

ಮುಂಬೈ: ಮಲೈಕಾ ಅರೋರಾ(Malaika Arora) ಮತ್ತು ಅರ್ಜುನ್ ಕಪೂರ್ ಬಾಲಿವುಡ್ನ ಕ್ಯೂಟ್ ಜೋಡಿ. ಸುಮಾರು 6 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಕೆಲವು ತಿಂಗಳ ಹಿಂದೆ ಪರಸ್ಪರ ಬೇರ್ಪಟ್ಟರು. ಇವರಿಬ್ಬರು ತಮ್ಮ ಸಂಬಂಧದ ಸಮಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಅದರಲ್ಲೂ ಮಲೈಕಾ ಅವರ ವಯಸ್ಸಿನ ವಿಚಾರ ಮಾತ್ರ ಟ್ರೋಲಿಂಗ್ ಆಗುತ್ತಲೇ ಇತ್ತು. ಆದರೆ ಇದೆಲ್ಲದರ ಹೊರತಾಗಿಯೂ ಅವರು ಪರಸ್ಪರ ಬೆಂಬಲವಾಗಿ ನಿಂತಿದ್ದರು.
ಈ ವರ್ಷದ ಅಕ್ಟೋಬರ್‌ನಲ್ಲಿ ನಡೆದ ದೀಪಾವಳಿ ಪಾರ್ಟಿಯಲ್ಲಿ ಅರ್ಜುನ್ ತಮ್ಮ ಸಿಂಗಲ್ ಸ್ಟೇಟಸ್ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದರು. ಅದಕ್ಕೂ ಮೊದಲು ಮಲೈಕಾ ಮತ್ತು ಅರ್ಜುನ್ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಲವು ಬಾರಿ ರಹಸ್ಯ ಪೋಸ್ಟ್‌ಗಳನ್ನು ಮಾಡಿದ್ದರು. ಇದರಿಂದಾಗಿ ಅವರ ನಡುವೆ ವಿಷಯಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಊಹಾಪೋಹಾಗಳು ಬಿಟೌನ್ ಅಂಗಳದಲ್ಲಿ ಹರಿದಾಡುತಿತ್ತು.
ಅಂದು ಅರ್ಜುನ್ ಕಪೂರ್ ಹೇಳಿದ್ದ 'ಐ ಆಮ್ ಸಿಂಗಲ್' ಹೇಳಿಕೆಗೆ ಇದೀಗ ಮಲೈಕಾ ಪ್ರತಿಕ್ರಿಯಿಸಿದ್ದಾರೆ. ಎರಡು ತಿಂಗಳ ಕಾಲ ಬ್ರೇಕಪ್ ಬಗ್ಗೆ ಮೌನ ವಹಿಸಿದ್ದ ಮಲೈಕಾ ಅರೋರಾ ಕೊನೆಗೂ ಮಾತನಾಡಿದ್ದಾರೆ. ಆದರೆ ಮಲೈಕಾ ಅವರ ಈ ಹೇಳಿಕೆಯು ಮಾಜಿ ಗೆಳೆಯನಿಗೆ ವ್ಯಂಗ್ಯ ಮಾಡಿದ್ದಂತಿದೆ.
ಅರ್ಜುನ್‌ನಂತೆ ನಾನು, ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸಲು ಇಷ್ಟಪಡುವುದಿಲ್ಲ ಎಂದು ಮಲೈಕಾ ಹೇಳಿದ್ದಾರೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ನಾನು ಎಂದಿಗೂ ಸಾರ್ವಜನಿಕ ವೇದಿಕೆಯನ್ನು ಬಳಸುವುದಿಲ್ಲ. ಆದ್ದರಿಂದ ಅರ್ಜುನ್ ಹೇಳಿದ್ದೆಲ್ಲ ಅವರ ಅನುಕೂಲಕ್ಕೆ ಮಾತ್ರ. ಈ ವರ್ಷ ತಮಗೆ ಸವಾಲಿನದ್ದಾಗಿದೆ, ಆದರೆ ಹೊಸ ವರ್ಷದಲ್ಲಿ ಹೊಸ ಆರಂಭಕ್ಕೆ ಸಿದ್ಧಳಾಗಿದ್ದೇನೆ ಎಂದು ಹೇಳಿದರು.
ಅಕ್ಟೋಬರ್ 2024ರಲ್ಲಿ ಮುಂಬೈನಲ್ಲಿ ರಾಜ್ ಠಾಕ್ರೆ ಅವರ ದೀಪಾವಳಿ ಪಾರ್ಟಿಯಲ್ಲಿ ಅರ್ಜುನ್ ಕಪೂರ್ ಅವರು ಮಲೈಕಾ ಅವರೊಂದಿಗಿನ ಬ್ರೇಕಪ್ ವಿಚಾರವನ್ನು ಖಚಿತಪಡಿಸಿದರು. ಮಲೈಕಾ ಹೆಸರಿಟ್ಟು ಚುಡಾಯಿಸುತ್ತಿದ್ದಾಗ ಅರ್ಜುನ್ 'ಇಲ್ಲ, ನಾನೀಗ ಒಂಟಿಯಾಗಿ, ಆರಾಮಾಗಿದ್ದೇನೆ' ಎಂದು ಹೇಳಿದ್ದರು.
ಅರ್ಜುನ್ ಅವರ ಕಾಮೆಂಟ್ ನಂತರ ಮಲೈಕಾ ತನ್ನ ಇನ್‌ಸ್ಟಾಗ್ರಾಮ್ ಕಥೆಗಳಲ್ಲಿ ಹಲವು ಪೋಸ್ಟ್‌ಗಳನ್ನು ಮಾಡಿದರು. ಅಲ್ಲಿ ಅವರು ತಮ್ಮ ಸಂಬಂಧದ ಸ್ಥಿತಿಗೆ 'ಹೆಹೆ' ಎಂದು ಬರೆದಿದ್ದಾರೆ ಮತ್ತು ಸಂಬಂಧಗಳ ಮೌಲ್ಯಗಳ ಕುರಿತು ವಿಷಯಗಳನ್ನು ಬರೆದಿದ್ದಾರೆ. ಮದುವೆ ಮತ್ತು ಸಂಬಂಧಗಳಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಮಲೈಕಾ ಮುಕ್ತವಾಗಿ ಮಾತನಾಡಿದ್ದಾರೆ. 'ನನ್ನ ಪ್ರಕಾರ, ನೀವು ಮದುವೆಯಾಗುವಾಗ ಅಥವಾ ನೀವು ಯಾರೊಂದಿಗಾದರೂ ಎಲ್ಲವನ್ನೂ ಒಂದೇ ರೀತಿ ಮಾಡಲು ಬಯಸುವ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತೀರಿ ಆದರೆ ನಿಮ್ಮ ಸ್ವಂತ ಗುರುತನ್ನು ಹೊಂದಿರುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.(ಏಜೆನ್ಸೀಸ್)