ಕ್ಷಣಮಾತ್ರದಲ್ಲಿ ಪತ್ನಿಯ ಕಣ್ಣೆದುರೇ ಸಾವಿಗೀಡಾದ ಪತಿ; ಪತ್ನಿಗೆ ಗಂಭೀರ ಗಾಯ

Lightning
Published on

ಚಿಕ್ಕಬಳ್ಳಾಪುರ: ಪತ್ನಿಯ ಕಣ್ಣೆದುರೇ ಕ್ಷಣಮಾತ್ರದಲ್ಲಿ ಪತಿ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಮತ್ತೊಂದೆಡೆ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಬಾಗೇಪಲ್ಲಿ ತಾಲೂಕು ಕನಂಪಲ್ಲಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ವೆಂಕಟೇಶಪ್ಪ ಮತ್ತಾತನ ಪತ್ನಿ ಇಬ್ಬರೂ ಜೊತೆಯಾಗಿ ಕಟಂ ಬಂಡೆಯ ಬಣವೆ ಮೇಲಿದ್ದ ಬೀನ್ಸ್​ಗೆ ಹೊದಿಕೆ‌ ಹಾಕಲು ಹೋಗಿದ್ದರು. ಇದೇ ಸಂದರ್ಭದಲ್ಲಿ ಬಂದೆರಗಿದ ಸಿಡಿಲಿಗೆ ವೆಂಕಟೇಶಪ್ಪ ಬಲಿಯಾಗಿದ್ದಾರೆ.

ಸಿಡಿಲಿನ ಅಪ್ಪಳಿಸುವಿಕೆಗೆ ವೆಂಕಟೇಶಪ್ಪ ಸ್ಥಳದಲ್ಲೇ ಸಾವಿಗೀಡಾದರೆ, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಳೆಗೆ ಬೀನ್ಸ್ ಹಾಳಾಗಬಾರದು ಅಂತ ಟಾರ್ಪಲ್ ಹೊದಿಸಲು ಹೋದಾಗ ಈ ಅವಘಡ ಸಂಭವಿಸಿದೆ. ಸಿಡಿಲು ಬಡಿದು ಬೀನ್ಸ್ ರಾಶಿ ಸಹ ಬೆಂಕಿಗಾಹುತಿ ಆಗಿದೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net