More

    ಪತ್ನಿ ಈಗೀಗ ಮುಟ್ಟಲೂ ಬಿಡುತ್ತಿಲ್ಲ- ಬದುಕೇ ನರಕವಾಗಿದೆ: ಇದು ಮಾನಸಿಕ ಸಮಸ್ಯೆಯೆ?

    ಪತ್ನಿ ಈಗೀಗ ಮುಟ್ಟಲೂ ಬಿಡುತ್ತಿಲ್ಲ- ಬದುಕೇ ನರಕವಾಗಿದೆ: ಇದು ಮಾನಸಿಕ ಸಮಸ್ಯೆಯೆ?ನನ್ನ ವಯಸ್ಸು 45. ಪತ್ನಿಯ ವಯಸ್ಸು 40. ಮದುವೆಯಾಗಿ 18 ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ಪತ್ನಿ ಆರಂಭದ ಕೆಲವು ವರ್ಷಗಳು ಸಂತೋಷವಾಗಿದ್ದುದು ಬಿಟ್ಟರೆ ಉಳಿದಂತೆ ಅವಳ ಕಿರಿಕಿರಿಯಿಂದಾಗಿ ಸಂತೋಷ ಎಂಬುದೇ ಇಲ್ಲವಾಗಿದೆ.

    ಮುಂಚೆ ನೌಕರಿ ಮಾಡುತ್ತಿದ್ದಳು. ಈಗ ಆಗುವುದಿಲ್ಲ ಎಂದು ರಾಜೀನಾಮೆ ನೀಡಿದಳು. ನನ್ನದು ಸ್ವಂತ ಬಿಸಿನೆಸ್ ಇದೆ. ಅಲ್ಲಿಯಾದರೂ ಸಹಕರಿಸು ಎಂದರೆ ಕೇಳುವುದಿಲ್ಲ. ಮನೆಯನ್ನೂ ಸ್ವಚ್ಛವಾಗಿರಿಸಿಕೊಳ್ಳುವುದಿಲ್ಲ. ಎಲ್ಲೆಂದರಲ್ಲಿ ಕಸ, ಸಾಮಾನುಗಳು, ಪತ್ರಿಕೆಗಳನ್ನು ಹರಡಿಕೊಂಡು ಅಸ್ತವ್ಯಸ್ತವಾಗಿರುತ್ತದೆ. ಇವುಗಳ ಜತೆಗೆ ಮುಖ್ಯವಾಗಿ ಅವಳಿಗೆ ಸೆಕ್ಸ್ ಬಗ್ಗೆ ಆಸಕ್ತಿ ಇಲ್ಲ. ರಾತ್ರಿ ನಾನು ಮಲಗುವವರೆಗೂ ಏನಾದರೂ ಕೆಲಸ ಮಾಡುತ್ತಲೋ, ಇಲ್ಲವೇ ಟಿವಿ ನೋಡುತ್ತಲೋ ಕಾಲ ಕಳೆದು ರಾತ್ರಿ 12 ಗಂಟೆಗೆ ಮಲಗುವ ಕೋಣೆಗೆ ಬರುತ್ತಾಳೆ.
    ನಾನೇ ಹತ್ತಿರ ಹೋದರೂ ಅಸಹ್ಯ ಎನ್ನುವಂತೆ ಮುಖ ಸಿಂಡರಿಸುತ್ತಾಳೆ. ನನಗೆ ಅವಳ ಈ ಸ್ವಭಾವದಿಂದಾಗಿ ನೆಮ್ಮದಿಯೇ ಇಲ್ಲವಾಗಿದೆ. ಅವಳಿಗೆ ಯಾವುದರಲ್ಲಿ ಸಂತೋಷ ಸಿಗುತ್ತದೆ ಎಂಬುದೇ ಅರ್ಥವಾಗುತ್ತಿಲ್ಲ. ಸದಾ ಸಿಡುಕುತ್ತಿರುತ್ತಾಳೆ. ಮಕ್ಕಳೊಂದಿಗೂ ಜಗಳ. ಹೊರನೋಟಕ್ಕೆ ಮಾತ್ರ ನಾವು ಗಂಡ ಹೆಂಡತಿಯಂತೆ ಇದ್ದೇವೆ. ಎಷ್ಟೋ ಬಾರಿ ಯಾಕೆ ಜತೆಗಿರಬೇಕು ಅನಿಸುತ್ತದೆ.

    ಡಿವೋರ್ಸ್ ಮಾಡಲೇ ಎಂದೂ ಚಿಂತಿಸಿದ್ದೇನೆ. ಆದರೆ ಮಕ್ಕಳ ಭವಿಷ್ಯ ನೆನಸಿಕೊಂಡು ಸುಮ್ಮನಾಗುತ್ತೇನೆ. ಮನೋವೈದ್ಯರ ಬಳಿ ಕರೆದೊಯ್ಯೋಣವೆಂದು ಬಲವಂತ ಪಡಿಸಿದರೂ ಬರುವುದಿಲ್ಲ. ನನಗೆ ಈ ಸಮಸ್ಯೆ ಬಿಡಿಸಲಾಗದ ಒಗಟಿನಂತಾಗಿದೆ. ದಯವಿಟ್ಟು ಅವಳನ್ನು ತಿದ್ದುವುದು ಹೇಗೆ ಎಂದು ತಿಳಿಸಿ.

    ಉತ್ತರ: ನಿಮ್ಮ ಪತ್ನಿಗೆ ಮಾನಸಿಕ ತೊಂದರೆಯ ಲಕ್ಷಣಗಳಿವೆ. ಒಮ್ಮೆ ಮನೋವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಮತ್ತು ಆಪ್ತಸಲಹೆ ಕೊಡಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ನೀವು ನರಳಬೇಕಾಗುತ್ತದೆ. ಎಲ್ಲದರಲ್ಲೂ ನಿರಾಸಕ್ತಿ, ತನಗೇನು ಬೇಕು ಎಂಬುದೇ ಗೊತ್ತಿಲ್ಲದಿರುವುದು ಇವೆಲ್ಲವೂ ಖಿನ್ನತೆಯ ಲಕ್ಷಣಗಳೇ ಆಗಿವೆ.

    ಇನ್ನು ಲೈಂಗಿಕತೆಯ ವಿಷಯದಲ್ಲಿ ಆಕೆ ತೋರಿಸುತ್ತಿರುವ ಅನಾದರಕ್ಕೆ ಏನೋ ಕಾರಣವಿರಬೇಕು. ನೀವು ಆ ವಿಷಯದಲ್ಲಿ ಹೆಚ್ಚು ಬಲವಂತಪಡಿಸಬೇಡಿ. ಕೆಲವರಿಗೆ ಹೆರಿಗೆಯ ನಂತರ ಸೆಕ್ಸ್ ಎಂಬುದು ಅಸಹ್ಯಕರ ಚಟುವಟಿಕೆ ಎಂಬ ಭಾವನೆ ಮೂಡಿಬರುತ್ತದೆ. ಆದ್ದರಿಂದ ಅವರ ಮನಸ್ಸನ್ನು ಗೆಲ್ಲಬೇಕು. ಆಕೆ ನಿದ್ರೆ ಸರಿಯಾಗಿ ಮಾಡುತ್ತಾರೋ ಇಲ್ಲವೋ ಗಮನಿಸಿ.

    ಸಾಮಾನ್ಯವಾಗಿ ಮಾನಸಿಕ ತೊಂದರೆ ಇರುವವರಲ್ಲಿ ನಿದ್ರೆ ಕಡಿಮೆಯಾಗಿರುತ್ತದೆ. ಸದ್ಯ ನೀವು ಆಕೆಯನ್ನು ಕರೆದುಕೊಂಡು ಸಿನಿಮಾ, ವಾಕಿಂಗ್ ಇಲ್ಲವೇ ಸಂಗೀತ, ಸಾಹಿತ್ಯದ ಕಾರ್ಯಕ್ರಮಗಳಿಗೆ ಕರೆದೊಯ್ಯಿರಿ. ನವಿರಾದ ಸ್ಪರ್ಶ, ಮಾತು, ನಗು ಇವುಗಳಿಂದ ಆಕೆಯ ಮನಸ್ಸು ಸಂತೋಷವಾಗಿರುವಂತೆ ನೋಡಿಕೊಳ್ಳಿ. ನೀವು ಮದುವೆಯಾದ ಹೊಸದರಲ್ಲಿ ಹೇಗೆ ಆಕೆಯೊಂದಿಗೆ ಆಪ್ತತೆಯಿಂದ ನಡೆದುಕೊಳ್ಳುತ್ತಿದ್ದಿರೋ ಅದನ್ನು ನೆನಪಿಸಿಕೊಂಡು ಅದೇ ರೀತಿ ಈಗಲೂ ನಡೆದುಕೊಳ್ಳಿ. ಆಕೆಯ ಮನಸ್ಸು ನಿರಾಳವಾದಷ್ಟು ದೇಹವೂ ಸಿದಟಛಿವಾಗುತ್ತದೆ. ನಂತರ ನೀವು ಆಕೆಯನ್ನು ತಿದ್ದುವುದಾಗಲೀ, ಲೈಂಗಿಕ ಕ್ರಿಯೆಗೆ ಒಪ್ಪಿಸುವುದಾಗಲೀ ಕಷ್ಟವೇನೂ ಆಗುವುದಿಲ್ಲ.

    ಇದಕ್ಕೆಲ್ಲ ತಾಳ್ಮೆ ಬಹಳ ಮುಖ್ಯ. ಎಲ್ಲಕ್ಕಿಂತ ಮೊದಲು ಶತಾಯಗತಾಯ ಪ್ರಯತ್ನಿಸಿ ಮನೋವೈದ್ಯರ ಬಳಿಗೆ ಕರೆದುಕೊಂಡು ಹೋಗಿ. ಚಿಕಿತ್ಸೆ ಆರಂಭವಾದಲ್ಲಿ ಎಲ್ಲವೂ ಸುಲಭವಾಗುತ್ತದೆ.

    ಡಾ.ವಸುಂಧರಾ ಭೂಪತಿಯವರು ನೀಡಿರುವ ಇತರ ಸಲಹೆಗಳಿಗೆ ಕ್ಲಿಕ್ಕಿಸಿ:  https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ಬಿಪಿ, ಶುಗರ್​ ಇಲ್ಲದಿದ್ರೂ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ- ಇದಕ್ಕೆ ಪರಿಹಾರವಿದೆಯೆ?

    ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

    ತುಟಿ ಸದಾ ಒಣಗಿ ಕಪ್ಪು ಕಲೆಯಾಗುತ್ತದೆ- ಮನೆಮದ್ದು ಏನಾದರೂ ಇದೆಯೆ?

    ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

    ಶೀಲಗೆಟ್ಟರೂ ಅಡ್ಡಿಲ್ಲ, ಮಗುಬೇಕೆಂದು ನಿಮ್ಮನ್ನು ಬಳಸಿಕೊಂಡಳಾಕೆ- ನೀವು ಚಿಂತಿಸಿ ಪ್ರಯೋಜನವಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts