ಭಾರತೀಯ ಉತ್ಪನ್ನಗಳನ್ನು ಖರೀದಿಸುವಂತೆ ಜನರಿಗೆ ಆಹ್ವಾನ ನೀಡಿದ ಮಧ್ಯಪ್ರದೇಶದ ಸಚಿವ ವಿಶ್ವಾಸ್ ಸಾರಂಗ್! | Vishwas Sarang

untitled-design-2025-09-20t145513835-68ce730eae2a2
Published on

Vishwas Sarang: ಮಧ್ಯಪ್ರದೇಶದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ವಿಶ್ವಾಸ್ ಸಾರಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ 'ಮೇಡ್ ಇನ್ ಇಂಡಿಯಾ' ಕರೆಯನ್ನು ಅನುಸರಿಸಿ, ನರೇಲಾ ವಿಧಾನಸಭಾ ಕ್ಷೇತ್ರದಲ್ಲಿ ಸ್ವದೇಶಿ ಉತ್ಪನ್ನಗಳ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡರು.ಹಾಗೇ ಈ ವೇಳೆ ಅಲ್ಲಿನ ವ್ಯಾಪಾರಿಗಳೊಂದಿಗೆ ಜೊತೆಗೂಡಿ, ಅಂಗಡಿಗಳಲ್ಲಿ 'ಸ್ವದೇಶಿ ವಸ್ತುಗಳ' ಬೋರ್ಡ್‌ಗಳನ್ನು ಅಂಟಿಸಿ, ಭಾರತೀಯ ಉತ್ಪನ್ನಗಳನ್ನು ಮಾತ್ರ ಖರೀದಿಸುವಂತೆ ಜನರನ್ನು ಆಹ್ವಾನಿಸಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಮಧ್ಯಪ್ರದೇಶದ ಭೋಪಾಲ್ ನರೇಲಾ ಕ್ಷೇತ್ರದಲ್ಲಿ ಈ ಅಭಿಯಾನವನ್ನು ನಡೆಸಲಾಯಿತು. ಈ ವೇಳೆ ಸಚಿವ ಸಾರಂಗ್​ ಸ್ವತಃ ಅವರೇ ಪ್ರತಿಯೊಂದು ಮಳಿಗೆಗಳಿಗೂ ಭೇಟಿ ನೀಡಿ ಸ್ವದೇಶಿ ವಸ್ತುಗಳ ಪೋಸ್ಟರ್​ ಅಂಟಿಸಿದರು. ಇನ್ನು ಅಂಗಡಿ ಮಾಲೀಕರು ಸ್ವದೇಶಿ ಉತ್ಪನ್ನಗಳನ್ನು ಮಾರಾಟ ಮಾಡಿದುದ್ದಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುದ್ದಿ ಮೂಲಗಳೊಂದಿಗೆ ಮಾತನಾಡಿದ ಸಾರಂಗ್​, ಗೌರವಾನ್ವಿತ ಪ್ರಧಾನ ಮಂತ್ರಿಗಳು ಪ್ರತಿಯೊಬ್ಬರೂ ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕೆಂದು ಮನವಿ ಮಾಡಿದ್ದಾರೆ. ಇದು ನಮ್ಮದೊಂದು ಚಿಕ್ಕ ಪ್ರಯತ್ನ. ಇಂದು ಮಾರುಕಟ್ಟೆಯಲ್ಲಿರುವ ಪ್ರತಿಯೊಬ್ಬರೂ ಈ ಅಭಿಯಾನಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಆದರೆ, ಕೆಲವು ಅಂಗಡಿಗಳಲ್ಲಿ ಇನ್ನೂ ವಿದೇಶಿ ಉತ್ಪನ್ನಗಳು ಲಭ್ಯವಿದೆ. ಕ್ರಮೇಣ ಎಲ್ಲಾ ಸ್ವದೇಶಿ ವಸ್ತುಗಳ ಕಡೆಗೆ ಬದಲಾಗುವಂತೆ ನೋಡಿಕೊಳ್ಳಲು ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಪೂರ್ವ ಯುದ್ಧದ ನೆನಪು

ಭಾರತದಲ್ಲಿ ಮೊದಲ ಬಹಿಷ್ಕಾರ ಚಳುವಳಿಯು ಸಾಮಾನ್ಯವಾಗಿ 1905 ರಿಂದ 1908 ರಲ್ಲಿ ಭಾರತದಲ್ಲಿ ನಡೆಸಲಾದ ಸ್ವದೇಶಿ ಮತ್ತು ಬಹಿಷ್ಕಾರ ಚಳುವಳಿಯನ್ನು ಉಲ್ಲೇಖಿಸುತ್ತದೆ. ಇದು ಬಂಗಾಳದ ಬ್ರಿಟಿಷ್ ವಿಭಜನೆಗೆ ಪ್ರತಿಕ್ರಿಯೆಯಾಗಿ ಈ ಚಳುವಳಿಯನ್ನು ಪ್ರಾರಂಭಿಸಲಾಯಿತು. ಇದು ಒಂದು ಪ್ರಮುಖ ರಾಜಕೀಯ ಪ್ರತಿಭಟನೆಯಾಗಿದ್ದು, ಭಾರತೀಯರು ಬಟ್ಟೆ ಮತ್ತು ಉಪ್ಪಿನಂತಹ ಬ್ರಿಟಿಷ್ ಸರಕುಗಳನ್ನು ತಿರಸ್ಕರಿಸಿ ಸ್ವದೇಶಿ ಉತ್ಪನ್ನಗಳ ಬಳಸುವಂತೆ ಆಂದೋಲನ ನಡೆಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net