More

    ಮತ್ತೆ ಬಾಲ್ಯಕ್ಕೆ ಕರೆದೊಯ್ಯಲಿದೆ ಶಂಕರ್​ನಾಗ್​ ನಿರ್ದೇಶನದ ಆ ಧಾರಾವಾಹಿ; ಮರುಪ್ರಸಾರ ಯಾವಾಗ?

    ಬೆಂಗಳೂರು: ಈಗಾಗಲೇ ಕಿರುತೆರೆಯಲ್ಲಿ ಹಳೇ ಕಾರ್ಯಕ್ರಮಗಳ ರಂಗು ಹೆಚ್ಚಾಗಿದೆ. ದಶಕಗಳ ಹಿಂದೆ ಮೋಡಿ ಮಾಡಿದ ಧಾರಾವಾಹಿಗಳು ಮರುಪ್ರಸಾರಗೊಂಡು ದಾಖಲೆ ಸೃಷ್ಟಿಸುತ್ತಿವೆ. ರಾಮಾಯಣ ವಿಶ್ವದಾಖಲೆ ಬರೆದರೆ, ಮಹಾಭಾರತ, ಶಕ್ತಿಮಾನ್​ ಸೀರಿಯಲ್​ಗಳು ಜನಮೆಚ್ಚುಗೆ ಪಡೆಯುತ್ತಿವೆ. ಹೀಗಿರುವಾಗ ಕಿರುತೆರೆಗೆ ಹೊಸ ವರ್ಚಸ್ಸು ತಂದುಕೊಟ್ಟ ಶಂಕರ್​ನಾಗ್​ ನಿರ್ದೇಶನದ ‘ಮಾಲ್ಗುಡಿ ಡೇಸ್​’ ಮರುಪ್ರಸಾರಕ್ಕೆ ಸಜ್ಜಾಗುತ್ತಿದೆ. ಮೇ 11ರಿಂದ ವಾರದ ಐದು ದಿನ ಜೀ ಕನ್ನಡದಲ್ಲಿ ಮೂಡಿಬರಲಿದೆ.
    ಹೌದು, ವಿಷ್ಣುವರ್ಧನ್​, ಅನಂತ್​ನಾಗ್​, ಮಾಸ್ಟರ್ ಮಂಜುನಾಥ್​, ಗಿರೀಶ್ ಕಾರ್ನಾಡ್ ಮೇರು ನಟರೆಲ್ಲ ನಟಿಸಿದ, ಮಾಲ್ಗುಡಿ ಡೇಸ್​ ಧಾರಾವಾಹಿ 1986ರಲ್ಲಿ ಕಿರುತೆರೆಯಲ್ಲಿ ದೊಡ್ಡ ದಾಖಲೆ ಬರೆದಿತ್ತು. ಕಾಲ್ಪನಿಕ ಊರಲ್ಲಿ ಶಂಕರ್​ನಾಗ್​ ಅದ್ಬುತ ದೃಶ್ಯಕಾವ್ಯವನ್ನು ಸೃಷ್ಟಿಸಿದ್ದರು. ಇದೀಗ ಅಂದಿನ ಆ ಧಾರಾವಾಹಿ ಮತ್ತೆ ಲಾಕ್​ಡೌನ್​ ಹೊತ್ತಲ್ಲಿ ಕನ್ನಡಕ್ಕೆ ಡಬ್​ ಆಗಿ ಕಿರುತೆರೆಗೆ ಬರುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲಿಯೇ ಮಾಲ್ಗುಡಿ ಪ್ರಸಾರವಾಗಲಿದ್ದು, 54 ಏಪಿಸೋಡ್​ಗಳಲ್ಲಿ ಆಯ್ದ ಕೆಲವು ಬಿತ್ತರ ಆಗಲಿವೆ.

    ಇದನ್ನೂ ಓದಿ: ಹೊಡೆದಾಟಕ್ಕೆ ಸಂಜಯ್ ದತ್ ತಯಾರಿ, ‘ಕೆಜಿಎಫ್’ಗೆ ದೇಹದಂಡನೆ; ಕಟ್ಟುನಿಟ್ಟಿನ ಡಯಟ್

    ಮೂಲ ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಈ ಧಾರಾವಾಹಿ ಮೂಡಿಬಂದಿದ್ದು, ಇದೀಗ ಕನ್ನಡಕ್ಕೂ ಡಬ್​ ಆಗಿ 1980-90 ಕಾಲಘಟ್ಟದಲ್ಲಿ ಜನಿಸಿದವರನ್ನು ಮತ್ತೆ ಹಳೇ ದಿನಗಳಿಗೆ ಮರಳಿ ಕರೆದೊಯ್ಯಲಿದೆ. ಶಂಕರ್​ನಾಗ್​ ನಿರ್ದೇಶನದಲ್ಲಿ ಒಟ್ಟು 39 ಏಪಿಸೋಡ್​ಗಳು ತಯಾರಾದರೆ, ಇನ್ನುಳಿದ 15 ಏಪಿಸೋಡ್​ಳನ್ನು ಕವಿತಾ ಲಂಕೇಶ್​ ಡೈರೆಕ್ಷನ್​ ಮಾಡಿದ್ದರು.

    ಆವತ್ತು ಮೇಕಪ್​ ಕಳಚಿ ಹೋದ ಶಂಕರ್​ನಾಗ್, ಮತ್ತೆ ಬರಲೇ ಇಲ್ಲ!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts