ಜೀವ ಉಳೀಬೇಕು ಅಂದ್ರೆ 35 ಕೋಟಿ ಕೊಡಿ ... ಮಹೇಶ್​ ಮಂಜ್ರೇಕರ್​​​ಗೆ ಬೆದರಿಕೆ

Mahesh Manjrekar - Final
Published on

ಗ್ಯಾಂಗ್​ಸ್ಟರ್​ ಒಬ್ಬ ಯಾರಿಗೋ ಫೋನ್​ ಮಾಡಿ ಜೀವ ಬೆದರಿಕೆ ಹಾಕುವುದು, ಹಫ್ತಾ ಕೇಳುವುದು ... ಇಂಥ ದೃಶ್ಯಗಳನ್ನೆಲ್ಲಾ ಮಹೇಶ್​ ಮಂಜ್ರೇಕರ್​ ಅವರ ಚಿತ್ರಗಳಲ್ಲಿ ನೋಡಿರಬಹುದು. ಈಗ ಅಂಥದ್ದೇ ಒಂದು ಅನುಭವ ಖುದ್ದು ಮಹೇಶ್​ ಮಂಜ್ರೇಕರ್​ ಅವರಿಗೆ ಆಗಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ, ಅಬು ಸಲೇಂ ಗ್ಯಾಂಗ್​ನವರು ಎಂದು ಹೇಳಿಕೊಂಡ ಯಾರೋ ಒಬ್ಬರು, ಬಾಲಿವುಡ್​ನ ಖ್ಯಾತ ನಟ ಮತ್ತು ನಿರ್ದೇಶಕ ಮಹೇಶ್​ ಮಂಜ್ರೇಕರ್​ ಅವರಿಗೆ ಬೆದರಿಕೆ ಹಾಕಿದ್ದಾರೆ. 35 ಕೋಟಿ ಹಫ್ತಾ ಕೊಡಬೇಕು ಎಂದು ಮೆಸೇಜ್​ ಕಳಿಸಿದ್ದಾರೆ.

ಇಂಥದ್ದೊಂದು ಮೆಸೇಜ್​ ನೋಡಿ ಗಾಬರಿಯಾಗಿರುವ ಮಹೇಶ್​ ಮಂಜ್ರೇಕರ್​, ಸೀದಾ ದಾದರ್​ ಪೊಲೀಸ್​ ಸ್ಟೇಶನ್​ಗೆ ಹೋಗಿ, ತಮಗೆ ಹೀಗೆಲ್ಲಾ ಆಗಿದೆ ಎಂದು ದೂರು ನೀಡಿದ್ದಾರೆ. ಅಬು ಸಲೇಂ ಗ್ಯಾಂಗ್​ನವನೆಂದು ಪರಿಚಯಿಸಿಕೊಂಡ ಯಾರೋ ಒಬ್ಬರು, 35 ಕೋಟಿ ರೂಪಾಯಿಗಳನ್ನು ಕೊಡಬೇಕು ಎಂದು ಧಮ್ಕಿ ಹಾಕಿದ್ದಾರೆ ಎಂದು ತಮ್ಮ ದೂರಿನಲ್ಲಿ ನಮೂದಿಸಿದ್ದಾರೆ.

ಈ ಪ್ರಕರಣದಲ್ಲಿ ಸ್ವಲ್ಪ ಸೂಕ್ಷ್ಮವಾಗಿರುವುದರಿಂದ, ದಾದರ್​ ಪೊಲೀಸ್​ ಸಿಬಬಂದಿಯು ಈ ಪ್ರಕರಣವನ್ನು ಆಂಟಿ ಎಕ್ಸ್ಟಾರ್ಶನ್​ ಸೆಲ್​​ಗೆ ವಗಾಯಿಸಿದೆ. ಈಗ ಈ ಪ್ರಕರಣವನ್ನು ಆಂಟಿ ಎಕ್ಸ್ಟಾರ್ಶನ್​ ಸೆಲ್​​ ತನಿಖೆ ನಡೆಸುತ್ತಿದ್ದು, ಈ ರೀತಿ ಬೆದರಿಕೆ ಹಾಕಿದ್ದು ಯಾರು ಎಂದು ವಿಚಾರಣೆ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net