ನಿಜವಾದ ಸಿಂಹದೊಂದಿಗೆ ಪ್ಯಾನ್ ಇಂಡಿಯಾ ಚಿತ್ರ..ಇಂತಹ ಪ್ರಯತ್ನ ಏಷ್ಯಾದಲ್ಲೇ ಮೊದಲು!

mambo movie
Published on

ಮುಂಬೈ: ಪ್ರಕೃತಿ, ಕಾಡು, ವನ್ಯಜೀವಿಗಳ ಬಗ್ಗೆ ಕಾಳಜಿವಹಿಸುತ್ತ ಚಿತ್ರಗಳಲ್ಲೂ ಅದರ ಛಾಯೆ ಮೂಡಿಸುತ್ತ ಬಂದಿರುವ ನಿರ್ದೇಶಕ ನಿರ್ದೇಶಕ ಪ್ರಭು ಸೊಲೊಮನ್ ಮತ್ತೊಂದು ವಿಷಿಷ್ಟ ಸಾಹಅಕ್ಕೆ ಕೈ ಹಾಕಿದ್ದಾರೆ. ಪ್ರಸ್ತುತ ಅವರು ನಿಜವಾದ ಸಿಂಹದೊಂದಿಗೆ ಚಲನಚಿತ್ರ ತೆಗೆಯಲು ಹೊರಟಿದ್ದಾರೆ. ಅದೂ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ. ಈಗ ಈ ವಿಷಯ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ.

ಮನುಷ್ಯ ಮತ್ತು ಕಾಡುಪ್ರಾಣಿ ನಡುವಿನ ಸ್ನೇಹ, ಸಂಬಂಧ ಆಧರಿಸಿದ ‘ಮಾಂಬೋ’ ಸಿನಿಮಾ ತೆರೆಗೆ ತರಲು ಹೊರಟಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಪ್ರಾಣಿಗಳ ಜೊತೆ ಸಿನಿಮಾ ತೆಗೆಯುವುದನ್ನು ನಿಷೇಧಿಸಿರುವುದರಿಂದ ವಿದೇಶದಲ್ಲಿ ಈ ಚಿತ್ರದ ಚಿತ್ರೀಕರಣ ಮುಗಿದಿದೆ.

ವನಿತಾ ವಿಜಯ್ ಕುಮಾರ್ ಅವರ ಪುತ್ರ ವಿಜಯ್ ಶ್ರೀಹರಿ ಈ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ. ಏತನ್ಮಧ್ಯೆ, ಮಾಂಬೋ ಏಷ್ಯಾದಲ್ಲಿ ನಿಜವಾದ ಸಿಂಹದೊಂದಿಗೆ ಮಾಡಿದ ಮೊದಲ ಚಿತ್ರವಾಗಲಿದೆ.

ನೈಜ ಸಿಂಹದ ಜೊತೆಗೆ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಸಿನಿಮಾವನ್ನು ಚಿತ್ರೀಕರಿಸುತ್ತಿರುವ ನಿರ್ದೇಶಕ ಪ್ರಭು ಸಲ್ಮಾನ್ ಧೈರ್ಯಕ್ಕೆ ನೆಟಿಜನ್‌ಗಳು ಹ್ಯಾಟ್ಸ್ ಅಪ್​ ಎಂದು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net