ಡಾನ್ಸ್‌ಬಾರ್‌ಗಳಿಗೆ ಯುವತಿಯರ ಸರಬರಾಜು: ಆರೋಪಿಯ ಬಂಧನ

dance
Published on

ಬೆಂಗಳೂರು: ಪ್ರಸಿದ್ಧ ಚಿತ್ರನಟರ ಜತೆ ಫೋಟೋ ಕ್ಲಿಕ್ಕಿಸಿಕೊಂಡು ತಾನೊಬ್ಬ ನಟ, ಸಿನಿಮಾದಲ್ಲಿ ತನಗೆ ಬಹಳ ಮಂದಿಯ ಪರಿಚಯವಿದೆ ಎಂದೆಲ್ಲಾ ಪೋಸ್‌ ಕೊಟ್ಟು, ಯುವತಿಯನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಖತರ್‌ನಾಕ್‌ ಖದೀಮನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚಿತ್ರನಟ-ನಟಿಯರ ಜತೆ ಫೋಟೋ ನೋಡಿ ಯುವತಿಯರು ಮರಳಾಗುವಂತೆ ಮಾಡುತ್ತಿದ್ದ ಬಸವರಾಜು ಶಂಕರಪ್ಪ ಕಳಸದ್, ನಂತರ ಯುವತಿಯರನ್ನು ಕಳ್ಳಸಾಗಣೆ ಮಾಡುತ್ತಿರುವ ಆರೋಪ ಎದುರಿಸುತ್ತಿದ್ದಾನೆ.

ಅನ್ಯರಾಜ್ಯಗಳ ಯುವತಿಯರಿಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ ಅವರನ್ನು ಕರೆತಂದು ನಂತರ ಡಾನ್ಸ್‌ಬಾರ್‌ಗಳಿಗೆ ಸರಬರಾಜು ಮಾಡುತ್ತಿದ್ದ.

ಈತನ ಮಾತನ್ನು ನಂಬಿ ಅನೇಕ ಬೇರೆ ರಾಜ್ಯಗಳ ಯುವತಿಯರು ಈತನ ಜತೆಗೆ ಬಂದಿದ್ದಾರೆ. ನಂತರ ಅವರನ್ನು ಅರಬ್‌ ಸೇರಿದಂತೆ ಅನೇಕ ದೇಶಗಳಿಗೆ ಮಾರಾಟ ಮಾಡುತ್ತಿರುವುದಾಗಿ ಸಿಸಿಬಿ ಪೊಲೀಸರು ಹೇಳಿದ್ದಾರೆ.

ಇದೀಗ ಆರೋಪಿ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ತೀವ್ರಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net