ನಿಲ್ದಾಣದ ಬಳಿ ಅಂಟಿಸಿದ್ದ ಜಾಹಿರಾತು ತೆಗೆದ ವ್ಯಕ್ತಿಗೆ ಅಭಿನಂದನೆ ಸಲ್ಲಿಸಿದ ಮೆಟ್ರೋ... Metro

untitled-design-22-690c89d2c3a86
Published on

ಮುಂಬೈ: ಸಲೂನ್​ ಒಂದು ಜನರ ಗಮನ ಸೆಳೆಯುವ ಸಲುವಾಗಿ ಮೆಟ್ರೋ ( Metro )ಲೈನ್ 2B ಪಿಲ್ಲರ್ ಮೇಲೆ ಜಾಹೀರಾತಿನ ಪೋಸ್ಟರ್​ನ್ನು ಅಂಟಿಸಿದ್ದಕ್ಕಾಗಿ ಮಹಾ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ಸಲೂನ್​ಗೆ ದಂಡ ವಿಧಿಸಿರುವ ಘಟನೆ ಮುಂಬೈನಲ್ಲಿ ಗುರುವಾರ (ನ.06) ನಡೆದಿದೆ.

ಮುಂಬೈ ನಿವಾಸಿಯೊಬ್ಬರು ಸ್ವತಃ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಪೋಸ್ಟರ್ ಅನ್ನು ತೆಗೆದುಹಾಕಿದ್ದಾರೆ. ಈ ಘಟನೆಯು ನಾಗರಿಕ ಜವಾಬ್ದಾರಿಯನ್ನು ಪ್ರಶಂಸಿಸಲು ಮತ್ತು ಸಾರ್ವಜನಿಕ ಆಸ್ತಿಯನ್ನು ನಿರ್ವಹಿಸುವ ಬಗ್ಗೆ ಜಾಗೃತಿ ಮೂಡಿಸಲು ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರ ಕಾರ್ತಿಕ್ ನಾಡರ್ (@runkarthikrun) ಎಂಬುವವರು ಡಿಎನ್ ನಗರ ಮತ್ತು ಮಂಡಲೆ ನಡುವೆ ಚಲಿಸುವ ನಿರ್ಮಾಣ ಹಂತದಲ್ಲಿರುವ ಮುಂಬೈ ಮೆಟ್ರೋ ಲೈನ್ 2B ಯಲ್ಲಿ ಹೊಸದಾಗಿ ಅಲಂಕೃತಗೊಂಡಿದ್ದ ಕಂಬದ ಮೇಲೆ ಸಲೂನಿನ ಜಾಹಿರಾತನ್ನು ಅಂಟಿಸಿದ್ದರು. ಇದನ್ನು ಗಮನಿಸಿದ ಪ್ರಯಾಣಿಕ ನಾಡರ್ ಸ್ವತಃ ಅವರೇ ಪೋಸ್ಟರ್​ನ್ನು ತೆಗೆಯಲು ನಿರ್ಧರಿಸಿದ್ದರು.

ಈ ಕೃತ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ "ಯಾರೋ ಮೂರ್ಖರು ಮುಂಬೈ ಮೆಟ್ರೋ ಲೈನ್ 2B ಯ ಕಂಬದ ಮೇಲೆ ತನ್ನ ವ್ಯಾಪಾರ ಜಾಹೀರಾತನ್ನು ಅಂಟಿಸಿದ್ದರು. ನಾನು ಇದನ್ನು ಅಲ್ಲಿಂದ ತೆಗೆಯಲು ಬಯಸಿದೆ. ಏಕೆಂದರೆ, ಅಲ್ಲಿನ ಸೌಂದರ್ಯವನ್ನು ಹಾಳು ಮಾಡಲು ನನಗೆ ಇಷ್ಟವಿರಲಿಲ್ಲ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್​ನ್ನು ಹಂಚಿಕೊಂಡಿದ್ದರು.

ವೈರಲ್​ ಆದ ಪೋಸ್ಟ್​ಗೆ MMMOCL ಪ್ರತಿಕ್ರಿಯಿಸಿದ್ದು, ನಾದರ್​ ಅವರ ಸಾರ್ವಜನಿಕವಾಗಿ ಶ್ಲಾಘಿಸಿದ್ದು, ಮೆಟ್ರೋ ಕಂಬಗಳ ಮೇಲೆ ಜಾಹೀರಾತುಗಳ ಯುದ್ಧಗಳು ನಡೆಯುತ್ತಿವೆ. ಇದನ್ನು ತೆಗೆದುಹಾಕಿದ ನಾಗರಿಕ ನಾಯಕ ಕಾರ್ತಿಕ್ ನಾಡರ್ ಅವರಿಗೆ ದೊಡ್ಡ ಅಭಿನಂದನೆಗಳು ಎಂದು ಸಂಸ್ಥೆಯು ಬರೆದಿತ್ತು.

ಮೆಟ್ರೋ ಆವರಣದಲ್ಲಿ ಅಕ್ರಮ ಪೋಸ್ಟರ್‌ಗಳು ಅಥವಾ ಜಾಹೀರಾತು ಫಲಕಗಳನ್ನು ಹಾಕುವುದು ಗಂಭೀರ ತಪ್ಪಾಗಿದ್ದು, 2002 ರ ಸೆಕ್ಷನ್ 62(2) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಸಲೂನ್​ಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net