದಯಾಘಾತದಿಂದ ವೇದಿಕೆಯಲ್ಲಿ ಸಾವನ್ನಪ್ಪಿದ ಘಟನೆ ಹರಿಯಾಣದ ಭಿವಾನಿಯಲ್ಲಿ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಂಬಂಧಿತ ಸಾವುಗಳ ಸಂಖ್ಯೆ ಕ್ರಮೇಣವಾಗಿ ಏರಿಕೆಯಾಗುತ್ತಿರುವುದು ಸದ್ಯ ಎಲ್ಲರಲ್ಲೂ ಭಾರೀ ಆತಂಕವನ್ನು ಸೃಷ್ಟಿ ಮಾಡುತ್ತಿದೆ. ಅದರಲ್ಲೂ ಯುವಜನತೆಯಲ್ಲಿ ಈ ಸಮಸ್ಯೆ ಅತೀ ಹೆಚ್ಚಾಗಿ ಕಂಡುಬರುತ್ತಿದೆ.

  ಇದನ್ನೂ ಓದಿ: ಮಾಳವಿಕಾ ಅವಿನಾಶ್​ ಸಿನಿಮಾ, ರಾಜಕೀಯದ ಒಳನೋಟ | ವಿಜಯವಾಣಿ ಡಿಜಿಟಲ್ | ಮಾಳವಿಕಾ ಅವಿನಾಶ್​ ಜತೆ ಫೇಸ್​ ಟು ಫೇಸ್

  ಘಟನೆಯ ವಿವರ: ಹರಿಯಾಣದ ಭಿವಾನಿಯಲ್ಲಿ ಇಂತಹದೊಂದು ದುರಂತ ಘಟನೆ ಬೆಳಕಿಗೆ ಬಂದಿದ್ದು, ವೇದಿಕೆಯ ಮೇಲೆ ರಾಮಲೀಲಾ ನಾಟಕದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ನೋಡ ನೋಡುತ್ತಿದ್ದಂತೆ ಹಠಾತ್​ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ದಿನದಂದೇ ಸಂಭವಿಸಿದೆ.

  ಮೃತರನ್ನು ಹರೀಶ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಕಳೆದ 25 ವರ್ಷಗಳಿಂದ ರಾಮಲೀಲಾದಲ್ಲಿ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದರು ಎಂದು ಹೇಳಲಾಗಿದೆ. ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ,(ಏಜೆನ್ಸೀಸ್).

  BBKS10: ಟಾಪ್‌ 3ರಲ್ಲಿ ಈ ಮೂವರು ಇರ್ತಾರೆ! ನಮ್ರತಾ ಸೂಚಿಸಿದ ಸ್ಪರ್ಧಿಗಳು ಇವರೆ ನೋಡಿ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts