ಆಕೆಯನ್ನು ಬಹಳ ಗೌರವಿಸುತ್ತೇನೆ.. ಮಾತನಾಡಲು ಅವಕಾಶವೇ ಸಿಗಲಿಲ್ಲ; Madhuri Dixit ಹೀಗೇಳಿದ್ದು ಯಾರಿಗೆ?

Untitled design - 2024-11-19T154713.004
Published on

ಮುಂಬೈ: 90ರ ದಶಕದಲ್ಲಿ ಬಾಲಿವುಡ್‌ನಿಂದ ನಾಯಕಿಯರ ನಡುವಿನ ಪೈಪೋಟಿಯ ಸುದ್ದಿ ಆಗಾಗ ಬರುತ್ತಿತ್ತು. ಆ ಸಮಯದಲ್ಲಿ ಮಾಧುರಿ ದೀಕ್ಷಿತ್(Madhuri Dixit) ಮತ್ತು ಶ್ರೀದೇವಿ ನಡುವೆ ಪೈಪೋಟಿ ಏರ್ಪಟ್ಟಿತ್ತು ಎಂಬ ವದಂತಿಗಳು ಇವೆ. ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್ ಇಬ್ಬರೂ ತಮ್ಮ ಕಾಲದ ಟಾಪ್ ನಾಯಕಿಯರು. ಹಲವು ಊಹಾಪೋಹಗಳಿಗೆ ಉತ್ತರಿಸುವಂತೆ ಇದೀಗ ಮಾಧುರಿ ದೀಕ್ಷಿತ್ ಶ್ರೀದೇವಿ ಜತೆಗಿನ ಪೈಪೋಟಿ ಕುರಿತು ಮೌನ ಮುರಿದಿದ್ದಾರೆ.

ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಮಾಧುರಿ ದೀಕ್ಷಿತ್​​​, ಶ್ರೀದೇವಿಯನ್ನು ನಾನು ತುಂಬಾ ಗೌರವಿಸುತ್ತೇನೆ. ಇಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ನಿರತರಾಗಿದ್ದರಿಂದ ಇಬ್ಬರಿಗೂ ಮಾತನಾಡಲು ಅವಕಾಶವೇ ಸಿಗಲಿಲ್ಲ ಎಂದು ಹೇಳಿದ್ದಾರೆ. ನಾನು ಮತ್ತು ಶ್ರೀದೇವಿ ಎಂದಿಗೂ ಒಟ್ಟಿಗೆ ಕೆಲಸ ಮಾಡಿಲ್ಲ. ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಗೌರವಿಸುತ್ತಿದ್ದೆವು. ಒಬ್ಬ ನಟಿಯಾಗಿ ನಾನು ಅವರ ಬಗ್ಗೆ ಗೌರವವನ್ನು ಹೊಂದಿದ್ದೇನೆ. ಏಕೆಂದರೆ ಅವರು ಬಹು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ ಜತೆಗೆ ಅವುಗಳಲ್ಲಿ ಯಶಸ್ವಿಯಾಗಿದ್ದಾರೆ. ಅದು ಅದ್ಭುತವಾಗಿದೆ. ಅವರು ನನ್ನ ಜತೆಗೆ ಒಳ್ಳೆಯತನದಲ್ಲೇ ಇದ್ದರು ಎಂದು ತಿಳಿಸಿದರು.

ಮಾಧುರಿ ದೀಕ್ಷಿತ್ ಪುಕಾರ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರವನ್ನು ಶ್ರೀದೇವಿ ಮತ್ತು ಬೋನಿ ಕಪೂರ್ ನಿರ್ಮಿಸಿದ್ದಾರೆ. ಆದರೆ ಈ ಸಿನಿಮಾ ಸೆಟ್​​ನಲ್ಲೂ ನಾವಿಬ್ಬರೂ ಭೇಟಿಯಾಗಲಿಲ್ಲ. ಶ್ರೀದೇವಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದರು ಮತ್ತು ನಾನು, ನನ್ನ ಪಾತ್ರದ ಮೇಲೆ ಗಮನ ಕೇಂದ್ರೀಕರಿಸಿದ್ದೆ ಎಂದು ಹೇಳಿದರು. ಇದರಿಂದಾಗಿ ಇಬ್ಬರ ನಡುವೆ ಮಾತುಕತೆ ನಡೆಯುವುದು ಕಡಿಮೆ. ನಮಗೆ ಹೆಚ್ಚು ಮಾತನಾಡಲು ಅವಕಾಶವೇ ಸಿಗಲಿಲ್ಲ ಎಂದು ಹೇಳಿದರು.

ಇತ್ತೀಚೆಗೆ ಮಾಧುರಿ ದೀಕ್ಷಿತ್​​​ ಭೂಲ್ ಭುಲೈಯಾ 3 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಕಾರ್ತಿಕ್ ಆರ್ಯನ್, ತೃಪ್ತಿ ದಿಮ್ರಿ ಮತ್ತು ವಿದ್ಯಾ ಬಾಲನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net