ಕಂಗನಾ ವಿರುದ್ಧ ಮಾತನಾಡಿದ ಮಹಾರಾಷ್ಟ್ರ ಗೃಹಸಚಿವರಿಗೆ ಸಾಲು ಸಾಲು ಬೆದರಿಕೆ ಕರೆ..!

Anil
Published on

ಮುಂಬೈ: ಮುಂಬೈನಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವುತ್​ ಕಚೇರಿ ನೆಲಸಮ ಮಾಡುತ್ತಿರುವ ನಡುವೆಯೇ ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್​ ದೇಶ್​ಮುಖ್​ ಅವರಿಗೆ ಬೆದರಿಕೆ ಕರೆ ಬರುತ್ತಿರುವುದಾಗಿ ಬುಧವಾರ ವರದಿಯಾಗಿದೆ.

ಹಿಮಾಚಲ ಪ್ರದೇಶ ಹಾಗೂ ಬೇರೆ ಸ್ಥಳ ಮತ್ತು ಬೇರೆ ಬೇರೆ ನಂಬರ್​ನಿಂದ ಬೆದರಿಕೆ ಕರೆ ಬರುತ್ತಿದೆ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದು, ಕಂಗನಾ ವಿಚಾರದಲ್ಲಿ ಮೂಗು ತೂರಿಸದಂತೆ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ. ಮಂಗಳವಾರದಿಂದ ಇಲ್ಲಿಯವರೆಗೂ ಒಟ್ಟು 5 ಬೆದರಿಕೆ ಕರೆಗಳನ್ನು ಸಚಿವರು ಸ್ವೀಕರಿಸಿದ್ದು, ಬುಧವಾರ ಬೆಳಗ್ಗೆ 6 ಗಂಟೆ ಸಮಯದಲ್ಲೂ ಎರಡು ಬೆದರಿಕೆ ಕರೆಗಳು ಬಂದಿರುವುದಾಗಿ ಮೂಲಗಳು ತಿಳಿಸಿವೆ.

ಕರೆ ಮಾಡಿದವರಲ್ಲಿ ಓರ್ವ ತನ್ನನ್ನು ತಾನೂ ಮೃತ್ಯುಂಜಯ್​ ಗಾರ್ಗ್​ ಎಂದು ಪರಿಚಯಿಸಿಕೊಂಡಿದ್ದಾನೆ. ಕಂಗನಾ ವಿಚಾರದಲ್ಲಿ ಮೂಗು ತೀರಿಸದಂತೆ ಬೆದರಿಕೆ ಒಡ್ಡಿದ್ದಾರೆನ್ನಲಾಗಿದೆ.

ಇತ್ತೀಚೆಗೆ ಮಾತನಾಡಿದ್ದ ಕಂಗನಾ ಮೂವೀ ಮಾಫಿಯಾಗಿಂತ ಮುಂಬೈ ಪೊಲೀಸರನ್ನು ಕಂಡರೆ ಭಯವಾಗುತ್ತದೆ. ಹೀಗಾಗಿ ತನ್ನ ತವರು ರಾಜ್ಯ ಹಿಮಾಚಲ ಪ್ರದೇಶ ಅಥವಾ ಕೇಂದ್ರದಿಂದ ಭದ್ರತೆಗೆ ಆದ್ಯತೆ ನೀಡಿ ಎಂದಿದ್ದರು. ಇದರ ಬೆನ್ನಲ್ಲೇ ಮಾತನಾಡಿದ್ದ ದೇಶ್​ಮುಖ್​ ಮುಂಬೈನಲ್ಲಿ ರಕ್ಷಣೆ ಇಲ್ಲ ಎನ್ನುವವರು ರಾಜ್ಯದಲ್ಲಿ ಜೀವಿಸಲು ಯಾವುದೇ ಹಕ್ಕಿಲ್ಲ ಎಂದು ಕಿಡಿಕಾರಿದ್ದರು. ಅಲ್ಲದೆ, ಕೇಂದ್ರ ಸರ್ಕಾರ ಸೋಮವಾರ ಕಂಗನಾರಿಗೆ ವೈ-ಪ್ಲಸ್ ಭದ್ರತೆ ನೀಡಿದ್ದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು.​ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net