

ಸೂರತ್: ಜೀವನಪರ್ಯಂತ ಜತೆಯಿರುವುದಾಗಿ ಪ್ರಮಾಣ ಮಾಡಿ ಮದುವೆಯಾದ ಪತ್ನಿಯನ್ನೇ ಪತಿ ಕೊಂದು, ಶವದ ಜತೆ ಮಲಗಿದ ಘಟನೆ ಗುಜರಾತ್ನಲ್ಲಿ ನಡೆದಿದೆ. ಪತ್ನಿಯನ್ನು ಕೊಂದ ಆತ ಮಾರನೇ ದಿನ ಏನೂ ಆಗೇ ಇಲ್ಲವೆನ್ನುವಂತೆ ಮನೆ ಬಿಟ್ಟು ತೆರಳಿದ್ದ ಎನ್ನಲಾಗಿದೆ.
ಕೇದ್ಬಾರಾಮದ ಲಿಖರಾಮ್ ಅಲಿಯಾಸ್ ಲಕ್ಷ್ಮಣ್ ಕೇಶರಾಮ್ ಚೌಧರಿ ಕೆಲ ವರ್ಷಗಳ ಹಿಂದೆ ಏಜೆಂಟ್ ಒಬ್ಬರ ಮೂಲಕ ವಧು ಹುಡುಕಿ, ಮದುವೆಯಾಗಿದ್ದ. ಇದಕ್ಕೆಂದು ಆತ 3 ಲಕ್ಷ ರೂಪಾಯಿ ಖರ್ಚು ಮಾಡಿದ್ದನಂತೆ. ಆದರೆ ಮದುವೆಯಾದ ಮೇಲೆ ಆತನ ಬದುಕು ಅವನೆಂದುಕೊಂಡಂತಿರಲಿಲ್ಲ. ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಲಿಖರಾಮ್ ಡಿಸೆಂಬರ್ 4ರಂದು ಪತ್ನಿಯನ್ನು ಕೊಂದಿದ್ದಾನೆ. ಆಕೆಯ ಶವವನ್ನು ಗೋನಿ ಚೀಲದೊಳಗೆ ತುಂಬಿದ್ದಾನೆ. ಪೂರ್ತಿ ರಾತ್ರಿ ಹೆಣದೊಂದಿಗೆ ಮಲಗಿ ಕಾಲ ಕಳೆದಿದ್ದಾನೆ.
ಎಂದಿನಂತೆ ಬೆಳಗ್ಗೆ ಎದ್ದ ಲಿಖರಾಮ್ ಮನೆಯಿಂದ ಹೊರಟು ತನ್ನ ತರಕಾರಿ ಗಾಡಿಯನ್ನು ತಳ್ಳಿಕೊಂಡು ಹೊರಟಿದ್ದಾನೆ. ನಗರದಿಂದ 140 ಕಿ.ಮೀ ದೂರದಲ್ಲಿರುವ ಅಹಮದಾಬಾದ್ವರೆಗೆ ಗಾಡಿಯನ್ನು ತಳ್ಳಿಕೊಂಡು ಹೋಗಿ ಅಲ್ಲಿ ಅದನ್ನು ಮಾರಾಟ ಮಾಡಿದ್ದಾನೆ. ನಂತರ ಬಸ್ ಒಂದರ ಮೂಲಕ ಸಬರ್ಕಥಾಕ್ಕೆ ಹೊರಟಿದ್ದಾನೆ. ಅಷ್ಟರೊಳಗೆ ಪ್ರಕರಣವನ್ನು ಭೇದಿಸಿದ ಪೊಲೀಸರು ಲಿಖರಾಮ್ಗಾಗಿ ಬಲೆ ಬೀಸಿದ್ದಾರೆ. ಇದೀಗ ಆತನನ್ನು ಬಂಧಿಸಲಾಗಿದೆ. (ಏಜೆನ್ಸೀಸ್)