ಪ್ರಕೃತಿಯೊಡನೆ ನಂಟು ಬೆಸೆಯುವ ಹಬ್ಬ

Upp_festival
Published on

ಉಪ್ಪಿನಂಗಡಿ: ಸಂಕ್ರಾಂತಿ ಹಬ್ಬವೆನ್ನುವುದು ಪ್ರಕೃತಿಯೊಡನೆ ವಾನವನ ನಂಟನ್ನು ಬೆಸೆಯುವ ಹಬ್ಬವಾಗಿದ್ದು, ಅನ್ನ ನೀಡುವ ಭೂಮಿಯ ಬಗ್ಗೆ ಹಾಗೂ ದೇವನಿತ್ತ ಪ್ರಾಕೃತಿಕ ಕೊಡುಗೆಗಳ ಮಹತ್ವವನ್ನು ಅರ್ಥೈಸುವ ಕಾರ್ಯ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಡಗಿದೆ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಹರಿರಾಮಚಂದ್ರ ಹೇಳಿದರು.

ಉಪ್ಪಿನಂಗಡಿಯ ವೇದಶಂಕರ ನಗರದ ಶ್ರೀ ವಾಧವ ಶಿಶುಮಂದಿರದ ಸಂಕ್ರಾಂತಿ ಹಬ್ಬದಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಶಿಶು ಮಂದಿರದ ಪೋಷಕರ ಸಂದ ಅಧ್ಯಕ್ಷೆ ಶ್ರೀದೇವಿ ಗೌತಮ್ ಮಾತನಾಡಿ, ಸೂರ್ಯ ಚಲನೆಯ ಪಥ ಬದಲಾವಣೆಯೊಂದಿಗೆ ಪ್ರಕೃತಿಯಲ್ಲಿಯೂ ಮಹತ್ತರ ಬದಲಾವಣೆ ಕಾಣಲಾಗುತ್ತಿದೆ. ಈ ಸಂದರ್ಭದಲ್ಲಿ ದೇಹದ ಆರೋಗ್ಯ ರಕ್ಷಣೆಗಾಗಿ ಎಳ್ಳು-ಬೆಲ್ಲವನ್ನು ಸೇವಿಸುವ ಕ್ರಮವನ್ನು ಹಿರಿಯರು ಅನಾದಿಕಾಲದಿಂದಲೂ ನಡೆಸುತ್ತಾ ಬಂದಿದ್ದಾರೆ ಎಂದರು.

ಶಿಶು ಮಂದಿರದ ಆಡಳಿತ ಮಂಡಳಿ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಶ್ರೀ ಜನಾರ್ದನ್, ಪೋಷಕರ ಸಂದ ಉಪಾಧ್ಯಕ್ಷೆ ಭವ್ಯಾ, ಕಾರ್ಯದರ್ಶಿ ಲಲಿತಾ ಉಪಸ್ಥಿತರಿದ್ದರು. ಶಿಶು ಮಂದಿರದ ವಾತಾಜಿಗಳಾದ ಚೈತ್ರಾ, ಕಾಂತಿಮಣಿ, ಚಂದ್ರಾವತಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net