VIDEO| ಈ ವಿಡಿಯೋ ನೋಡಿದ್ರೆ ಮದ್ವೆ ಊಟ ಮಾಡಲು ನೀವು ಭಯ ಪಡ್ತೀರಾ: ಥೂ ಇಂಥವರೂ ಇರ್ತಾರಾ!

Roti 1
Published on

ಮೀರತ್​: ಮದುವೆ ಮನೆ ಊಟವನ್ನು ಬಾಯಿ ಚಪ್ಪರಿಸಿ ತಿನ್ನುವವರು ಒಮ್ಮೆ ಈ ವಿಡಿಯೋ ನೋಡಿದ್ರೆ ಶಾಕ್​ ಆಗುವುದು ಗ್ಯಾರೆಂಟಿ. ಕೇವಲ ಶಾಕ್​ ಮಾತ್ರವಲ್ಲ ಊಟ ತಯಾರಿಸುವವನನ್ನು ಒಮ್ಮೆ ಬಾಯಾರೆ ಶಪಿಸುವುದು ಸಹ ನಿಜವೇ.

ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದ ಮದುವೆಯಲ್ಲಿ ಅಡುಗೆ ಮಾಡುವಾಗ ತಂದೂರಿ ರೋಟಿ ಮೇಲೆ ಉಗಿಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರೋಟಿ ಮೇಲೆ ಉಗುಳುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ ರೋಟಿ ತಯಾರಕನನ್ನು ಬಂಧಿಸಲಾಗಿದೆ.

ಬಂಧಿತನನ್ನು ಸೊಹೈಲ್​ ಎಂದು ಗುರುತಿಸಲಾಗಿದೆ. ಈತ ಮದುವೆಯಲ್ಲಿ ಅಡುಗೆ ಮಾಡುವಾಗ ರೋಟಿಯನ್ನು ಒತ್ತಿದ ಬಳಿಕ ಅದನ್ನು ಸುಡುವ ಮುನ್ನ ಅದರ ಮೇಲೆ ಉಗುಳುವುದನ್ನು ವ್ಯಕ್ತಿಯೊಬ್ಬ ರಹಸ್ಯವಾಗಿ ವಿಡಿಯೋ ಮಾಡಿಕೊಂಡು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ರೋಟಿ ತಯಾರಕನ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆಯೂ ಹಾಗೂ ತನಿಖೆ ನಡೆಸುವಂತೆಯೂ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಹಿಂದು ಜಾಗರಣ ಮಂಚ್​ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸೊಹೈಲ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.

ಈ ವಿಡಿಯೋವನ್ನು ಮೀರತ್​ನ ಮದುವೆ ಸಮಾರಂಭದ ಬಾಂಕ್ವೆಟ್​ ಹಾಲ್​ನಲ್ಲಿ ರೆಕಾರ್ಡ್​ ಮಾಡಲಾಗಿದೆ ಎಂದಿರುವ ಹಿಂದು ಜಾಗರಣ ಮಂಚ್​ ಅಧ್ಯಕ್ಷ ಸಚಿನ್​ ಸಿರೊಹಿ, ಇಂತಹ ಘಟನೆಗಳ ಬಗ್ಗೆ ಪರಿಶೀಲನೆ ನಡೆಸಲು ಸಿಸಿಟಿವಿ ಕ್ಯಾಮೆರಾಗಳನ್ನು ಮದುವೆ ಸ್ಥಳಗಳಲ್ಲಿ ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net