

ಮಂಡ್ಯ: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆಗೆ ರಾಜ್ಯದ್ಯಂತ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ದೊರೆತ್ತಿದ್ದು, ಬಸ್ನಲ್ಲಿ ಪ್ರಯಾಣಿಸಲು ನೂಕುನುಗ್ಗಲು ಉಂಟಾಗುತ್ತಿದೆ.
ಸೋಮವಾರ ಮಳವಳ್ಳಿಯಲ್ಲಿ ಬಸ್ ಹತ್ತುವ ವೇಳೆ ನೂಕುನುಗ್ಗಲು ಉಂಟಾದ ಕಾರಣ ಡೋರ್ ಕಳಚಿ ಬಿದ್ದಿತ್ತು ಎಂಬ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇನ್ನು ವೈರಲ್ ಸುದ್ದಿಯ ಕುರಿತು ಡಿಪೋ ವ್ಯವಸ್ಥಾಪಕ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಕಳಚಿಕೊಳ್ಳುವ ಹಂತದಲ್ಲಿದ್ದ ಬಸ್ನ ಡೋರ್ಅನ್ನು ಚಾಲಕ ಹಾಗೂ ನಿರ್ವಾಹಕ ಮುಂಜಾಗ್ರತ ಕ್ರಮವಾಗಿ ಅದನ್ನು ಬದಲಾಯಿಸಿದ್ಧಾರೆ. ಮಹಿಳೆಯರೇ ಬಸ್ನ ಡೋರ್ ಮುರಿದರು ಎಂದರೆ ಅದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ಧಾರೆ.
ಮಳವಳ್ಳಿಯಿಂದ ಮೈಸೂರಿನತ್ತ ಹೊರಟ್ಟಿದ್ದ ಬಸ್ನ ಡೋರ್ ಮೊದಲೇ ಅಲುಗಾಡುತ್ತಿತ್ತು. ಮಹಿಳಾ ಪ್ರಯಾಣಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ಏರುತ್ತಿದ್ದರು. ಬಾಗಿಲು ಕಿತ್ತು ಬರುವ ಅಪಾಯವನ್ನು ಅಇರತ ಚಾಲಕ ಹಾಗೂ ನಿರ್ವಾಹಕ ಕೂಡಲೇ ಡಿಪೋ ಅಧಿಕಾರಿಗಳಿಗೆ ಮಾಹಿತಿ ನೀಡಿ ಹೊಸ ಡೋರ್ ಒಂದನ್ನು ತರಿಸಿಕೊಂಡಿದ್ಧಾರೆ.
ಡೋರ್ ಬದಲಾಯಿಸುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣ ಮಹಿಳೆಯರೇ ಬಸ್ನ ಬಾಗಿಲನ್ನು ಕಿತ್ತು ಹಾಕಿದ್ಧಾರೆ ಎಂದು ಗೊಂದಲ ಸೃಷ್ಟಿಯಾಯಿತ್ತು ಎಂದು ಘಟನೆ ಕುರಿತು ಮಾಹಿತಿ ನೀಡಿದ್ಧಾರೆ.