More

    ಸ್ಟಾರ್ ಹೋಟೆಲ್​ನಲ್ಲಿ ಕಲರ್-ಕಲರ್ ಕಾಗೆ ಹಾರಿಸೋದೇ ಈತನ ಟ್ಯಾಲೆಂಟ್‌! ಹಣಕ್ಕಾಗಿ ಹೀಗಾ ಮಾಡೋದು?

    ಬೆಂಗಳೂರು: ಸ್ಟಾರ್​ ಹೋಟೆಲ್​ನಲ್ಲಿ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಈಗಾಗಲೇ ಒಂದು ಪ್ರಕರಣದ ಆರೋಪ ಹೊತ್ತಿದ್ದ ವ್ಯಕ್ತಿಯೇ ಇಂತಹ ವಂಚನೆ ಮಾಡಿರುವುದಾಗಿ ಹೇಳಲಾಗಿದೆ.

    ಇದನ್ನೂ ಓದಿ: ಮದುವೆಯಾದ ತಿಂಗಳಲ್ಲೇ ರೈಲಿನಿಂದ ಪತ್ನಿಯ ನೂಕಿ ಕೊಲೆ- ಮುಂಬೈನಲ್ಲಿ ಅಮಾನುಷ ಘಟನೆ

    ಸ್ವರೂಪ್​ ಹೆಸರಿನ ಆರೋಪಿ ಸ್ಟಾರ್​ ಹೋಟೆಲ್​ನಲ್ಲಿ ಕಿರಣ್​ ಹೆಸರಿನ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳುತ್ತಾನೆ. ನಂತರ ತಾನೊಂದು ಎಂಎನ್​ಸಿ ಕಂಪೆನಿ ಸಿಇಓ‌ ಎಂದು ಹೇಳಿಕೊಳ್ಳುತ್ತಾನೆ. ಕಿರಣ್​ನ ತಮ್ಮನಿಗೆ ಮೆರಿಡಿಯನ್ ಪ್ರೈಟ್ ಫಾರ್ವಡರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಆದರೆ ತಾನೊಬ್ಬ ಸ್ನೇಹಿತನಿಗೆ ಹಣ ಕೊಡುವುದಾಗಿ ಹೇಳಿದ್ದು, ಇದೀಗ ತನ್ನ ಬ್ಯಾಂಕ್​ ಖಾತೆಗಳು ಐಟಿ ರೇಡ್​ನಿಂದಾಗಿ ಫ್ರೀಜ್​ ಆಗಿರುವುದಾಗಿ ತಿಳಿಸುತ್ತಾನೆ. ನೀನು ನನ್ನ ಸ್ನೇಹಿತನ ಖಾತೆಗೆ 2.4 ಲಕ್ಷ ರೂಪಾಯಿ ಹಾಕು ಎಂದು ಹಾಕಿಸಿಕೊಂಡಿದ್ದಾನೆ.

    ಇದಾದ ನಂತರ ಮತ್ತೊಮ್ಮೆ ಕಿರಣ್​ನನ್ನು ಸಂಪರ್ಕಿಸಿದ ಸ್ವರೂಪ್​ ಮತ್ತೊಮ್ಮೆ 2.3 ಲಕ್ಷ ರೂಪಾಯಿಯನ್ನು ಅಕೌಂಟ್​ಗೆ ಹಾಕಿಸಿಕೊಂಡಿದ್ದಾನೆ. ಅದಾದ ಮೇಲೆ ಕಾಡುಗೋಡಿ ಬಸ್​ ನಿಲ್ದಾಣದ ಬಳಿ 9 ಲಕ್ಷ ನಗದನ್ನು ಪಡೆದಿದ್ದಾನೆ. ನನ್ನ ತಂದೆಗೆ ಹಾರ್ಟ್ ಅಟ್ಯಾಕ್, ಅರ್ಜೆಂಟಾಗಿ ಹಣ ಬೇಕು ಎಂದು 15 ಲಕ್ಷ ಪೀಕಿದ್ದಾನೆ. ಇದೇ ರೀತಿ ಒಟ್ಟು 28.70 ಲಕ್ಷ ಹಣವನ್ನು ಕಿರಣ್​ನಿಂದ ಪಡೆದುಕೊಂಡಿದ್ದಾನೆ. ಹಣ ಕೊಡದಿದ್ದರೆ ಕೆಲಸ ಕೊಡಿಸುವುದಿಲ್ಲ ಎಂದು ಬ್ಲಾಕ್​ಮೇಲ್​ ಮಾಡಿ ಹಣ ಪಡೆಯುತ್ತಿದ್ದ.

    ಇದನ್ನೂ ಓದಿ: ‘ಮುಂದಿನ ತಿಂಗಳು ಟಿಎಂಸಿಯ 50 ಶಾಸಕರು ಬಿಜೆಪಿ ಸೇರ್ಪಡೆ’ ಟಿಎಂಸಿಗೆ ಸವಾಲೆಸೆದ ಬಿಜೆಪಿ ನಾಯಕ

    ಇಷ್ಟೆಲ್ಲ ಹಣ ಕೊಟ್ಟ ಮೇಲೂ ಕೆಲಸ ಕೊಡಿಸುವುದು ಖಾತ್ರಿಯಾಗದ ಹಿನ್ನೆಲೆಯಲ್ಲಿ ಕಿರಣ್​​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ. ಇದೀಗ ಕಾಡುಗೋಡಿ ಪೊಲೀಸ್​ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ ಈ ಹಿಂದೆ ಹಾವೇರಿ ಮೂಲದ ಅರ್ಷದ್ ಎಂಬ ಹುಡುಗನನ್ನು ಅಕ್ರಮ ಬಂಧನದಲ್ಲಿರಿಸಿಕೊಂಡು 48 ಲಕ್ಷ ಪಡೆದಿದ್ದ ಎನ್ನುವ ಆರೋಪವಿದೆ. ಅದೇ ಪ್ರಕರಣದಲ್ಲಿ ಕಾಡುಗೋಡಿ ಪೊಲೀಸರು ಈ ಹಿಂದೆಯೇ ಆತನನ್ನು ಬಂಧಿಸಿದ್ದರು. (ದಿಗ್ವಿಜಯ ನ್ಯೂಸ್​)

    ಪತ್ನಿ ಈಗೀಗ ಮುಟ್ಟಲೂ ಬಿಡುತ್ತಿಲ್ಲ- ಬದುಕೇ ನರಕವಾಗಿದೆ: ಇದು ಮಾನಸಿಕ ಸಮಸ್ಯೆಯೆ?

    ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts