More

    ಹೊಡೆದಾಟಕ್ಕೆ ಸಂಜಯ್ ದತ್ ತಯಾರಿ, ‘ಕೆಜಿಎಫ್’ಗೆ ದೇಹದಂಡನೆ; ಕಟ್ಟುನಿಟ್ಟಿನ ಡಯಟ್

    ಬೆಂಗಳೂರು: ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ‘ಕೆಜಿಎಫ್’ ತಂಡ, ಲಾಕ್​ಡೌನ್ ತೆರವಾಗುವುದನ್ನೇ ಕಾಯುತ್ತಿದೆ. ಬಾಕಿ ಉಳಿದ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿಕೊಳ್ಳುವ ಕಾತರದಲ್ಲಿದೆ. ಈ ನಡುವೆ ಶೂಟಿಂಗ್ ಸ್ಥಗಿತವಾಗಿದ್ದರೂ, ಯಶ್ ತಮ್ಮ ದೇಹವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳುತ್ತಿದ್ದಾರೆ, ಇತ್ತ ಚಿತ್ರದ ಮುಖ್ಯ ವಿಲನ್ ಸಂಜಯ್ ದತ್ ಸುಮ್ಮನಿರುತ್ತಾರಾ? ಯಶ್​ಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ನಾಯಕನೆದುರು ಸೆಣಸಾಡಲು ದೇಹವನ್ನು ಕಲ್ಲಾಗಿಸಿಕೊಳ್ಳುತ್ತಿದ್ದಾರೆ!

    ಹೌದು, ಲಾಕ್​ಡೌನ್ ಹಿನ್ನೆಲೆಯಲ್ಲಿ ‘ಕೆಜಿಎಫ್’ ಸಿನಿಮಾ ಗುಂಗಲ್ಲೇ ದತ್ ಕಾಲಕಳೆಯುತ್ತಿದ್ದಾರೆ. ಕ್ಲೈಮ್ಯಾಕ್ಸ್ ಹೊಡೆದಾಟಕ್ಕಾಗಿ 60ರ ಇಳಿವಯಸ್ಸಿನಲ್ಲೂ ಡಯಟ್ ಮೊರೆ ಹೋಗಿದ್ದಾರೆ. ಆದರೆ, ಸಂಜಯ್ ಡಯಟ್ ಹೇಗಿರಬೇಕು ಎಂಬುದನ್ನು ಪತ್ನಿ ಮಾನ್ಯತಾ ನಿರ್ಧರಿಸುತ್ತಿದ್ದರು. ಸದ್ಯ ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಮಾನ್ಯತಾ ದುಬೈನಲ್ಲಿದ್ದಾರೆ. ಅದೆಲ್ಲವನ್ನು ಮೀರಿ, ಅವರ ಅನುಪಸ್ಥಿತಿ ನಡುವೆಯೂ ಸ್ವತಃ ತಾವೇ ಕಟ್ಟುನಿಟ್ಟಿನ ಡಯಟ್ ಪಾಲಿಸುತ್ತಿದ್ದಾರಂತೆ.

    ಇದನ್ನೂ ಓದಿ: ಮೇ 4 ರಿಂದ ಕೇದಾರನಾಥ ದರ್ಶನಕ್ಕೆ ಅವಕಾಶ, ಹಸಿರು ವಲಯದ ಜಿಲ್ಲೆಗಳ ಭಕ್ತರು ಭೇಟಿ ನೀಡಬಹುದು

    ಕ್ಯಾಮರಾ ಎದುರು ಶರ್ಟ್ ಕಳಚಿದರೆ, ದತ್​ಗೂ ಆ ಲುಕ್ ಇಷ್ಟವಾಗಬೇಕಂತೆ. ಹಾಗಾಗಿ ನಿತ್ಯ ಹಲವು ಗಂಟೆಗಳ ಕಾಲ ಮನೆಯಲ್ಲಿನ ಜಿಮ್ಲ್ಲಿ ದೇಹದಂಡಿಸುತ್ತಿದ್ದಾರಂತೆ ದತ್.

    ಇತ್ತ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕೆಜಿಎಫ್ – ಚಾಪ್ಟರ್ 2’, ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಬೇರೆ ಭಾಷಿಕರೂ ಅಷ್ಟೇ ಕುತೂಹಲದಲ್ಲಿ ಈ ಸಿನಿಮಾ ಆಗಮನಕ್ಕೆ ಕಾಯುತ್ತಿದ್ದಾರೆ. ಸಿನಿಮಾ ತಂಡವೇ ಹೇಳಿಕೊಂಡಂತೆ ಅಕ್ಟೋಬರ್ 23ಕ್ಕೆ ಕನ್ನಡ ಸೇರಿ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಚಿತ್ರ ತೆರಕಾಣಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts