ಹೆಂಡತಿಯ ಮೃತದೇಹ ಫ್ರೀಜ್​ನಲ್ಲಿಟ್ಟ ಗಂಡ: ಬಾವನ ಮೇಲೆ ಹತ್ಯೆ ಆರೋಪ ಹೊರಿಸಿದ ಬಾಮೈದ

freez
Published on

ರೇವಾ: ಮನೆಯ ಫ್ರೀಜ್​​ನಲ್ಲಿ ಇರಿಸಲಾಗಿದ್ದ ಮಹಿಳೆಯ ಶವವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಗ್ಯಾರಂಟಿ ಪರಿಣಾಮ ಆರು ತಿಂಗಳಲ್ಲಿ ತಿಳಿಯುತ್ತೆ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿಕೆ

ಮೃತ ಮಹಿಳೆಯನ್ನು ಸುಮಿತ್ರಿ (40) ಎಂದು ಗುರುತಿಸಲಾಗಿದ್ದು, ಭಾನುವಾರದಂದು ಈ ಘಟನೆ ನಡೆದಿದೆ, ಮೃತ ಮಹಿಳೆಯ ಸಹೋದರ ಅಭಯ್ ತಿವಾರಿ, ತನ್ನ ಅಕ್ಕನ ಗಂಡ ಭರತ್ ಮಿಶ್ರಾ ಆಕೆಯನ್ನು ಹತ್ಯೆಗೈದು ಮೌನವಾಗಿ ಕುಳಿತಿದ್ದಾನೆ ಎಂದು ಆರೋಪಿಸಿದ್ದಾನೆ.

ಆದರೆ ಭರತ್ ಮಿಶ್ರಾ ಈ ಆರೋಪವನ್ನು ತಳ್ಳಿ ಹಾಕಿದ್ದು, ತನ್ನ ಹೆಂಡತಿ ಕಾಮಾಲೆಯಿಂದ ಜೂನ್ 30ರಂದು ಸತ್ತಿದ್ದಳು. ಆಕೆಯ ಅಂತ್ಯಕ್ರಿಯೆಗಾಗಿ ತನ್ನ ಮಗ ಮುಂಬೈನಿಂದ ರೇವಾಗೆ ಬರಬೇಕಿತ್ತು. ಈ ಹಿನ್ನೆಲೆ ತಾನು ಆಕೆಯ ಮೃತದೇಹವನ್ನು ಫ್ರೀಜ್​ನಲ್ಲಿ ಇರಿಸಿದ್ದೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ತೆರವಾಗದ ಆಕ್ರಮಿತ ಸರ್ಕಾರಿ ಜಾಗ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆರೋಪ

ಈ ಕುರಿತು ಮಾತನಾಡಿದ ಪೊಲೀಸರು, ಮೃತ ಮಹಿಳೆಯ ಸಹೋದರನು ಆಕೆಯ ಪತಿಯ ಮೇಲೆ ಗಂಭೀರ ಆರೋಪವನ್ನು ಹೊರಿಸಿದ್ದು, ನಾವು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈಗಾಗಲೇ ನಾವು ಮಹಿಳೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಮುಂದಿನ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net