ಹುಡುಗಿಯರು ಜಿರಳೆ ಕಂಡರೆ ಸಾಕು ಹೆದರಿ ಕಿರುಚುವುದೇಕೆ? ವರ್ಷಗಳ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ...Cockroach

Cockroach
Published on

Cockroach : ಒಲಿದರೆ ನಾರಿ ಮುನಿದರೆ ಮಾರಿ ಅನ್ನೋ ಮಾತನ್ನು ನೀವು ಕೇಳಿರುತ್ತೀರಿ. ಈ ಹಿಂದೆ ಹೆಣ್ಣು ಅಂದ್ರೆ ದುರ್ಬಲಳು ಎನ್ನುತ್ತಿದ್ದರು. ಆದರೆ, ಇಂದು ಅಡುಗೆ ಮನೆಯಲ್ಲಿ ಸೌಟು ಹಿಡಿಯುವುದರಿಂದ ಹಿಡಿದು ಯುದ್ಧಭೂಮಿಯಲ್ಲಿ ಬಂದೂಕು ಹಿಡಿದು ಎದುರಾಳಿಗಳ ಎದೆ ಸೀಳುವಷ್ಟು ಬಲಿಷ್ಠಳಾಗಿದ್ದಾಳೆ. ಆದರೆ, ಬಹುತೇಕ ಹೆಣ್ಣು ಮಕ್ಕಳು ಇಂದಿಗೂ ಹೆದರುವ ಒಂದು ಸಾಮಾನ್ಯ ಸಂಗತಿ ಎಂದರೆ ಅದು ಜಿರಳೆ.

ಹೌದು, ಮನೆಯಲ್ಲಿ ಜಿರಳೆ ಕಂಡರೆ ಸಾಕು ಆಕಾಶವೇ ಕಳಚಿಬಿತ್ತು ಎನ್ನುವಷ್ಟರಮಟ್ಟಿ ಕಿರುಚಾಡುತ್ತಾರೆ. ಜಿರಳೆಯನ್ನು ನೋಡಿ ಹೆದರುವ ನಾಯಕಿ, ನಾಯಕನ್ನು ಅಪ್ಪಿಕೊಂಡು ಭಯದರಿಂದ ನಡಗುವ ದೃಶ್ಯಗಳನ್ನು ಸಹ ನೀವು ಸಿನಿಮಾಗಳಲ್ಲಿ ನೋಡಿರುತ್ತೀರಿ. ಆದರೆ, ಈ ರೀತಿ ಹೆದರಿಕೆ ಅಥವಾ ಭಯ ಕೇವಲ ಹುಡುಗಿಯರಲ್ಲೇ ಏಕೆ ಎಂಬ ಪ್ರಶ್ನೆ ನಿಮಗೆ ಎಂದಾದರೂ ಕಾಡಿದೆಯಾ? ಅಥವಾ ಎಂದಾದರೂ ಈ ಬಗ್ಗೆ ಯೋಚನೆ ಮಾಡಿದ್ದೀರಾ? ಈ ಪ್ರಶ್ನೆಗೆ ಇಂದಿಗೂ ನಿಮ್ಮನ್ನು ಕಾಡುತ್ತಿದೆಯಾ? ಹಾಗಾದರೆ, ಚಿಂತಿಸಬೇಡಿ ನಾವಿಂದು ನಿಮಗಾಗಿ ಒಂದು ಅಚ್ಚರಿಯ ಉತ್ತರವನ್ನು ಹೊತ್ತು ತಂದಿದ್ದೇವೆ.

ಅಂದಹಾಗೆ, ಇದು ಕೇವಲ ಮೋಜಿನ ವಿಷಯವಲ್ಲ. ಇಲ್ಲಿ ಚಿಂತಿಸಬೇಕಾದ ವಿಷಯವೊಂದಿದೆ. ಅದೇನೆಂದರೆ, ನಮ್ಮ ಸಮಾಜ ಹಿಂದಿನಿಂದಲೂ ಮಹಿಳೆಯರನ್ನು ಕೆಲವು ಸಂಕೋಲೆಗಳಲ್ಲಿ ಕಟ್ಟಿಹಾಕಿದ್ದಾರೆ. ಅಂದರೆ, ಭಯಪಡುವುದು, ಅಳುವುದು ಹಾಗೂ ಕಿರುಚುವುದು ಮಹಿಳೆಯರ ಗುಣಗಳು ಎಂದು ಮುದ್ರೆ ಒತ್ತಿದ್ದಾರೆ. ಒಂದು ವೇಳೆ ಗಂಡಸರಲ್ಲಿ ಯಾರಾದರೂ ಇಂತಹ ಭಾವನೆಗಳನ್ನು ವ್ಯಕ್ತಪಡಿಸಿದರೆ, ಅವರನ್ನು ನೀನೇನೂ ಹೆಣ್ಣಾ? ಎಂದು ಕೇಳುವುದು ನಮ್ಮ-ನಿಮ್ಮ ಕಿವಿಗೆ ಸಾಕಷ್ಟು ಬಾರಿ ಬಿದ್ದಿದೆ ಮತ್ತು ಇಂದಿಗೂ ಬೀಳುತ್ತಲೇ ಇದೆ.

ಈ ಒಂದು ಕಾರಣಕ್ಕೆ ಹುಡುಗರಿಗೆ ಭಯ ಇದ್ದರು ಕೂಡ ಅದನ್ನು ಯಾರ ಮುಂದೆಯೂ ತೋರಿಸದೆ ತಮ್ಮೊಳಗೆ ಅದುಮಿಟ್ಟುಕೊಳ್ಳುತ್ತಾರೆ. ಭಯ ಇದೆ ಎಂದು ತೋರಿಸಿಕೊಂಡರೆ ಎಲ್ಲಿ ಎಲ್ಲರು ಅಪಹಾಸ್ಯ ಮಾಡಿಬಿಡುತ್ತಾರೆ ಎಂದು ಯೋಚಿಸುವವರೇ ಹೆಚ್ಚು. ಆದರೆ, ಹುಡುಗಿಯರ ವಿಷಯದಲ್ಲಿ ಆ ರೀತಿ ಅಲ್ಲ. ಭಯವಿಲ್ಲದೆ ನಡೆದುಕೊಂಡರೆ ಆಕೆಗೆ ಅಹಂಕಾರ ಅಥವಾ ಆಕೆ ಸಾಧಾರಣದವಳಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ.

ಅಂದಹಾಗೆ, ಹೆಣ್ಣು ಮಕ್ಕಳಿಗೆ ಜಿರಳೆ ಕಂಡರೆ ಭಯವಿರುವುದಕ್ಕೆ ಕೆಲವು ವಿಶಿಷ್ಟ ಕಾರಣಗಳಿವೆ. ಅವುಗಳು ಏನೆಂದು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.

ಶುಚಿತ್ವ

ಸಮಾಜವು ಮನೆಯ ಶುಚಿತ್ವದ ಹೊಣೆ ಮಹಿಳೆಯರದ್ದು ಎಂದು ಮೊದಲಿನಿಂದ ಪ್ರತಿಪಾದಿಸಿದೆ. ಹಾಗಾಗಿ ಮನೆಯನ್ನು ಸ್ವಚ್ಛಗೊಳಸುವಾಗ ಜಿರಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳವುದು ಹೆದರಿಗೆ ಒಂದು ಕಾರಣವಾಗಿದೆ.

ಸೂಕ್ಷ್ಮಸ್ವಭಾವ

ಗಂಡು ಮತ್ತು ಮಹಿಳೆಯನ್ನು ಹೋಲಿಸಿದರೆ ಮಹಿಳೆಯನ್ನು ಸಮಾಜದಲ್ಲಿ ಸೂಕ್ಷ್ಮಸ್ವಭಾವದಿಂದಲೂ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಹೀಗಾಗಿ ಜೀರಳೆ ಕಂಡರೆ ಸೂಕ್ಷ್ಮ ಮನಸ್ಸಿನ ಹೆಣ್ಣು ಮಕ್ಕಳು ಭಯಪಡುತ್ತಾರೆ. ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಸಂಗತಿ ಏನೆಂದರೆ, ಎಲ್ಲಾ ಮಹಿಳೆಯರು ಭಯ ಪಡುವುದಿಲ್ಲ. ಕೆಲವರು ಮಾತ್ರ.

ದೈಹಿಕ ದುರ್ಬಲತೆ

ಮಹಿಳೆಯರು ಪುರುಷರಿಗಿಂತ ದೈಹಿಕವಾಗಿ ಕಡಿಮೆ ಶಕ್ತಿ ಹೊಂದಿರುವುದು ಕೂಡ ಹೆದರಿಕೆಗೆ ಒಂದು ಕಾರಣವಾಗಿರಬಹುದು.

ಜಿರಳೆಯ ತ್ವರಿತ ಚಲನೆ ಮತ್ತು ಆಕಾರ

ಜಿರಳೆ ತಕ್ಷಣ ಓಡುವುದು. ಆಕಸ್ಮಿಕವಾಗಿ ಮೈ ಮೇಲೆ ಎಲ್ಲಿ ಬಿದ್ದು ಬಿಡುತ್ತದೆಯೋ ಎಂಬ ಭಯ ಕೂಡ ಹೆದರಿಕೆಗೆ ಕಾರಣವಾಗಬಹುದು. ಅಲ್ಲದೆ, ಜಿರಳೆಯ ಆಕಾರವೇ ವಿಚಿತ್ರವಾಗಿದ್ದು, ಅದು ಕೆಲವರಲ್ಲಿ ಹೆದರಿಕೆ ಹುಟ್ಟಿಸಬಹುದು. ಇನ್ನು ಜಿರಳೆ ಮೈಮೇಲೆ ಹರಿದಾಡಿದರೆ ಅದರಿಂದ ಕಿರಿಕಿಯೇ ಹೆಚ್ಚು. ಹೀಗಾಗಿ ಭಯಕ್ಕೆ ಇದು ಕೂಡ ಒಂದು ಕಾರಣವಾಗಿರಬಹುದು.

ಜೀವಿಗಳನ್ನು ಕೊಲ್ಲಲು ಇಷ್ಟವಿಲ್ಲದ ಮನೋಭಾವನೆ

ಕೆಲವು ಮಹಿಳೆಯರು ಜಿರಳೆಯನ್ನು ಕೊಲ್ಲುವ ಬದಲು ಕಿರುಚುವುದು ಅಥವಾ ಅದರಿಂದ ದೂರ ಓಡುವುದೇ ಸೂಕ್ತವೆಂದು ನಂಬುತ್ತಾರೆ.

ಒಟ್ಟಿನಲ್ಲಿ ಹುಡುಗಿಯರು ಜಿರಳೆಯನ್ನು ನೋಡಿ ಕಿರುಚುವುದು ಸ್ವಾಭಾವಿಕವಾದ ಪ್ರಕ್ರಿಯೆಯಾಗಿದೆ. ಆದರೆ, ಇಂತಹ ಅನೇಕ ಸಂಗತಿಗಳು ಸಮಾಜದಲ್ಲಿ ಕಂಡುಬರಲು ಸಾಮಾಜಿಕ ಮನೋಭಾವನೆಗಳು, ಪ್ರಾಕೃತಿಕ ಲಕ್ಷಣಗಳು ಮತ್ತು ವ್ಯಕ್ತಿಗತ ಅನುಭವಗಳ ಮಿಶ್ರಣವೇ ಮುಖ್ಯ ಕಾರಣವಾಗಿದೆ ಎಂದು ಹೇಳಬಹುದು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net