ವಿಟಮಿನ್​ ಡಿ ಕೊರತೆಗೆ ಕಾರಣ ಏನು? ಅದರಿಂದ ಪಾರಾಗಲು ಈ ಮಾರ್ಗಗಳನ್ನು ಪಾಲಿಸಿ! Vitamin D

Vitamin D vvani
Published on

Vitamin D : ಇಂದಿನ ಕಾಲಮಾನದಲ್ಲಿ ಜನರು ಪ್ರತಿದಿನ ಆಯಾಸ ನಿರಂತರ ಬೆನ್ನು ನೋವು ಅಥವಾ ಸ್ನಾಯು ದೌರ್ಬಲ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದು ಕೇವಲ ದೈಹಿಕ ಆಯಾಸದ ಲಕ್ಷಣಗಳಲ್ಲ ಬದಲಾಗಿ ದೇಹದಲ್ಲಿನ ಒಂದು ಅಗತ್ಯ ಅಂಶದ ಕೊರತೆಯನ್ನು ಸೂಚಿಸುತ್ತದೆ. ವಿಶೇಷವಾಗಿ ಇದರೊಂದಿಗೆ ನಿರಂತರ ಮನಸ್ಥಿತಿ ಬದಲಾವಣೆ, ಕೂದಲು ಉದುರುವುದು, ದೇಹದಲ್ಲಿನ ಗಾಯಗಳು ನಿಧಾನವಾಗಿ ಗುಣವಾಗುವುದು ಹಾಗೆಯೇ ಆಗ್ಗಾಗೆ ಶೀತ, ಕೆಮ್ಮು ಕಾಣಿಸಿಕೊಂಡರೆ ಇದು ನಿಮ್ಮ ದೇಹದಲ್ಲಿ ವಿಟಮಿನ್​ ಡಿ ಕೊರತೆಯೇ ಕಾರಣ ಎಂದು ತಿಳಿದುಬರುತ್ತದೆ.

ಇತ್ತೀಚಿನ ಸಮೀಕ್ಷೆಯೊಂದು ಭಾರತದಲ್ಲಿ ಸುಮಾರು ಅರ್ಧದಷ್ಟು ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ತೋರಿಸಿದೆ. ಇದು ನಗರ ಜೀವನಶೈಲಿ, ಕಚೇರಿಗಳಲ್ಲಿ ಎಸಿ ಬಳಕೆ ಮತ್ತು ಬೆಳಗ್ಗೆ ಸೂರ್ಯನ ಬೆಳಕಿನಲ್ಲಿ ಕಡಿಮೆ ಸಮಯ ಕಳೆಯುವುದರಿಂದ ಈ ಸಮಸ್ಯೆಗಳು ಬರಲಾರಂಭಿಸುತ್ತವೆ. ಈ ಕೊರತೆಯನ್ನು ನಿರ್ಲಕ್ಷಿಸಿದರೆ, ಗಂಭೀರ ಮೂಳೆ ಮತ್ತು ಹಾರ್ಮೋನುಗಳ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ದೇಹದಲ್ಲಿ ವಿಟಮಿನ್ ಡಿ ಯ ಮಹತ್ವವೇನು?

ವಿಟಮಿನ್ ಡಿ ದೇಹದಲ್ಲಿ ಅತ್ಯಂತ ಮಹತ್ವದ ಪೋಷಕಾಂಶವಾಗಿದೆ. ಇದು ಕ್ಯಾಲ್ಸಿಯಂ ಮತ್ತು ಫಾಸ್ಫರಸ್‌ನ ಶೋಷಣೆಯನ್ನು ಸುಗಮಗೊಳಿಸಿ, ಮೂಳೆಗಳು ಮತ್ತು ದಂತಗಳ ಆರೋಗ್ಯವನ್ನು ಕಾಪಾಡುತ್ತದೆ. ಚಿಕ್ಕ ಮಕ್ಕಳಲ್ಲಿ, ವಿಟಮಿನ್​ ಡಿ ಮೂಳೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇದನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಅಧ್ಯಯನದ ಪ್ರಕಾರ, ಭಾರತದಲ್ಲಿ 13-18 ವಯಸ್ಸಿನ ಮಕ್ಕಳು ವಿಟಮಿನ್ ಡಿ ಕೊರತೆಯಿಂದ ಹೆಚ್ಚು ಬಳಲುತ್ತಿದ್ದಾರೆ ಎಂದು ತೋರಿಸಿದೆ.

ಸರಿಸುಮಾರು ಶೇ.67 ರಷ್ಟು ಹದಿಹರೆಯದವರು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದಾರೆ. ವಿಟಮಿನ್ ಡಿ ಕೊರತೆಯ ಹರಡುವಿಕೆಯು ಮಹಿಳೆಯರಲ್ಲಿ ಶೇ.46.9 ಮತ್ತು ಪುರುಷರಲ್ಲಿ ಶೇ. 45.8 ಬಹುತೇಕ ಸಮಾನವಾಗಿರುವುದು ಕಂಡುಬಂದಿದೆ.

ವಿಟಮಿನ್​ ಡಿ ಪಡೆಯಲು ಈ ರೀತಿ ಮಾಡಿ

1. ಬೆಳಗಿನ ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯಿರಿ

ವೈದ್ಯರ ಪ್ರಕಾರ, ಪ್ರತಿದಿನ ಬೆಳಿಗ್ಗೆ 7.30 ರಿಂದ 9.30 ರವರೆಗೆ 15 ರಿಂದ 20 ನಿಮಿಷಗಳ ಕಾಲ ಸೌಮ್ಯವಾದ ಸೂರ್ಯನ ಬೆಳಕಿನಲ್ಲಿ ಕಾಲ ಕಳೆಯುವುದರಿಂದ ವಿಟಮಿನ್​ ಡಿ ಅನ್ನು ಉತ್ಪಾದಿಸುತ್ತದೆ. ಬಹಳ ಮುಖ್ಯವಾಗಿ ಕೈಗಳು, ಪಾದಗಳು ಮತ್ತು ಸೂರ್ಯನ ಕಿರಣಗಳು ದೇಹಕ್ಕೆ ಒಡ್ಡಿಕೊಳ್ಳಿ. ಇದರಿಂದ ಕ್ರಮೇಣ ನಿಮ್ಮ ದೇಹದಲ್ಲಿ ವಿಟಮಿನ್​ ಡಿ ತುಂಬುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

2. ಎಳ್ಳೆಣ್ಣೆಯಿಂದ ಮಸಾಜ್ ಮಾಡಿ

ನಿಮ್ಮ ಚರ್ಮವು ಒಣಗಿದ್ದರೆ ಅಥವಾ ಸೂಕ್ಷ್ಮವಾಗಿದ್ದರೆ ಇದು ಸೂರ್ಯನ ಬೆಳಕನ್ನು ಹೀರಿಕೊಳ್ಳಲು ಸಾಧ್ಯವಿಲ್ಲ. ಆದರಿಂದ ಬೆಳಿಗ್ಗೆ ಸ್ನಾನ ಮಾಡುವುದಕ್ಕಿಂತ ಮುಂಚೆ ಎಣ್ಣೆಯಿಂದ ಮಸಾಜ್​ ಮಾಡಿ. ಇದು ಸೂರ್ಯನ ಬೆಳಕನ್ನು ಹೀರಿಕೊಳ್ಳಲು ಸಹಾಯ ಮಾಡಿ, ವಿಟಮಿನ್ ಡಿ ಉತ್ಪಾದನೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಈ ವಿಧಾನವು ಚಳಿಗಾಲದಲ್ಲಿ ವಿಶೇಷವಾಗಿ ಉಪಯುಕ್ತವಾಗಿದೆ. ಏಕೆಂದರೆ ಇದು ರಕ್ತಪರಿಚಲನೆಯನ್ನು ಮಾಡುತ್ತದೆ.

3. ಆಹಾರದಲ್ಲಿ ನೈಸರ್ಗಿಕ ಮೂಲಗಳನ್ನು ಸೇರಿಸಿ

ನಾವು ಸೇವಿಸುವ ಆಹಾರದಲ್ಲಿ ನೇರವಾಗಿ ವಿಟಮಿನ್ ಡಿ ಪಡೆಯುವುದು ಕಷ್ಟವಾದರೂ, ಕೆಲವು ಆಹಾರಗಳು ವಿಟಮಿನ್​ ಡಿ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಬಿಸಿಲಿನಲ್ಲಿ ಒಣಗಿದ ಅಣಬೆಗಳು, ಕಪ್ಪು ಎಳ್ಳು, ತುಪ್ಪ ಮತ್ತು ಬಾದಾಮಿಯು ವಿಟಮಿನ್​ ಡಿಗಳನ್ನು ಸಮೃದ್ಧವಾಗಿ ಹೊಂದಿರುತ್ತದೆ. ಇದು ಡೈರಿ ಉತ್ಪನ್ನಗಳಾದ ಹಾಲು, ಮೊಸರು ಮೀನು, ಮೊಟ್ಟೆಗಳನ್ನು ತಿನ್ನುವುದರಿಂದ ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

4. ಈ ಅಭ್ಯಾಸಗಳಿಂದ ದೂರವಿರಿ

ಸೂರ್ಯನ ಬೆಳಕು ಕಡಿಮೆಯಾದ ತಕ್ಷಣ ಸ್ನಾನ ಮಾಡಬೇಡಿ. ಏಕೆಂದರೆ ಚರ್ಮಕ್ಕೆ ತಾಗುವ ಬೆಳಕನ್ನು ವಿಟಮಿನ್ ಡಿ ಆಗಿ ಪರಿವರ್ತಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೆಚ್ಚು ಕೆಫೀನ್ ಸೇವಿಸುವುದರಿಂದ ವಿಟಮಿನ್​ ಕೊರತೆ ಕಡಿಮೆಯಾಗುತ್ತದೆ. ವಿಟಮಿನ್​ ಡಿ ಕೊಬ್ಬಿನಲ್ಲಿ ಕರಗುವುದರಿಂದ ನಿಮ್ಮ ಆಹಾರದಲ್ಲಿ ಕೊಬ್ಬನ್ನು ಸೇರಿಸಿ ಇದು ವಿಟಮಿನ್​ ಡಿ ಪಡೆಯಲು ಸಹಾಯವಾಗುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net