ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಾಗ ಕಹಿ ಘಟನೆಯೊಂದನ್ನು ಬಿಚ್ಚಿಟ್ಟ ಮಾಧುರಿ ದೀಕ್ಷಿತ್​: ಹಿಂದಿನ ಚಿತ್ರರಂಗದಲ್ಲಿ ಹೀಗಿತ್ತು ಎಂದ ಧಕ್​ ಧಕ್​ ಬೆಡಗಿ

MadhuriDixith
Published on

ಮುಂಬೈ: ಸಿನಿಮಾ ರಂಗವೇ ಹಾಗೇ ನಾಯಕಿಯ ಮೈಮಾಟದ ಮೇಲೆಯೇ ಎಲ್ಲವೂ ನಿರ್ಧಾರವಾಗಿರುತ್ತದೆ. ಇಲ್ಲಿ ಆಕೆಯ ದೇಹ ಸೌಂದರ್ಯವೇ ಪ್ರಧಾನವಾಗಿರುತ್ತದೆ. ಚಿತ್ರದ ನಾಯಕಿ ಎಂದಮೇಲೆ ಸೀಮಿತ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯೂ ಇರುತ್ತದೆ.

ಚಿತ್ರ ವೀಕ್ಷಿಸುವವರು ಚಿತ್ರದಲ್ಲಿ ನಾಯಕಿ ಯಾರು ಎಂಬುದನ್ನು ಮೊದಲೇ ಲೆಕ್ಕ ಹಾಕಿಕೊಂಡು ಸಿನಿಮಾ ನೋಡುವವರೇ ಹೆಚ್ಚು. ಇಂತಹವರ ಸಂಖ್ಯೆ ಇಂದಿಗೂ ಕಡಿಮೇಯೇನಲ್ಲ. ಇನ್ನು ಎರಡು ದಶಕಗಳ ಹಿಂದಿನ ಸಿನಿಮಾ ಜಗತ್ತೇ ಬೇರೆಯಾಗಿತ್ತು. ಅಂದು ಚಿತ್ರಕ್ಕೆ ನಾಯಕಿಯಾಗುವವರಿಗೆ ಹೆಚ್ಚಿನ ಕಟ್ಟು ಪಾಡುಗಳಿತ್ತು. ಈ ಬಗ್ಗೆ ಬಾಲಿವುಡ್​​ನ ಖ್ಯಾತ ನಟಿ ಮಾಧುರಿ ದೀಕ್ಷಿತ್​ ಹೀಗೇ ಹೇಳಿದ್ದಾರೆ.

ತುಂಬಾ ಸಣ್ಣಗಿದ್ದರಿಂದಲೇ ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದೇನೆ. ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಮೊದ ಮೊದಲು ಪರದಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

1984ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ಮಾಧುರಿ ತುಂಬಾ ಸಣ್ಣ ವಯಸ್ಸಿನವರಾಗಿದ್ದರು. ಇಷ್ಟು ಸಣ್ಣ ಇರುವ ಈಕೆಯನ್ನು ಏನಾದರೂ ತಿನ್ನಿಸಿ ದಪ್ಪ ಮಾಡಿ ಎಂದು ಹಲವರು ಹೇಳುತ್ತಿದ್ದಾರೆ. ನಂತರ ನನ್ನ ಸಿನಿಮಾದಲ್ಲಿ ನಟನೆಯನ್ನು ನೋಡಿ ಜನ ಇಷ್ಟಪಟ್ಟಿದ್ದರು ಎಂದು ಹೇಳಿದ್ದಾರೆ.

ಇಂದಿನ ದಿನಗಳಲ್ಲಿ ಸಿನಿಮಾ ರಂಗಕ್ಕೆ ಬರಲು ಅಷ್ಟು ಕಷ್ಟವೇನಿಲ್ಲ. ಅಂತಹ ತೊಂದರೆಯೂ ಅನುಭವಿಸುವ ಸ್ಥಿತಿಯೇನಿಲ್ಲ. ಆದರೆ ನಾವು ಇದರಿಂದ ಹೊರಬರದೇ ಮುನ್ನಡೆಯಬೇಕು ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net