ಅರ್ಜುನ್​ ಕಪೂರ್​​ ಜತೆಗಿನ ಬ್ರೇಕಪ್​ ಕುರಿತು ಮಲೈಕಾ ಮೊದಲ ರಿಯಾಕ್ಷನ್​​; ನಟಿ ಹೇಳಿದಿಷ್ಟು.. | Malaika Arora

Untitled design - 2024-11-25T145957.220
Published on

ಮುಂಬೈ: ಮಲೈಕಾ ಅರೋರಾ(Malaika Arora) ಮತ್ತು ಅರ್ಜುನ್​ ಕಪೂರ್​​ 2018ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಈ ಜೋಡಿ ಆಗಾಗ್ಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಲದಲ್ಲಿ ಹಂಚಿಕೊಳ್ಳುತ್ತಿದ್ದರು. ವಿಶೇಷ ಸಂದರ್ಭಗಳಲ್ಲಿ ಪರಸ್ಪರ ಶುಭಹಾರೈಸುತ್ತಿದ್ದರು. ಹಲವು ಬಾರಿ ಇವರ ಬ್ರೇಕಪ್​ ವದಂತಿಗಳ ಕಾಡ್ಗಿಚ್ಚಿನಂತೆ ಹರಡುತಿತ್ತು. ಆ ಸಮಯದಲ್ಲಿ ಇಬ್ಬರಲ್ಲಿ ಒಬ್ಬರು ಊಹಾಪೋಹಗಳಿಗೆ ಉತ್ತರಿಸುತ್ತಿದ್ದರು. ಆದರೆ ಇತ್ತೀಚೆಗೆ ಸ್ವತಃ ಅರ್ಜುನ್​​​ ಕಪೂರ್​​​​​​​ ತಾನು ಒಬ್ಬಂಟಿ ಎಂದು ಹೇಳುವ ಮೂಲಕ ಬ್ರೇಕಪ್​ ವಿಚಾರವನ್ನು ಹಂಚಿಕೊಂಡಿದ್ದರು.

ಮಲೈಕಾ ಅರೋರಾ ಕೊನೆಯೂ ಮೌನಮುರಿದು ತಮ್ಮ ಸಂಬಂಧದ ಕುರಿತು ಮಾತನಾಡಿದ್ದಾರೆ. ಈ ವಿಷಯವನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ಈ ದಿನಗಳಲ್ಲಿ ಅವರು ಯಾವ ರೀತಿಯ ಸಂಬಂಧದ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆಂದು ಹೇಳಿದ್ದಾರೆ. ಪೋಸ್ಟ್​ನಲ್ಲಿ ಈಗ ನನ್ನ ಸ್ಥಿತಿ ಏನಾಗಿದೆ ಎಂದು ಬರೆದುಕೊಂಡಿದ್ದಾರೆ. ಅದರಲ್ಲಿ ಮೂರು ಆಯ್ಕೆಗಳನ್ನು ಬರೆಯಲಾಗಿದೆ. ಇನ್ ಎ ರಿಲೇಶನ್ ಶಿಪ್, ಸಿಂಗಲ್, ಹೇಹೆ...ಮಲೈಕಾ ಈ ಪೋಸ್ಟ್ ನಲ್ಲಿ ಹೆಹೆಹೆ ಎಂಬ ಆಯ್ಕೆಯನ್ನು ಹೈಲೈಟ್​​ ಮಾಡಿದ್ದಾರೆ. ಮಲೈಕಾ ಅವರು ಅರ್ಜುನ್ ಕಪೂರ್ ಜತೆ ಬೇರ್ಪಟ್ಟಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸೂಚಿಸುತ್ತಿದ್ದಾರೆ ಎನ್ನಲಾಗಿದೆ.

ಅದಲ್ಲದೆ ನಟಿ ಇನ್ನೊಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ಅದರಲ್ಲಿ ಬಿ ಸಿಲ್ಲಿ, ಬಿ ಫ್ರೀ, ಬಿ ಯು, ಬಿ ಅವೇಸಮ್. ಲೈಫ್ ತುಂಬಾ ಚಿಕ್ಕದಾಗಿದೆ ಆದರೆ ಸಂತೋಷವಾಗಿರಲು ಏನು ಇಲ್ಲ ಎಂದು ಬರೆದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್​ ಆಗುತ್ತಿದೆ. ಅರ್ಬಾಜ್ ಖಾನ್‌ಗೆ ವಿಚ್ಛೇದನ ನೀಡಿದ ನಂತರ ಮಲೈಕಾ ಅರೋರಾ ತನಗಿಂತ 11 ವರ್ಷ ಚಿಕ್ಕವರಾಗಿದ್ದ ನಟ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್​ ಪ್ರಾರಂಭಿಸಿದ್ದರು.

ಮಲೈಕಾ ಅರೋರಾ ಪ್ರಸ್ತುತ ಡ್ಯಾನ್ಸ್ ರಿಯಾಲಿಟಿ ಶೋ ಚಾಂಪಿಯನ್ಸ್ ಕಾ ತಾಶನ್‌ನಲ್ಲಿ ತೀರ್ಪುಗಾರರಾಗಿದ್ದಾರೆ. ಈ ಕಾರ್ಯಕ್ರಮವನ್ನು ಕೃಷ್ಣಾ ಅಭಿಷೇಕ್ ಮತ್ತು ಹರ್ಷ್ ಲಂಬಾಚಿಯಾ ನಡೆಸಿಕೊಡುತ್ತಿದ್ದು, ಮಲೈಕಾ ಜತೆಗೆ ರೆಮೋ ಡಿಸೋಜಾ ಮತ್ತು ಗೀತಾ ಕಪೂರ್ ತೀರ್ಪುಗಾರರಾಗಿದ್ದಾರೆ. ಮತ್ತೊಂದೆಡೆ ಅರ್ಜುನ್ ಕಪೂರ್ ಪ್ರಸ್ತುತ ತಮ್ಮ ಇತ್ತೀಚಿನ ಬಿಡುಗಡೆಯಾದ ಸಿಂಗಮ್ ಎಗೇನ್ ಯಶಸ್ಸನ್ನು ಆನಂದಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ಅವರ ಚಿತ್ರದಲ್ಲಿನ ಖಳನಾಯಕನ ಪಾತ್ರಕ್ಕಾಗಿ ಅರ್ಜುನ್​ ಕಪೂರ್​​ ಅಪಾರ ಮೆಚ್ಚುಗೆ ಪಡೆದಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net