

Mahindra Thar: ಪೂರ್ವ ದೆಹಲಿಯ ಶೋ ರೂಮ್ ಒಂದರಲ್ಲಿ ಮಹಿಳೆಯೊಬ್ಬಳು ಏಕಾಏಕಿ ಆಕ್ಸಿಲರೇಟರ್ ತುಳಿದ ಹಿನ್ನೆಲೆ ಹೊಸ ಮಹೀಂದ್ರಾ ಥಾರ್ ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ. ಅಪಘಾತದ ನಂತರ ವೈರಲ್ ವಿಡಿಯೋದಲ್ಲಿ ಕಾರು ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪಿಟಿಐ ಪ್ರಕಾರ, ಸೋಮವಾರ ಸಂಜೆ ಕಾರು ಖರೀದಿಸಿದ ಬಳಿಕ ಧಾರ್ಮಿಕ ಪೂಜೆ ಮಾಡುವ ವೇಳೆ(ಕಾರಿಗೆ ಪೂಜೆ) ಮಹಿಳೆಯೊಬ್ಬಳು ಆಕ್ಸಿಲರೇಟರ್ ಮೇಲೆ ಆಕಸ್ಮಿಕವಾಗಿ ಕಾಲಿಟ್ಟಿದ್ದಾರೆ.
"ಮಾಲೀಕರು ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದರಿಂದ ಕಾರು ಶೋ ರೂಂನ ಗಾಜಿನ ಗೋಡೆಯನ್ನು ಭೇದಿಸಿ ನೆಲಕ್ಕೆ ಬಿದ್ದಿತು. ಒಂದು ಮೋಟಾರ್ ಸೈಕಲ್ ಕೂಡ ಹಾನಿಗೊಳಗಾಯಿತು. ಯಾವುದೆ ಪ್ರಾಣ ಹಾನಿ ಆಗಿಲ್ಲ ಎಂದು ಶೋರೂಮ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಇನ್ನು ಕಾರು ಖರೀದಿದಾರರಾದ 29ರ ಮಾನಿ ಪವಾರ್ ಎಂಬ ಮಹಿಳೆ ಧಾರ್ಮಿಕ ಪೂಜೆ ಮಾಡುವಾಗ(ಕಾರಿನ ಕೆಳಗೆ ನಿಂಬೆ ಹಣ್ಣು) ಆಕಸ್ಮಿಕವಾಗಿ ಕಾರು ಚಲಾಯಿಸಿದ್ದಾರೆ. ಈ ಹಿನ್ನೆಲೆ ಶೋ ರೂಂನ ಗಾಜಿನ ಗೋಡೆಯನ್ನು ಭೇದಿಸಿ ನೆಲಕ್ಕೆ ಬಿದ್ದಿತು ಎಂದು ಎನ್ಡಿಟಿವಿ ವರದಿ ಮಾಡಿದೆ. ಆದರೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್)