ಮಾಲ್ಡೀವ್ಸ್​ಗೆ ತೆರಳುವ ಭಾರತೀಯ ಪ್ರವಾಸಿಗರಲ್ಲಿ ಶೇ.33 ಕುಸಿತ!

moldives
Published on

ಮಾಲೆ: ರಾಜತಾಂತ್ರಿಕ ವಿವಾದದ ನಂತರ ಮಾಲ್ಡೀವ್ಸ್ ಭಾರತೀಯ ಪ್ರವಾಸಿಗರಲ್ಲಿ ಶೇ.33 ಕುಸಿತವನ್ನು ಕಂಡಿದೆ. ಇದರೊಂದಿಗೆ

2024 ರಲ್ಲಿ ಭಾರತವು ಪ್ರವಾಸಿಗರ ಆಗಮನದಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಆ ಪುಟ್ಟ ರಾಷ್ಟ್ರ ಆರ್ಥಿಕ ದಿವಾಳಿಯಾಗುವ ಸಅಧ್ಯತೆ ದಟ್ಟವಾಗಿದೆ.

ಕರೋನಾ ಸಮಯದಲ್ಲಿಯೂ ದ್ವೀಪ ರಾಷ್ಟ್ರಕ್ಕೆ ಭಾರತೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. 2020 ರಿಂದಲೂ ಮೊದಲ ಸ್ಥಾನದಲ್ಲಿ ಭಾರತವಿತ್ತು. ಆದರೆ ಮಾರ್ಚ್ 2 ರ ಹೊತ್ತಿಗೆ ಭಾರತದಿಂದ 27,224 ಪ್ರವಾಸಿಗರ ಆಗಮನವಾಗಿದೆ ಎಂದು ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 33 ಶೇಕಡಾ ಇಳಿಕೆಯಾಗಿದೆ.

ನವದೆಹಲಿ ಮತ್ತು ಮಾಲೆ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕ್ಷೀಣಿಸುತ್ತಿರುವುದರಿಂದ, ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ ಕಳೆದ ವರ್ಷ ಮಾರ್ಚ್‌ಗೆ ಹೋಲಿಸಿದರೆ ದೇಶದಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ 33 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ತೋರಿಸಿದೆ.

ಭಾರತ ಸರ್ಕಾರದ ಪ್ರವಾಸೋದ್ಯಮ ಅಭಿಯಾನದ ಭಾಗವಾಗಿ ಲಕ್ಷ ದ್ವೀಪಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿರುವುದು ಮತ್ತು ಆ ದೇಶದ ಆಡಳಿತ ಭಾರತದ ವಿರೋಧಿ ನಿಲುವು ತಳೆದಿರುವುದು ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಭಾರತವು ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿರುವುದು ಒಂದೆಡೆಯಾದರೆ ಚೀನಾ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡಿದೆ. ಚೀನಾ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ಬಲಗೊಳ್ಳುತ್ತಿದ್ದಂತೆ, 2024 ರಲ್ಲಿ ದೇಶಕ್ಕೆ 54,000 ಪ್ರವಾಸಿಗರ ಆಗಮನವನ್ನು ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net