More

    ಕೇವಲ ಐದು ಸೆಕೆಂಡ್ ಧ್ವನಿ ಕೊಟ್ಟಿದ್ದಕ್ಕೆ ಇಷ್ಟು ಕೋಟಿ ರೂ.?! ಅಬ್ಬಬ್ಬಾ ಎಂದ ನೆಟ್ಟಿಗರು

    ಆಂಧ್ರಪ್ರದೇಶ: ಇತ್ತೀಚೆಗಷ್ಟೇ ತೆರೆಕಂಡ ‘ಗುಂಟೂರು ಕಾರಂ’ ಚಿತ್ರದ ಮೂಲಕ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿ, ಸಿನಿಪ್ರೇಕ್ಷಕರನ್ನು ಮನರಂಜಿಸಿದ ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು, ಇದೀಗ ಒಂದು ಹೆಸರಾಂತ ಬ್ರ್ಯಾಂಡ್​ಗೆ ಕೇವಲ ಐದು ಸೆಕೆಂಡ್ ಧ್ವನಿ ನೀಡುವ ಮೂಲಕ ಬರೋಬ್ಬರಿ ಐದು ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಈ ಸಂಗತಿ ಅವರ ಅಭಿಮಾನಿಗಳು ಹಾಗೂ ಅನೇಕರ ಹುಬ್ಬೇರುವಂತೆ ಮಾಡಿದೆ.

    ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮದುವೆ ಪೂರ್ವ ಕಾರ್ಯಕ್ರಮಕ್ಕೆ ಜಾಮ್​ನಗರದಲ್ಲಿ ಸಿದ್ಧವಾಗಿದೆ ಭೂಲೋಕದ ಸ್ವರ್ಗ!

    ಬ್ರ್ಯಾಂಡ್ ಕಂಪನಿಗಳು ಅಧಿಕವಾಗಿ ದಕ್ಷಿಣ ಭಾರತದ ಸ್ಟಾರ್ ನಟ ಅಥವಾ ನಟಿಯರನ್ನು ಮುಖವಾಣಿಯಾಗಿ ಬಳಸಿಕೊಳ್ಳುವುದನ್ನು ಈ ಹಿಂದೆಯೂ ಅನೇಕ ಜಾಹಿರಾತು ಸೇರಿದಂತೆ ಇತರೆ ಪುಟಗಳಲ್ಲಿ ನೋಡಿದ್ದೇವೆ. ಸಾಮಾನ್ಯವಾಗಿ ದೊಡ್ಡ ಸಂಸ್ಥೆಗಳು ಮೊದಲು ಮುಖ ಮಾಡುವುದೇ ಸೌತ್​ ಸ್ಟಾರ್​ಗಳತ್ತ. ಈ ಪೈಕಿ ‘ಫೋನ್​ ಪೇ’ ಡಿಜಿಟಲ್ ಪೇಮೆಂಟ್ಸ್​​ ಬ್ರ್ಯಾಂಡ್​ ಟಾಲಿವುಡ್ ಸ್ಟಾರ್​ ಮಹೇಶ್ ಬಾಬು ಅವರನ್ನು ಐದು ಸೆಕಂಡ್​ ಧ್ವನಿಗಾಗಿ ಸಂಪರ್ಕಿಸಿದ್ದು, ತಮ್ಮ ಯುಪಿಐ ಅಪ್ಲಿಕೇಶನ್‌ಗೆ ವಾಯ್ಸ್​ ಸ್ವೀಕರಿಸಿದೆ.

    ಫೋನ್ ಪೆ ಯುಪಿಐಗೆ ಧ್ವನಿ ನೀಡಿದ ಪ್ರಿನ್ಸ್​, ಈ ಬ್ರ್ಯಾಂಡ್‌ಗಾಗಿ ಕೇವಲ 5 ಸೆಕೆಂಡ್‌ಗಳ ಧ್ವನಿ ನೀಡಿದ್ದಾರೆ. AI ರಚಿತ ಧ್ವನಿಯೊಂದಿಗೆ ಸಂಯೋಜಿಸಲಿರುವ ಈ ವಾಯ್ಸ್​ ಓವರ್​ಗಾಗಿ ನಟ ಮಹೇಶ್ ಬರೋಬ್ಬರಿ 5 ಕೋಟಿ ರೂ.ಗಳ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

    ಇದನ್ನೂ ಓದಿ: ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಅಖಿಲೇಶ್ ಸಾಥ್​

    ಸ್ಮಾರ್ಟ್ ಸ್ಪೀಕರ್‌ಗಳಲ್ಲಿನ ವಹಿವಾಟಿನ ಸಮಯದಲ್ಲಿ ಫೋನ್‌ಪೇ ಬಳಕೆದಾರರಿಗೆ ಮಹೇಶ್ ಬಾಬು ಅವರ ಧ್ವನಿ ಕೇಳಿಸಲಿದೆ. ಪಾವತಿ ಮಾಡಿದ ನಂತರ ಬಳಕೆದಾರರಿಗೆ “ಧನ್ಯವಾದಗಳು, ಬಾಸ್” ಎಂಬ ಧ್ವನಿ ಕೇಳಲಿದೆ. ತಮ್ಮ ಪಾವತಿಗಳು ಯಶಸ್ವಿಯಾಗಿ ಆಗಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಗ್ರಾಹಕರಿಗೆ ಭರವಸೆಯಾಗಿ ಈ ಆಯ್ಕೆಯನ್ನು ಸಂಸ್ಥೆ ಅಳವಡಿಸಿಕೊಂಡಿದೆ,(ಏಜೆನ್ಸೀಸ್).

    IPL 2024, CSK vs RCB: ಮೊದಲ ಪಂದ್ಯ ಸೋತರೂ ಆರ್​​ಸಿಬಿ ಫ್ಯಾನ್ಸ್​ ಕುಗ್ಗಲ್ಲ! ಬದಲಿಗೆ ಹೇಳೋದು ಮಾತ್ರ ಇದೊಂದೇ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts