

ಮುಂಬೈ: ತೊಂಬತ್ತರ ದಶಕದ ಬಾಲಿವುಡ್(Bollywood) ನಟಿ ಮಮತಾ ಕುಲಕರ್ಣಿ 24 ವರ್ಷಗಳ ನಂತರ ಭಾರತಕ್ಕೆ ಮರಳಿರುವುದು ಗೊತ್ತೆ ಇದೆ. ಭಾರತಕ್ಕೆ ಮರಳಿದ ನಂತರ ಮಮತಾ ಕುಲಕರ್ಣಿ ಸದ್ಯ ತಮ್ಮ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದಾರೆ. ಭಾರತ ತೊರೆಯಲಿ ಕಾರಣವೇನು, ಮತ್ತೆ ಬಣ್ಣದ ಲೋಕಕ್ಕೆ ಬರುವರೇ ಎಂಬ ಹಲವು ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆಲ್ಲಾ ಸ್ವತಃ ಮಮತಾ ಕುಲಕರ್ಣಿ ಅವರೇ ಉತ್ತರಿಸಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಯೊಂದ ಸಂದರ್ಶನದಲ್ಲಿ ಮಾತನಾಡಿರುವ ಮಮತಾ ಕುಲಕರ್ಣಿ ತಮ್ಮ ಜೀವನ ಹಾಗೂ ಆಸಕ್ತಿ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ನೀವು ಭಾರತವನ್ನು ತೊರೆದಿದ್ದು ಏಕೆ ಎಂದು ಅವರನ್ನು ಕೇಳಲಾಯಿತು. ಅದಕ್ಕೆ ಮಮತಾ ಕುಲಕರ್ಣಿ ನಾನು ಭಾರತವನ್ನು ತೊರೆಯಲು ಕಾರಣ ಆಧ್ಯಾತ್ಮಿಕತೆ. 1996 ರಲ್ಲಿ ನಾನು ಆಧ್ಯಾತ್ಮಿಕತೆಯತ್ತ ಒಲವನ್ನು ಹೊಂದಿದ್ದೆ. ಆ ಸಮಯದಲ್ಲಿ ನಾನು ಗುರು ಗಗನ್ ಗಿರಿ ಮಹಾರಾಜರನ್ನು ಭೇಟಿಯಾದೆ. ಅವರ ಆಗಮನದ ನಂತರ ಆಧ್ಯಾತ್ಮದಲ್ಲಿ ನನ್ನ ಆಸಕ್ತಿ ಹೆಚ್ಚಾಯಿತು. ಇದಾದ ನಂತರ ನನ್ನ ತಪಸ್ಸು ಪ್ರಾರಂಭವಾಯಿತು ಎಂದು ಹೇಳಿದ್ದಾರೆ.
ಆದರೆ ಆ ಸಮಯದಲ್ಲಿ ಬಾಲಿವುಡ್ ನನಗೆ ಹೆಸರು ಮತ್ತು ಖ್ಯಾತಿಯನ್ನು ನೀಡಿದೆ ಎಂದು ನಂಬುತ್ತೇನೆ. ಇದಾದ ನಂತರ ಬಾಲಿವುಡ್ ಕೂಡ ತನ್ನ ಬೆಂಬಲವನ್ನು ಕಳೆದುಕೊಂಡಿತು. 2000ನೇ ಇಸವಿಯಿಂದ 2012ರವರೆಗೆ ತಪಸ್ಸು ಮಾಡುತ್ತಲೇ ಇದ್ದೆ. ನಾನು ಅನೇಕ ವರ್ಷಗಳಿಂದ ದುಬೈನಲ್ಲಿದ್ದೆ ಮತ್ತು ಎರಡು ಬೆಡ್‌ರೂಮ್‌ಗಳ ಹಾಲ್‌ನಲ್ಲಿ ವಾಸಿಸುತ್ತಿದ್ದೆ ಮತ್ತು 12 ವರ್ಷಗಳ ಕಾಲ ಬ್ರಹ್ಮಚಾರಿಣಿಯಾಗಿಯೆ ಇದ್ದೆ ಎಂದಿದ್ದಾರೆ.
ಇನ್ನು ವಿಕ್ಕಿ ಗೋಸ್ವಾಮಿಯನ್ನು ಮದುವೆಯಾಗಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ವಿಕ್ಕಿ ಗೋಸ್ವಾಮಿಯನ್ನು 1996ರಲ್ಲಿ ಭೇಟಿಯಾಗಿದ್ದೆ ಮತ್ತು 1997ರಲ್ಲಿ ವಿಕ್ಕಿ ಗೋಸ್ವಾಮಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಯಿತು. 12 ವರ್ಷಗಳ ಕಾಲ ಜೈಲಿನಲ್ಲಿದ್ದರು. ಈ ಸಮಯದಲ್ಲಿ ಅವರು ನನ್ನನ್ನು ಭೇಟಿಯಾಗಲು ಕೇಳಿದರು ನಂತರ ನಾನು ಅವರನ್ನು ಒಮ್ಮೆ ಭೇಟಿಯಾದೆ. ಈ ಸಮಯದಲ್ಲಿ ನಾನು ನನ್ನೆಲ್ಲ ಗಮನವನ್ನು ಆಧ್ಯಾತ್ಮಿಕತೆಯ ಕಡೆಗೆ ಕೇಂದ್ರೀಕರಿಸಿದೆ.
ಬಳಿಕ ವಿಕ್ಕಿ ಕೂಡ ಕೀನ್ಯಾಗೆ ತೆರಳಿದ್ದರು. ನಾನು ವಿಕ್ಕಿಯನ್ನು ಮದುವೆಯಾಗಿಲ್ಲ. ನಾನು 12 ವರ್ಷಗಳ ಕಾಲ ಬ್ರಹ್ಮಚಾರಿಣಿಯಾಗಿಯೆ ಇದ್ದೆ ಮತ್ತು ಆ ಅವಧಿಯಲ್ಲಿ ನಾನು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಹ ತಿನ್ನಲಿಲ್ಲ. ಹೌದು ನಾನು ವಿಕ್ಕಿ ಗೋಸ್ವಾಮಿ ಜತೆಯಲ್ಲಿದ್ದೆ ಮತ್ತು ಅವನ ಮೇಲೆ ಯಾವಾಗಲೂ ಪ್ರೀತಿ ಇರುತ್ತೆ ನಿಜ. ಆದರೆ ಆಧ್ಯಾತ್ಮದತ್ತ ಗಮನಹರಿಸಿದ್ದರಿಂದ ಎಲ್ಲವೂ ಕೊನೆಗೊಂಡಿತು. ಕೀನ್ಯಾದಲ್ಲಿ ವಿಕ್ಕಿ ಗೋಸ್ವಾಮಿಯವರನ್ನೂ ಭೇಟಿಯಾಗಿದ್ದೆ. ಡ್ರಗ್ಸ್ ಪ್ರಕರಣದಲ್ಲಿ ಅವರನ್ನು ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು. ಸುಮಾರು ಎಂಟು ವರ್ಷಗಳು ಕಳೆದಿವೆ ಮತ್ತು ಈಗ ಎಲ್ಲವೂ ಮುಗಿದಿದೆ ಎಂದು ಹೇಳಿದರು.
ಮತ್ತೆ ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳುವೀರಾ ಎಂದು ಕೇಳಿದಾಗ ಇಲ್ಲ.. ಈಗ ನಾನು ಸನ್ಯಾಸಿಯಾಗಿದ್ದೇನೆ. ನನಗೆ ಬಾಲಿವುಡ್‌ನಲ್ಲಿ ಆಸಕ್ತಿ ಇಲ್ಲ ಅಥವಾ ಬೇರೆ ಯಾವುದರ ಬಗ್ಗೆಯೂ ಕಾಳಜಿ ಇಲ್ಲ. ಈಗ ಮತ್ತೆ ಬಾಲಿವುಡ್ ಬಗ್ಗೆ ಯೋಚಿಸುವಷ್ಟು ವಯಸ್ಸಾಗಿಲ್ಲ. ನಾನು ಆಧ್ಯಾತ್ಮಿಕ ಜೀವನವನ್ನು ನಡೆಸಲು ಮತ್ತು ಆಧ್ಯಾತ್ಮಿಕ ಚರ್ಚೆಗಳಲ್ಲಿ ಭಾಗವಹಿಸಲು ಬಯಸುತ್ತೇನೆ ಎಂದಿದ್ದಾರೆ.(ಏಜೆನ್ಸೀಸ್)