ಮಹಾರಾಷ್ಟ್ರದಲ್ಲಿ 3 ರೂಪಾಯಿಗೆ ಮಾಸ್ಕ್ ಸಿಗುತ್ತೆ !

Masks
Published on

ಮುಂಬೈ: ಕೋವಿಡ್ 19 ನಿಯಂತ್ರಿಸುವ ನಿಟ್ಟಿನಲ್ಲಿ ಮಾಸ್ಕ್ ಅಗತ್ಯವಸ್ತುವಾಗಿರುವ ಕಾರಣ, ಅದರ ದರ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಮಾಸ್ಕ್​ನ ಗುಣಮಟ್ಟ ಮತ್ತು ಮಾದರಿಗೆ ಅನುಗುಣವಾಗಿ ಗರಿಷ್ಠ ಮಾರಾಟ ದರವನ್ನು ಅದು ನಿಗದಿಪಡಿಸಿದೆ.

ಇದರಂತೆ, ಎರಡು ಪದರಗಳಿರುವ ಮಾಸ್ಕ್ ದರವನ್ನು 3 ರೂಪಾಯಿ, ಮೂರು ಪದರದ ಮಾಸ್ಕ್​ಗಳ ದರವನ್ನು 4 ರೂಪಾಯಿ ಮತ್ತು ಎನ್-95 ಮಾಸ್ಕ್ ದರವನ್ನು 19 ರೂಪಾಯಿಗೆ ಇಳಿಕೆಯಾಗಿದೆ. ಮಾಸ್ಕ್​ಗಳ ದರದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ನೀಡಿರುವ ವರದಿ ಪ್ರಕಾರ ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾಸ್ಕ್ ದರ ಶೇ. 437- ಶೇ. 575 ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಾಸ್ಕ್ ದರವನ್ನು ಪರಿಷ್ಕರಿಸಿದೆ.

ಅಲ್ಲದೆ, ಎಲ್ಲ ಮಾಸ್ಕ್ ಮೇಲೆ ಅದರ ಗುಣಮಟ್ಟ ಮತ್ತು ಎಂಆರ್​ಪಿ ಮುದ್ರಣ ಕಡ್ಡಾಯವೆಂದು ತಿಳಿಸಲಾಗಿದೆ. ಕರೊನಾ ಸೋಂಕನ್ನು ತಡೆಗಟ್ಟಲು ಮಾಸ್ಕ್ ಅತ್ಯವಶ್ಯಕ. ಕಡಿಮೆ ದರದಲ್ಲಿ ಮಾಸ್ಕ್ ಜನರಿಗೆ ಸಿಗಬೇಕೆಂದು ಸಮಿತಿ ರಚಿಸಲಾಗಿತ್ತು ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net