More

    ‘ಮುಂದಿನ ತಿಂಗಳು ಟಿಎಂಸಿಯ 50 ಶಾಸಕರು ಬಿಜೆಪಿ ಸೇರ್ಪಡೆ’ ಟಿಎಂಸಿಗೆ ಸವಾಲೆಸೆದ ಬಿಜೆಪಿ ನಾಯಕ

    ಕೋಲ್ಕತ: ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ದಿನೇದಿನೆ ರಂಗು ಹೆಚ್ಚುತ್ತಿದೆ. ಆ ಪಕ್ಷದವರು ಈ ಪಕ್ಷಕ್ಕೆ, ಈ ಪಕ್ಷದವರು ಆ ಪಕ್ಷಕ್ಕೆ ಬದಲಾವಣೆ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮುಂದಿನ ತಿಂಗಳಲ್ಲಿ ಟಿಎಂಸಿಯ 50 ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್​ ಘೋಷ್​ ಹೇಳಿದ್ದಾರೆ.

    ಇದನ್ನೂ ಓದಿ: ಕೊನೆಯುಸಿರೆಳೆವ ಮುನ್ನ ಐವರಿಗೆ ಹೊಸ ಜೀವನ ಕೊಟ್ಟ 20 ತಿಂಗಳ ಮಗು

    ಟಿಎಂಸಿ ನಾಯಕ ಮಲ್ಲಿಕ್​ ಬಾಬು ಹೇಳಿಗೆ ಪ್ರತಿಕ್ರಿಯಿಸಿದ ಅವರು, “ಟಿಎಂಸಿ ಅಂತ್ಯ ಸನಿಹದಲ್ಲಿದೆ. ಮುಂದಿನ ತಿಂಗಳಲ್ಲಿ 50 ಶಾಸಕರು ನಮ್ಮ ಪಕ್ಷ ಸೇರಲು ಸಿದ್ಧರಾಗಿದ್ದಾರೆ. ಆದರೆ ಟಿಎಂಸಿ ಕೈನಲ್ಲಿ ಏನೂ ಸಾಧ್ಯವಿಲ್ಲ. ಒಂದೇ ಒಂದು ಬೂತ್​ನ ಅಧ್ಯಕ್ಷನನ್ನೂ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಅವರಿಂದ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮೌನ ಮುರಿದ ಮುನಿರತ್ನ! ಗೆಳೆಯರಾದ ಭೈರತಿ ಬಸವರಾಜು-ಸೋಮಶೇಖರ್​ ವಿರುದ್ಧ ಆಕ್ರೋಶ

    ಟಿಎಂಸಿಯ ಏಳು ಶಾಸಕರು ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದರ ಬಗ್ಗೆ ಮಾತನಾಡಿದ್ದ ಮಲ್ಲಿಕ್​ ಬಾಬು, ಬಿಜೆಪಿ ಸೇರಿರುವ ಶಾಸಕರೆಲ್ಲರೂ ಈಗ ವಾಪಾಸು ಬರಲು ಸಿದ್ಧವಾಗಿದ್ದಾರೆ. ಚುನಾವಣೆಗೆ ಮುನ್ನ, ಮೇ ತಿಂಗಳ ಆರಂಭದಲ್ಲಿ ಏಳು-ಎಂಟು ಸಂಸದರು ನಮ್ಮ ಪಕ್ಷ ಸೇರಲಿದ್ದಾರೆ ಎಂದು ಹೇಳಿದ್ದರು. (ಏಜೆನ್ಸೀಸ್​)

    ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

    ಮಗನ ದುರಾಸೆಗೆ ತಂದೆ ಬಲಿ: ಅಂತ್ಯಸಂಸ್ಕಾರ ಮಾಡ್ಬೇಕು ಎಲ್ಲಿದ್ರೂ ಬೇಗ ಬಾ ಮಗನೇ… ತಾಯಿಯ ಗೋಳಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts