'ಸರ್ಕಾರು ವಾರಿ ಪಾಠ'ಗೆ ಪ್ರಿನ್ಸ್ ಪಡೆದ ಸಂಭಾವನೆ ಎಷ್ಟು? ಶೀಘ್ರದಲ್ಲೇ 100 Cr ಪಡೆಯಲಿದ್ದಾರಾ ಮಹೇಶ್?

Published on
ಪ್ಯಾನ್ ಇಂಡಿಯಾ ಸಿನಿಮಾ, ಒಟಿಟಿ ವೇದಿಕೆ ಎನ್ನುವ ಕಾನ್ಸೆಪ್ಟ್​ಗಳು ಹೆಚ್ಚಾದಾಗಿನಿಂದ, ಚಿತ್ರರಂಗದ ಒಂದಿಷ್ಟು ನಷ್ಟಗಳಿಂದ ಸುಧಾರಿಸಿಕೊಂಡಿದೆ ಎಂದೇ ಹೇಳಬೇಕು. ಹೀಗಿರುವಾಗ, ಸಿನಿಮಾಗಳಲ್ಲಿ ನಟಿಸುವ ನಾಯಕ ನಟ ಮತ್ತು ನಾಯಕಿ ನಟಿಯರ ಜೊತೆಗೆ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸುವ ಕಲಾವಿದರು ಕೂಡ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಬಹುದು. ಹೀಗೆ, ಇತ್ತೀಚೆಗೆ ತಮ್ಮ ಸಂಭಾವನೆ ಹೆಚ್ಚಿಸಿಕೊಂಡ ನಟರ ಸಾಲಿಗೆ ನಟ ಮಹೇಶ್ ಬಾಬು ಅವರು ಕೂಡ ಎಂಟ್ರಿ ಕೊಟ್ಟಿದ್ದಾರೆ. ಹೌದು, ನಟ ಮಹೇಶ್ ಬಾಬು ಅವರ ಮುಂಬರುವ ಚಿತ್ರ ಎಂದರೆ ಅದು 'ಸರ್ಕಾರು ವಾರಿ ಪಾಠ'.
ಈ ಸಿನಿಮಾ ಈಗಾಗಲೇ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಚಿತ್ರದ ಸಣ್ಣ ಸಣ್ಣ ವಿಡಿಯೋ ತುಣುಕುಗಳು ಮತ್ತು ಒಂದಿಷ್ಟು ಪೋಸ್ಟರ್​ಗಳು ಬಹಳಷ್ಟು ಗಮನ ಸೆಳೆದವು. ಅಂದಹಾಗೆ, 'ಸರ್ಕಾರು ವಾರಿ ಪಾಠ' ಈ ಸಂಕ್ರಾಂತಿಗೆ ಬಿಡುಗಡೆಯಾಗ ಬೇಕಿತ್ತು. ಆದರೆ, ಹಲವು ಕಾರಣಗಳಿಂದ ಚಿತ್ರದ ರಿಲೀಸ್ ಮುಂದೂಡಲಾಗಿದೆ. ಆದರೆ, ಇದೀಗ ಟಾಲಿವುಡ್​ನ ಮತ್ತು ಹೆಣ್ಣು ಮಕ್ಕಳ ಪ್ರಿನ್ಸ್ ಮಹೇಶ್ ಬಾಬು ಅವರು ಈ ಸಿನಿಮಾಗೆ ಪಡೆದ ಸಂಭಾವನೆ ಎಲ್ಲರ ಹುಬ್ಬೇರಿಸುತ್ತಿದೆ. ನಟ ಮಹೇಶ್ ಬಾಬು 'ಸರ್ಕಾರು ವಾರಿ ಪಾಠ' ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 70 ಕೋಟಿ ಸಂಭಾವನೆ ಪಡೆದಿದ್ದಾರಂತೆ.
'ಸರ್ಕಾರು ವಾರಿ ಪಾಠ' ಸಿನಿಮಾದ ಹೊಸ ರಿಲೀಸ್ ಡೇಟ್ ಅನ್ನು ಚಿತ್ರತಂಡ ಇನ್ನು ತಿಳಿಸಬೇಕಾಗಿದ್ದು, ಈ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡರೆ, ನಟ ಮಹೇಶ್ ಬಾಬು ಅವರ ಸಂಭಾವನೆ ಮತ್ತಷ್ಟು, ಬಹುಶಃ 100 ಕೋಟಿಗೆ ಹೆಚ್ಚಾಗಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಈಗ, ಸೌತ್ ಸಿನಿಮಾರಂಗದಲ್ಲಿ 100 ಕೋಟಿ ಸಂಭಾವನೆ ಪಡೆಯುತ್ತಿರುವ ನಾಯಕ ನಟರು ಕೇವಲ 3-4 ಮಂದಿ. ನಟ ಪ್ರಭಾಸ್, ದಳಪತಿ ವಿಜಯ್, ರಾಮ್ ಚರಣ್ ತೇಜ್, ಅಲ್ಲು ಅರ್ಜುನ್. ಈ ಸಾಲಿಗೆ ನಟ ಮಹೇಶ್ ಬಾಬು ಅವರು ಕೂಡ ಶೀಘ್ರದಲ್ಲೇ ಸೇರಲಿದ್ದಾರೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net