

Kanthara Chapter 1 : ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆಯನ್ನು ಮುಂದುವರಿಸಿದೆ.
ಕಾಂತಾರ-1 ಚಿತ್ರಕ್ಕೆ ಎಲ್ಲಡೆ ಉತ್ತಮ ವಿಮರ್ಶೆಗಳು ಬರುತ್ತಿದ್ದು, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನಗೊಳ್ಳುತ್ತಲೇ ಇದೆ. ಈ ಪರಿಸ್ಥಿತಿಯಲ್ಲಿ, ಮಲಯಾಳಂ ಚಿತ್ರವೊಂದರ ಬಿಡುಗಡೆಯನ್ನು ಮುಂದೂಡಲಾಗಿದೆ. 'ನೆಲ್ಲಿಕಂಪೊಯಿಲ್ ನೈಟ್ ರೈಡರ್ಸ್' ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹೋಗಿದೆ.
ಮಲಯಾಳಿಗಳ ನೆಚ್ಚಿನ ನಟ ಮ್ಯಾಥ್ಯೂ ಥಾಮಸ್ ನೆಲ್ಲಿಕಂಪೊಯಿಲ್ ನೈಟ್ ರೈಡರ್ಸ್ ಚಿತ್ರದ ಪೋಸ್ಟರ್ ಅಂಟಿಸುತ್ತಿರುವ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮ್ಯಾಥ್ಯೂ ಅವರ ಜೊತೆ ಶರತ್ ಸಭಾ ಮತ್ತು ಮೀನಾಕ್ಷಿ ಉನ್ನಿಕೃಷ್ಣನ್ ಕೂಡ ಇದ್ದಾರೆ. ಮಧ್ಯರಾತ್ರಿಯಲ್ಲಿ ನಗರದ ಬೀದಿ ಬದಿಯಲ್ಲಿ ಪೋಸ್ಟರ್ ಅಂಟಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ವೈರಲ್ ಆಗಿರುವ ವಿಡಿಯೋವನ್ನು ಚಿತ್ರದ ಬಿಡುಗಡೆಯನ್ನು ಈ ತಿಂಗಳ 24ಕ್ಕೆ ಮುಂದೂಡಲಾಗಿದೆ ಎಂಬುದನ್ನು ತಿಳಿಸಲು ಮಾಡಿದಂತಿದೆ. ಮ್ಯಾಥ್ಯೂ ಥಾಮಸ್ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಂತಾರ ತಂಡವನ್ನು ಅಭಿನಂದಿಸಿದ್ದಾರೆ. ನಾವು ಲೆಜೆಂಡ್ಗೆ ನಮಸ್ಕರಿಸುತ್ತಾ ಅ.24ಕ್ಕೆ ನಾವು ಚಿತ್ರಮಂದಿರಕ್ಕೆ ಬರುತ್ತೇವೆ ಎಂಬ ಶೀರ್ಷಿಕೆಯನ್ನು ಸೇರಿಸಿದ್ದಾರೆ. (ಏಜೆನ್ಸೀಸ್)