ಅನಂತೋಡಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಪೂಜೆ

Bel_Ananthodi Temple
Published on

ಬೆಳ್ತಂಗಡಿ: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭಾ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯಂದು ದೇವರಿಗೆ ದೀಪಾಲಂಕಾರ, ರಂಗಪೂಜೆ ಮತ್ತು ವಾರ್ಷಿಕ ಜಾತ್ರಾ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದವರಿಗೆ ಅಭಿನಂದನಾ ಕಾರ್ಯಕ್ರಮ, ಲೆಕ್ಕಪತ್ರ ಮಂಡನೆ ದೇವಸ್ಥಾನದಲ್ಲಿ ನಡೆಯಿತು.

ಜಾತ್ರಾ ಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಉದಿತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಾರಪ್ಪ ಪೂಜಾರಿ ಬೆಳಾಲು ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದ ಮೊದಲು ರಂಗಪೂಜೆ, ಮಕ್ಕಳ ಭಜನಾ ತಂಡದಿಂದ ಕುಣಿತ ಭಜನೆ ನೆರವೇರಿತು.

ಧಾರ್ಮಿಕ ಮುಖಂಡ ದಾಮೋದರ ಶರ್ಮ ಕಾರ್ಕಳ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ ಜಾತ್ರೆಯ ಯಶಸ್ವಿಗೆ ಗ್ರಾಮಸ್ಥರ ಸಹಕಾರದ ಕುರಿತು ಮಾತನಾಡಿದರು. ದೇವಸ್ಥಾನ ಮೊಕ್ತೇಸರ ಜೀವಂಧರ ಕುಮಾರ್ ಜೈನ್ ಬೆಳಾಲು ಗುತ್ತು, ಆಸ್ರಣ್ಣ ಗಿರೀಶ್ ಬಾರಿತ್ತಾಯ ಪಾರಾಳ, ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಶ್ರೀ ಅನಂತೇಶ್ವರ ಭಜನಾ ಮಂಡಳಿ ಅಧ್ಯಕ್ಷ ನವೀನ್ ಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಉಪಸಮಿತಿ ಸಂಚಾಲಕರು, ಸಹ ಸಂಚಾಲಕರು, ಬೈಲುವಾರು ಸಮಿತಿ ಸಂಚಾಲಕರು, ಭಜನಾ ಮಂಡಳಿ, ಮಹಿಳಾ ತಂಡ, ಅನಂತೋಡಿ ಫ್ರೆಂಡ್ಸ್ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ ಪ್ರಸ್ತಾವನೆಗೈದರು. ದೇವಸ್ಥಾನದ ಲೆಕ್ಕ ಪರಿಶೋಧಕ ನಾರಾಯಣ ಗೌಡ ಎಳ್ಳುಗದ್ದೆ ಲೆಕ್ಕಪತ್ರ ಮಂಡಿಸಿದರು. ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ ಸ್ವಾಗತಿಸಿದರು. ಗಿರೀಶ್ ಮಂಜೊತ್ತು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ ಗೌಡ ವಂದಿಸಿದರು.

ರಂಗಪೂಜೆ ಹಾಗೂ ದೀಪಾಲಂಕಾರದ ಸೇವಾಕರ್ತರಾಗಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ ಮತ್ತು ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾಶ್ರೀನಿವಾಸ ಗೌಡ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net