

ಕೇರಳ: 'ಮಲ್ಲು ಹಿಂದು ಅಧಿಕಾರಿಗಳು' ಎಂಬ ವಾಟ್ಸ್ಆ್ಯಪ್ ಗ್ರೂಪ್ ರಚಿಸಿದಕ್ಕಾಗಿ ಅಖಿಲ ಭಾರತೀಯ ಆಡಳಿತ ಸೇವಾ (IAS) ಅಧಿಕಾರಿ ಕೆ.ಗೋಪಾಲಕೃಷ್ಣನ್ ಅವರನ್ನು ಕೇರಳ ಸರ್ಕಾರ ಮಂಗಳವಾರ(ನ.12) ಅಮಾನತು ಮಾಡಿದೆ.
ತಮ್ಮ ಪೋನ್ ಹ್ಯಾಕ್ ಮಾಡಲಾಗಿದೆ ಎಂಬ ಕೆ.ಗೋಪಾಲಕೃಷ್ಣನ್ ಹೇಳಿಕೆಯನ್ನು ಪೊಲೀಸರು ತಳ್ಳಿ ಹಾಕಿದ ನಂತರ ಈ ಕ್ರಮ ಜರುಗಿಸಲಾಗಿದೆ. ವಾಟ್ಸ್ಆ್ಯಪ್ ಗ್ರೂಪ್ ರಚನೆಯಿಂದಾಗಿ ''ಅಖಿಲ ಭಾರತ ಸೇವೆಗಳ ಅಧಿಕಾರಿಗಳಲ್ಲಿ ವಿಭಜನೆ, ಭಿನ್ನಾಭಿಪ್ರಾಯ ಬಿತ್ತಲು ಮತ್ತು ಒಗ್ಗಟ್ಟು ಮುರಿಯಲು'' ಉದ್ದೇಶಿಸಲಾಗಿದೆ ಎಂದು ಅವರ ಅಮಾನತ್ತಿನ ಆದೇಶದಲ್ಲಿ ತಿಳಿಸಲಾಗಿದೆ.
ಮಲ್ಲು ಹಿಂದು ಅಧಿಕಾರಿಗಳ ಗ್ರೂಪ್ ಅನ್ನು ಆಕ್ಟೋಬರ್ 30 ರಂದು ರಚಿಸಲಾಗಿದೆ. ಜತೆಗೆ ಹಲವಾರು ಹಿರಿಯ ಐಎಎಸ್ ಅಧಿಕಾರಿಗಳನ್ನು ಗ್ರೂಪ್ಗೆ ಸೇರಿಸಿಕೊಳ್ಳಲಾಗಿದೆ. ಬೇರೆ ಇತರ ಹಿರಿಯ ಅಧಿಕಾರಿಗಳು ಎಚ್ಚರಿಕೆ ಬಳಿಕ ಗ್ರೂಪ್ ಅಳಸಿ ಹಾಕಲಾಗಿದೆ ಎಂದು ಪೊಲೀಸರ ಮುಂದೆ ಅಧಿಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ, ಈ ಕುರಿತು ಕೇರಳ ಸರ್ಕಾರ ತನಿಖೆಗೆ ಆದೇಶಿಸಿತ್ತು.
ತನಿಖೆ ನಡೆಸಿದ ಕೇರಳ ಪೊಲೀಸರ ಹೇಳಿಕೆ ಪ್ರಕಾರ ''ಅವರ ಪೋನ್ ಹ್ಯಾಕ್ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಫೋರನ್ಸಿಕ್ ಲ್ಯಾಬ್ಗೆ ಕಳಿಸುವ ಮುನ್ನ ಅಧಿಕಾರಿ ಗೋಪಾಲಕೃಷ್ಣನ್ ಹಲವು ಬಾರಿ ಮೊಬೈಲ್ ಫೋನ್ ಅನ್ನು ರೀಸೆಟ್ ಮಾಡಿದ್ದಾರೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಶಾರದಾ ಮುರಳಿಧರನ್ ಅವರ ವರದಿ ಅಧಾರದ ಮೇಲೆ ಅಮಾನತು ಮಾಡಲಾಗಿದೆ. ಗೋಪಾಲಕೃಷ್ಣನ್ ವಾಣಿಜ್ಯ ಮತ್ತು ಕೈಗಾರಿಗೆ ಇಲಾಖೆಯ ನಿರ್ದೇಶಕರಾಗಿದ್ದರು, (ಏಜೆನ್ಸೀಸ್).