

ಪ್ರಯಾಗ್ರಾಜ್: ಹಾಲಿ ನಡೆಯುತ್ತಿರುವ ಮಹಾಕುಂಭ ಮೇಳವು (Mahakumbh Mela) ವಿಶ್ವವ್ಯಾಪಿ ಸದ್ದು ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪ್ರತಿನಿತ್ಯ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಿರುವ ಕುಂಭಮೇಳದಲ್ಲಿ ಕೆಲವು ಸ್ವಾರಸ್ಯಕರ ಘಟನೆಗಳು ನಡೆಯುತ್ತಿದ್ದು, ಇದೀಗ ವ್ಯಕ್ತಿಯೊಬ್ಬರು ತನ್ನ ಹೆಂಡತಿ ಮೂರು ಬಾರಿ ಕಳೆದು ಹೋದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗಿದೆ.
ಈ ಹಿಂದೆ ಅನೇಕ ಹಿಂದಿ ಸಿನಿಮಾಗಳಲ್ಲಿ ಕುಂಭಮೇಳದಲ್ಲಿ (Mahakumbh Mela) ಕುಟುಂಬಗಳು ಬೇರ್ಪಡುವುದನ್ನು ಸಾಮಾನ್ಯ ಕಥಾವಸ್ತುವಾಗಿತ್ತು. ಈ ರೀತಿಯ ಸಿನಿಮಾಗಳು ಕಡಿಮೆಯಾಗಿದ್ದರು ನಿಜಜೀವನದಲ್ಲಿ ಆಗಿಂದಾಗೆ ನಡೆಯುತ್ತಿರುತ್ತವೆ. ಇದೀಗ ವೃದ್ಧರೊಬ್ಬರು ತಮ್ಮ ಹೆಂಡತಿ ಕಳೆದು ಹೋದಾದ ಪೊಲೀಸರು ನಡೆದುಕೊಂಡ ರೀತಿಯನ್ನು ವಿವರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಕುಂಭಮೇಳದಲ್ಲಿ (Mahakumbh Mela) ನನ್ನ ಹೆಂಡತಿ ಮೂರು ಬಾರಿ ಮಿಸ್ ಆದಳು. ನಾನು ಪೊಲೀಸರಿಗೆ ದೂರು ನೀಢಿದೆ. ದೂರು ನೀಡಿದ ಅರ್ಧಗಂಟೆಯೊಳಗೆ ಹುಡುಕಿಕೊಟ್ಟಿರುವುದಾಗಿ ಹೇಳಿದ್ದು, ಪೊಲೀಸರ ಕಾರ್ಯವೈಖರಿಯನ್ನು ಹಾಡಿಹೊಗಳಿದ್ದಾರೆ. ಇದರ ಜೊತೆಗೆ ಪೊಲೀಸರ ಕಾರ್ಯವೈಖರಿಯ ಬಗ್ಗೆಯೂ ಅಸಮಾಧಾನ ಹೊರಹಾಕಿದ್ಧಾರೆ. ನನ್ನ ಹೆಂಡತಿಯನ್ನು ಅಷ್ಟು ಬೇಗ ಹುಡುಕಿದ್ದು ಸರಿಯೇ? ಇದೆಂಥಾ ವ್ಯವಸ್ಥೆ ಪೊಲೀಸರೇ ಎಂದು ಪ್ರಶ್ನಿಸಿದ್ಧಾರೆ.
ಈ ವ್ಯವಸ್ಥೆ ತುಂಬಾ ಕೆಟ್ಟದಾಗಿದೆ ಏಕೆಂದರೆ ಮೊದಲೆಲ್ಲಾ ಜನರು ಕುಂಭಮೇಳಕ್ಕೆ (Mahakumbh Mela) ಹೋದಾಗ ದಾರಿ ತಪ್ಪಿದ್ರೆ ಅವರನ್ನು ಹುಡುಕಲು 10-15 ವರ್ಷಗಳೇ ಬೇಕಾಗುತ್ತಿದ್ದವು. ಈ ಬಾರಿ ನಾವು ಕುಂಭಮೇಳಕ್ಕೆ ಹೋದಾಗ ನನ್ನ ಹೆಂಡ್ತಿ ಮೂರು ಬಾರಿ ಕಾಣೆಯಾಗಿದ್ದಳು. ಆದ್ರೆ ಪ್ರತಿ ಬಾರಿಯೂ ಆಕೆಯನ್ನು ಪೊಲೀಸರು ಅರ್ಧಗಂಟೆಯೊಳಗೆ ಹುಡುಕಿಕೊಟ್ಟಿದ್ದಾರೆ. ನಾನು ಹೇಗಾದರೂ ಆಕೆಯಿಂದ ತಪ್ಪಿಸಿಕೊಳ್ಳಬೇಕೆಂದು ಬಯಸಿದ್ದೆ, ಆದ್ರೆ ಅದೂ ಆಗಿಲ್ಲ, ಈ ಸಿಸ್ಟಮ್ ಸರಿಯೇ ಇಲ್ಲ ಎಂದು ಫನ್ನಿ ವಿಡಿಯೋ ಮಾಡಿ ಹಾಕಿದ್ಧಾರೆ.
ನಿತಿನ್ ಶುಕ್ಲಾ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವೆಗೆ 368.8ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ವೃದ್ಧರೊಬ್ಬರ ಈ ಫನ್ನಿ ಮಾತುಗಳಿಗೆ ನೆಟ್ಟಿಗರು ಫಿದಾ ಆಗಿದ್ದು, ನೀವು ಕಂಟೆಂಟ್ ಕ್ರಿಯೇಟರ್ ಆಗಿ ಎಂದು ಹಲವರು ಸಲಹೆ ನೀಡಿದ್ದಾರೆ. ತಾತ ತುಂಬಾ ದುಃಖವಾದಂತೆ ಕಾಣುತ್ತಿದೆ ಮತ್ತೊಬ್ಬರು ಕಮೆಂಟ್ ಹಾಕಿದ್ದಾರೆ.