More

    ಹಾಸನ | ಫೋನ್​ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಮೆಡಿಕಲ್ ಅಂಗಡಿ ಮಾಲೀಕ

    ಹಾಸನ: ಅಂಗಡಿ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರಿಗೆ ಹಠಾತ್ ಹೃದಯಾಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. 40 ವರ್ಷದ ವಿರೂಪಾಕ್ಷ ಹೃದಯಾಘಾತಕ್ಕೊಳಗಾದ ವ್ಯಕ್ತಿ. ಹೃದಯಾಘಾತಕ್ಕೆ ಒಳಗಾದ ಅಂತಿಮ ಕ್ಷಣ ಸಿಸಿಟಿವಿಯಲ್ಲಿ‌ ಸೆರೆಯಾಗಿದ್ದು, ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹೊಳೆನರಸೀಪುರ ಪಟ್ಟಣದ ಅರಣ್ಯ ಕಛೇರಿ ಬಳಿಯ ಅಂಗಡಿಯೊಂದರಲ್ಲಿ ಈ ಘಟನೆ ಸಂಭವಿಸಿದೆ. ವಿರೂಪಾಕ್ಷ ಅಂಗಡಿಯ ಮುಂಭಾಗದಲ್ಲಿ ಕುಳಿತುಕೊಂಡು ಮೊಬೈಲ್​ನಲ್ಲಿ ಫೋನ್ ಮಾಡುತ್ತಿದ್ದರು. ಈ ವೇಳೆ ಹೃದಯಾಘಾತಕ್ಕೊಳಗಾಗಿದ್ದು, ನೋಡು ನೋಡುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ.

    ಇದನ್ನೂ ಓದಿ: ಅರ್ಧ ಭಾಗ ತುಂಡಾದ ಸ್ಥಿತಿಯಲ್ಲಿ ಯುವತಿಯ ದೇಹ ಸಿಕ್ಕ ಪ್ರಕರಣ; ಆಕೆಯ ಪ್ರಿಯಕರನ ಬಂಧನದಿಂದ ಬಯಲಾಯ್ತು ಹತ್ಯೆಗೆ ಕಾರಣ…

    ಹೋಳೆನರಸೀಪುರದ ಕಾರ್ಯಾಲಯ ಬಡಾವಣೆಯ ನಿವಾಸಿ ವೀರೂಪಾಕ್ಷ ಮೆಡಿಕಲ್ ನಡೆಸುತ್ತಿದ್ದರು. ಜತೆಗೆ ಸಮಾಜಸೇವೆಯಲ್ಲಿಯೂ ಗುರುತಿಸಿಕೊಂಡಿದ್ದರು. ಹಠಾತ್ ಕುಸಿದು ಬೀಳುತ್ತಿದ್ದಂತೆ ಸ್ಥಳದಲ್ಲಿದ್ದವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts