25 ವರ್ಷದ ಯುವತಿಯನ್ನು ಮದ್ವೆಯಾದ 70 ವರ್ಷದ ವೃದ್ಧ!

man70marries
Published on

ಬಿಹಾರ: 70 ವರ್ಷದ ಬಿಹಾರದ ವ್ಯಕ್ತಿ ತನ್ನ ಪತ್ನಿಯ ಮರಣದ ನಂತರ ಒಂಟಿಯಾಗಿದ್ದ ವೃದ್ಧ 25 ವರ್ಷದ ಯುವತಿ ಜತೆ ಮರುಮದುವೆ ಮಾಡಿಕೊಂಡಿದ್ದಾನೆ. ಈ ಮದುವೆ ಕುರಿತಾದ ಕೆಲವು ಫೊಟೋಗಳು ವೈರಲ್​ ಆಗುತ್ತಿವೆ.

ಗಯಾ ಜಿಲ್ಲೆಯ ಬೈದಾ ಗ್ರಾಮದ ಮೊಹಮ್ಮದ್​​ ಸಲೀಮುಲ್ಲಾ ನೂರಾನಿ (70), ಹಮ್ಜಾಪುರದ ಇಸ್ಲಾಂನಗರದ ನಿವಾಸಿ ರೇಷ್ಮಾ ಪರ್ವೀನ್ (25)​ ಅವರನ್ನು ವಿವಾಹವಾಗಿದ್ದಾರೆ. ಇಳಿವಯಸ್ಸಿನಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಹುಡುಗಿನ ಮದುವೆ ಆಗಿದ್ದು ಸಖತ್​ ವೈರಲ್​​ ಆಗಿದೆ.

ಮೊಹಮ್ಮದ್​​ ಸಲೀಮುಲ್ಲಾ ನೂರಾನಿ ವೃತ್ತಿಯಲ್ಲಿ ಕೃಷಿಕ. ಈತನ ಮೊದಲ ಪತ್ನಿ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು. ಒಂಟಿಯಾಗಿ ಜೀವನ ನಡೆಸುತ್ತಿದ್ದರು. ನೂರಾನಿಗೆ ಆರು ಹೆಣ್ಣು ಹಾಗೂ ಓರ್ವ ಮಗ ಸೇರಿದಂತೆ ಏಳು ಮಕ್ಕಳು ಇದ್ದರು. ಮತ್ತೊಂದು ಮದುವೆ ಆಗ ಬೇಕು ಎನ್ನುವ ಯೋಚನೆಯಲ್ಲಿದ್ದರು.

ದಂಪತಿ ಇಸ್ಲಾಮ್ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, ವಿವಾಹದಲ್ಲಿ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು. ನೂರಾನಿ ವಿವಾಹ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧ ಹೊಂದುವುದಕ್ಕಿಂತ ಹೀಗೆ ಮದುವೆ ಆಗುವುದು ಒಳ್ಳೆಯದು, ಮಗಳ ವಯಸ್ಸಿನ ಯುವತಿ ಜತೆ ಮದುವೆ ಆಗಿದ್ದು ಎಷ್ಟು ಸರಿ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net